ಸಾಮಾಜಿಕ ಅಂತರ ಕಾಪಾಡದ ಅಂಗಡಿಗಳಿಗೆ ಪೊಲೀಸರು ದಂಡ


ಬೇಲೂರು ಪಟ್ಟಣದ ಅಂಗಡಿಗಳ ಮುಂದೆ  ೩ ಅಡಿ ಅಂತರದಲ್ಲಿ ಬಾಕ್ಸ್ ನರ‍್ಮಾಣ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳದಿದ್ದರೆ ಪ್ರಕೃತಿ ವಿಕೋಪ ನಿಯಮ ಉಲ್ಲಂಘನೆಯಡಿ ಪ್ರಕರಣ ದಾಖಲಿಸಬೇಕಾಗುತ್ತದೆ ಎಂದು ಪಿಸಿಐ  ಎಸ್.ಜಿ ಪಾಟೀಲ್ ಎಚ್ಚರಿಕೆ ನೀಡಿದರು .

 ಪಟ್ಟಣದ ಮುಖ್ಯ ರಸ್ತೆಯ ಇಕ್ಕೆಲಗಳ ಅಂಗಡಿಗಳಲ್ಲಿ ೩ ಅಡಿ ಅಂತರದಲ್ಲಿ ಬಾಕ್ಸ್ ನರ‍್ಮಾಣ ಮಾಡದಿರುವ ಮಾಲೀಕರಿಗೆ ಎಚ್ಚರಿಕೆ ಹಾಗೂ ದಂಡ ವಿಧಿಸಿದ ನಂತರ ಮಾತನಾಡಿ  ೩ ದಿವಸಗಳ ಹಿಂದೆ ಜನಸಂರ‍್ಕ ಸಭೆಯಲ್ಲಿ ರ‍್ತಕರನ್ನು ಕರೆದು ೩ ಅಡಿ ಅಂತರದಲ್ಲಿ ಬಾಕ್ಸ್ ಹಾಕಿ ಸಾಮಾಜಿಕ ಅಂತರ ಕಾಪಾಡಿಕೊಂಡು ಹೋಗುವಂತೆ ಕಟ್ಟುನಿಟ್ಟಾಗಿ ಸೂಚನೆ ನೀಡಲಾಗಿತ್ತು . ಅಲ್ಲದೆ ಅವರಿಗೆ ೨ ದಿನ ಕಾಲಾವಕಾಶವನ್ನು ಕೂಡ ಕೊಡಲಾಗಿತ್ತು . ಪಟ್ಟಣದಲ್ಲಿ  ಶೇ.೬೦ ರಷ್ಟು ಅಂಗಡಿಗಳಲ್ಲಿ ಮಾತ್ರ ಬಾಕ್ಸ್ ಹಾಕಿದ್ದು ಉಳಿದವರು ನರ‍್ಲಕ್ಷ್ಯ ತೋರಿದ್ದು ಅವರಿಗೆ ಎಚ್ಚರಿಕೆ ಹಾಗೂ ದಂಡ ವಿಧಿಸಲಾಗುತ್ತಿದೆ ಎಂದರು .

ಈಗಾಗಲೇ ಕೊರೋನಾ ಎರಡನೆ ಅಲೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಸಾಮಾಜಿಕ ಅಂತರ ಹಾಗೂ ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಎಲ್ಲರ ರ‍್ತವ್ಯ . ರ‍್ಕಾರದ ಆದೇಶ ಪಾಲಿಸದಿದ್ದರೆ ಪ್ರಕೃತಿ ವಿಕೋಪ ನಿಯಮ ಉಲ್ಲಂಘನೆಯಡಿ ಮತ್ತು ಸಾಂಕ್ರಾಮಿಕ ತಡೆಗಟ್ಟುವಿಕೆ ಕಾಯ್ದೆಯಡಿ ಪ್ರಕರಣ ದಾಖಲು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು .  ಪೋಲಿಸ್ ಸಿಬ್ಬಂದಿಗಳು ಹಾಜರಿದ್ದರು.




Post a Comment

Previous Post Next Post