© ಹಾಸನ ಸೀಮೆ ನ್ಯೂಸ್
ಬೆಂಗಳೂರು, ಏಪ್ರಿಲ್ 29 : ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆಯಲ್ಲಿ 2016-17ನೇ ಸಾಲಿನಲ್ಲಿ ಬಾಕಿ ಉಳಿದಿದ್ದ ಅಗ್ನಿಶಾಮಕ - 660, ಅಗ್ನಿಶಾಮಕ ಚಾಲಕ 176 ಮತ್ತು ಚಾಲಕ ತಂತ್ರಜ್ಞ -447 ಹಾಗೂ 2014-15 ಮತ್ತು 2015-16ನೇ ಸಾಲುಗಳಲ್ಲಿ ವಿವಿಧ ಕಾರಣಗಳಿಂದಾಗಿ ಬಾಕಿ ಉಳಿದಿದ್ದ 387 ಮತ್ತು ಹೈದ್ರಾಬಾದ್ ಕರ್ನಾಟಕ ಪ್ರದೇಶದಲ್ಲಿ ಪ್ರಸ್ತುತ ಖಾಲಿಯಿರುವ ಅಗ್ನಿಶಾಮಕ ಠಾಣಾಧಿಕಾರಿ -10, ಅಗ್ನಿಶಾಮಕ -239, ಅಗ್ನಿಶಾಮಕ ಚಾಲಕ-28 ಮತ್ತು ತಂತ್ಜ್ಞ -20 ಹೀಗೆ ಒಟ್ಟು 1567 ಹುದ್ದೆಗಳಿಗೆ ನೇಮಕಾತಿಯನ್ನು ಪಾರದರ್ಶಕತೆಯಿಂದ ನಡೆಸಲಾಗಿದೆ.
ಒಟ್ಟು ವಿವಿಧ ದರ್ಜೆಯ 1567 ಖಾಲಿ ಹುದ್ದೆಗಳಿಗೆ ಒಟ್ಟು 1,65,354 ಅರ್ಜಿಗಳು ಸ್ವೀಕೃತವಾಗಿದ್ದು, ಅವುಗಳಲ್ಲಿ 1:5ರ ಅನುಪಾತದಂತೆ 12,019 ಅಭ್ಯರ್ಥಿಗಳಿಗೆ ಕರೆ ಪತ್ರ ಕಳುಹಿಸಲಾಗಿತ್ತು. ಇವುಗಳಲ್ಲಿ 7,087 ಸಂಖ್ಯೆಯ ಅಭ್ಯರ್ಥಿಗಳು ದೈಹಿಕ ಮತ್ತು ದೇಹದಾಢ್ರ್ಯತೆ ಪರೀಕೆಗೆ ಹಾಜರಾಗಿದ್ದು. ಪರೀಕ್ಷೆ ನಡೆಸುವ ಸ್ಥಳಗಳಲ್ಲಿ ಪಾರದರ್ಶಕತೆ ಕಾಪಾಡುವ ದೃಷ್ಟಿಯಿಂದ 10 ಸಿ.ಸಿ. ಕ್ಯಾಮರಾಗಳನ್ನು ಅಳವಡಸಿ ಪ್ರತಿಯೊಬ್ಬ ಅಭ್ಯರ್ಥಿಗಳಿಗೆ ಬಯೋಮೆಟ್ರಿಕ್ ಮಿಷನ್ ಉಪಯೋಗಿಸಿ ಪ್ರತಿಯೊಬ್ಬರ ಭಾವಚಿತ್ರ ಜೊತೆಗೆ ಹೆಬ್ಬೆರಳಿನ ಗುರುತನ್ನು ದಾಖಲು ಮಾಡಿ ಅಭ್ಯರ್ಥಿಗಳ ಎಲ್ಲಾ ದಾಖಲಾತಿಗಳನ್ನು ಪರಿಶೀಲಿಸಿ ಪ್ರತಿಯೊಬ್ಬರಿಗೂ ಚೆಸ್ಟ್ ನಂಬರ್ ನೀಡಿ ಎಲ್ಲಾ ಹಂತಗಳಲ್ಲಿಯೂ ವಿಡಿಯೋ ರೆರ್ಕಾಡ್ ಮಾಡಲಾಗಿರುತ್ತದೆ.
ಅಭ್ಯರ್ಥಿಗಳ ದೈಹಿಕ ಪರೀಕ್ಷೆ ಅಂದರೆ ತೂಕ ಮತ್ತು ಎತ್ತರಗಳನ್ನು ಪರೀಕ್ಷಿಸಲು ಬಿ.ಎಮ್.ಐ ಮಿಷನ್ ಬಳಸಲಾಗಿದೆ. ಮತ್ತು ದೇಹದಾಢ್ರ್ಯತೆ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ತೆಎದುಕೊಂಡ ಸಮಯವನ್ನು ದಾಖಲಿಸಲು ಯುವಜನಾ ಸೇವಾ ಮತ್ತು ಕ್ರೀಡಾ ಇಲಾಖೆ ಹಾಗೂ ಅಮೆಚೂರ್ ಅಥ್ಲೆಟಿಕ್ ಅಸೋಶಿಯೇಷನ್ ವತಿಯಿಂದ 09 ಜನ ತೀಮರ್ಪುಗಾರರ ಸೇವೆಯನ್ನು ಪಡೆಯಲಾಗಿತ್ತು. ಪ್ರತಿಯೊಂದು ಹಂತದಲ್ಲೂ ಪರೀಕ್‍ಷೆ ನಂತರ ಫಲಿತಾಂಶವನ್ನು ಆ ಕೂಡಲೇ ಅಭ್ಯರ್ಥಿಗಳಿಗೆ ತೋರಿಸಿ ಸಹಿ ಪಡೆದು ಅವರ ಒಂದು ಫಲಿತಾಂಶದ ಹಾಳೆಯ ಪ್ರತಿಯನ್ನು ಪ್ರತಿಯೊಬ್ಬ ಅಭ್ಯರ್ಥಿಗೆ ನೀಡಲಾಗಿರುತ್ತದೆ. ಈ ನೇರ ನೇಮಕಾತಿ ಪ್ರಕ್ರಿಯೆಯಲ್ಲಿ ಕೋವಿಡ್ - 19ಕ್ಕೆ ಸಂಬಂಧಿಸಿದ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ಪಾರದರ್ಶಕತೆಯಿಂದ ನೇಮಕಾತಿ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
Tags
ರಾಜ್ಯ