ರಾಜ್ಯ
ಕನ್ನಡ ಸಾಹಿತ್ಯ ಪರಿಷತ್ತನ್ನು ಭ್ರಷ್ಠಾಚಾರದಿಂದ ಮುಕ್ತಿ ಮಾಡಬೇಕು. ಪಾರದರ್ಶಕ ಪರಿಷತ್ ನಿರ್ಮಾಣದ
ಗುರಿಯನ್ನು ಅಧ್ಯಕ್ಷ ಸ್ಥಾನದ ಅಭ್ಯರ್ಥ ರಾಜಶೇಖರ್ ಮುಲಾಲಿ ಹೊಂದಿದ್ದಾರೆಂದು ಅವರ ಸಹೋದರ ಅಣ್ಣಾ
ಫೌಂಡೇಷನ್ ಕಾರ್ಯದರ್ಶಿ ಬಳ್ಳಾರಿಯ ತರುಣ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.
12 ಅಂಶಗಳನ್ನು
ಹೊಂದಿರುವ ಮುಲಾಲಿ ಭ್ರಷ್ಠಾಚಾರ ವಿರೋಧಿ ಹಾಗೂ ಸಾಮಾಜಿಕ ಹೋರಾಟಗಾರರಾಗಿದ್ದಾರೆ. ಅಣ್ಣಾ ಫೌಂಡೇಷನ್‌ಅಧ್ಯಕ್ಷರಾಗಿದ್ದಾರೆ.
ಸ್ವಚ್ಛ ಆಡಳಿತ, ಸಾಹಿತ್ಯವನ್ನು ಉತ್ತೇಜನ ನೀಡಿ ಬೆಳೆಸುವ ಕಾರ್ಯ, ಕನ್ನಡ ಶಾಲೆಗಳಿಗೆ ಉತ್ತೇಜನ ಸೇರಿದಂತೆ
ಸಾಹಿತ್ಯ ಪರಿಷತ್ ಬೆಳಸಬೇಕಾಗಿದೆ. ಸದ್ಯ ಪರಿಷತ್‌ನಲ್ಲಿ 40 ಸಾವಿರಕ್ಕೂ ಹೆಚ್ಚು ಮೃತಪಟ್ಟವರ ಹೆಸರುಗಳು
ಮತದಾರರ ಪಟ್ಟಿಯಲ್ಲಿದೆ. ಈಗಾಗಲೇ ರಾಜ್ಯದಲ್ಲಿ ವ್ಯಾಪಕ ಸಂಚಾರವನ್ನು 5 ತಂಡಗಳ ಮೂಲಕ ನಡೆಸಿ ಪರಿಷತ್
ಸದಸ್ಯರ ಮನೆ ಮನೆ ಭೇಟಿ ಮಾಡಲಾಗಿದೆ. ಎಲ್ಲಾ ವಿಧಾನ ಸಭಾಕ್ಷೇತ್ರದ ಶಾಸಕರನ್ನು, ಗಣ್ಯರನ್ನು ಹಲವು
ಕ್ಷೇತ್ರಗಳ ಪೀಠಾಧಿಪತಿಗಳನ್ನು ಭೇಟಿ ಮಾಡಲಾಗುತ್ತಿದೆ. ಚನ್ನರಾಯಪಟ್ಟಣ ತಾ//ನಲ್ಲಿ ಶಾಸಕ ಸಿ.ಎನ್.
ಬಾಲಕೃಷ್ಣ, ಶ್ರವಣಬೆಳಗೊಳದ ಪೂಜ್ಯಶ್ರೀಗಳ ಆಪ್ತರನ್ನು, ಮಾಜಿ ಶಾಸಕ ಸಿ.ಎಎಸ್. ಪುಟ್ಟೇಗೌಡರು, ಪರಿಸರ
ಪ್ರೇಮಿ ಸಿ.ಎನ್. ಅಶೋಕ್ ,ತಾ// ಕ.ಸಾ.ಪ ಅಧ್ಯಕ್ಷ ಪ್ರಕಾಶಜೈನ್ ಅವರನ್ನು ಸಂಪರ್ಕಿಸಿದ್ದು, ಮತ
ನೀಡಲು ತಾ// ಕ.ಸಾ.ಪ. ಅಧ್ಯಕ್ಷ ಪ್ರಕಾಶ್ ಜೈನ್ ಅವರನ್ನು ಸಂಪರ್ಕಿಸಿದ್ದು, ಮತ ನೀಡಲು ತಾ// ಕ.ಸಾ.ಪ
ಸದಸ್ಯರಲ್ಲಿ ಮನವಿ ಮಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಹನುಮೇ ಉಪ್ಪಾರ್, ಬದ್ರಿನಾಥ್, ಶ್ರೀಧರ್
ಇದ್ದರು.
