ಹಾಸನ: ಕುಡಿಯುವ ನೀರಿನ ಸಂಪರ್ಕ ಪಡೆಯಲು ಪಂಚಾಯಿತಿ ಅನುಮತಿ ಪಡೆಯಬೇಕು ಎಂದು ಬುದ್ದಿವಾದ ಹೇಳಿದ ಒಂದೆ ಕಾರಣಕ್ಕೆ ಜಗಳ ತೆಗೆದ ಮೂವರಲ್ಲಿ ಯುವತಿ ಓರ್ವಳು ನನ್ನ ತಲೆಗೆ ಕುಡುಗೋಲಿನಿಂದ ಹೊಡೆದ ಕಾರಣ ನಾನು ಹಾಸನದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವುದಾಗಿ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.
ನೆಲ್ಲಿ ಹಾಕಲು ಸಂಪರ್ಕಕ್ಕೆ ಪಂಚಾಯಿತಿಯ ಅನುಮತಿ ಕೇಳಿ ಎಂದು ಬುದ್ದಿವಾದ ಹೇಳಿದಕ್ಕೆ ಹಾಸನ ತಾಲೂಕಿನ ಸಾಲಗಾಮೆ ಹೋಬಳಿ ವೀರಾಪುರ ಗ್ರಾಮದಲ್ಲಿ ವಾಸ ಮಾಡುತ್ತಿರುವ ಸಾವಿತ್ರಿ ಸತ್ಯ (33) ಎಂಬುವರೆ ತಲೆಗೆ ಹೊಡೆತ ತಿಂದು ಚಿಕಿತ್ಸೆ ಪಡೆದವರು. 2021 ಏಪ್ರಿಲ್ 17 ರಂದು ಸಂಜೆ ಸಮಯದಲ್ಲಿ ನನ್ನ ಮಗ ಸಚಿನ್ ಸೀಗೆ ಪಂಚಾಯ್ತಿಯಲಿ ನೀರುಗಂಟಿಯಾಗಿ ಕೆಲಸ ಮಾಡುತ್ತಿದ್ದು, ಕಳೆದ ಒಂದುವರೆ ವರ್ಷಗಳಿಂದ ನಮ್ಮ ವೀರಪುರ ಗ್ರಾಮದಲ್ಲಿ ನೀರು ಬಿಡುವ ಕೆಲಸದಲ್ಲಿ ತೊಡಗಿದ್ದರು. ಇದೆ ಗ್ರಾಮದ ದೇವರಾಜ ರವರ ಹೆಂಡತಿ ಪಾರ್ವತಿ ಹಾಗೂ ಮಗಳು ಭಾನುಪ್ರಿಯ ಮೂವರು ಸೇರಿ ಮನೆಯ ಹತ್ತಿರ ನೆಲದಲ್ಲಿ ಹಾದು ಹೋಗಿರುವ ಪೈಪ್ ಲೈನ್ ಕೊರೆದು ನೆಲ್ಲಿ ಹಾಕಲು ಗುಂಡಿ ತೆಗೆಯುತ್ತಿದ್ದರು. ಪಂಚಾಯಿತಿ ಅನುಮತಿ ಪಡೆಯದೆ ನೆಲ್ಲಿ ಹಾಕಬೇಡಿ ಎಂದು ಸಲಹೆಯನ್ನು ನನ್ನ ಮಗ ಸಚಿನ್ ನೀಡಿದಾಗ ವಿರೋಧವ್ಯಕ್ತವಾಗಿ ವಾಗ್ವಾದ ನಡೆದಿದೆ. ನಾನು ನಂತರದಲ್ಲಿ ನನ್ನ ಮಗನ ಮೇಲೆ ಏಕೆ ಗಲಾಟಿ ಮಾಡಿದ್ದೀರಿ, ಪಂಚಾಯಿತಿಯ ಅನುಮತಿ ಕೇಳಿ ನೆಲ್ಲಿ ಹಾಕಿಸಿಕೊಳ್ಳುವಂತೆ ಪ್ರಶ್ನೆ ಮಾಡಿದೆ. ತಕ್ಷಣದಲ್ಲಿ ದೇವರಾಜು ಹಾಗೂ ಆತನ ಹೆಂಡತಿ ಪಾರ್ವತಿ ಹಾಗೂ ಮಗಳು ಭಾನುಪ್ರಿಯ ಮೂವರು ಸೇರಿ ಅವಾಚ್ಯ ಪದಗಳಿಂದ ನಿಂಧಿಸಿದರು. ಇಷ್ಟಕ್ಕೆ ಸುಮ್ಮನಿರದೆ ನನ್ನ ಗಂಡನಾದ ಸತ್ಯ ರವರ ಎಡಗೈ ಹೆಬ್ಬರಳನ್ನು ಕಚ್ಚಿ ಗಾಯ ಮಾಡಿದಲ್ಲದೇ ಕಲ್ಲಿನಿಂದ ಬಲಕಾಲಿಗೆ ಹೊಡೆದರು. ನನ್ನ ಗಂಡನನ್ನು ಬಿಡಿಸಲು ಹೋದ ನನ್ನ ಬಟ್ಟೆಯನ್ನು ಈ ಮೂವರು ಎಳೆದಾಡಿ ಥಳಿಸಿದರು. ಸಲ್ಪ ಸಮಯದಲ್ಲಿ ಭಾನುಪ್ರಿಯ ಎಂಬ ಯುವತಿ ಕುಡುಗೋಲಿನಿಂದ ನನ್ನ ತಲೆಗೆ ಬಲವಾಗಿ ಹೊಡೆದು ಗಾಯಮಾಡಿರುವುದಾಗಿ ದೂರಿದರು. ಹೆದರಿಕೆಯಿಂದ ನಾವುಗಳು ಕೂಗಾಡಿದ ವೇಳೆ ಊರಿನ ಗ್ರಾಮಸ್ಥರು ಬಂದು ಆಗುತ್ತಿದ್ದ ಹೆಚ್ಚಿನ ಅಪಾಯವನ್ನು ತಪ್ಪಿಸಿ ಸಮಧಾನ ಮಾಡಿರುವುದಾಗಿ ತಮ್ಮ ಅಳಲು ತೋಡಿಕೊಂಡರು. ಮೂರು ಜನರು ನನಗೆ ಹಾಗು ನನ್ನ ಗಂಡನಿಗೆ ಇನ್ನೊಂದು ಬಾರಿ ನಮ್ಮ ತಂಟೆಗೆ ಬಂದರೆ ಕೊಲೆ ಮಾಡದೆ ಬಿಡುವುದಿಲ್ಲ ಎಂದು ಹೇಳಿ ಬೆದರಿಕೆ ಹಾಕಿ, ಕುಡುಗೋಲನ್ನು ಅಲ್ಲಿಯೇ ಬಿಸಾಕಿ ವಾಪಸ್ ಹೊರಡು ಹೋದರು. ನಂತರ À ಕಾರಿನಲ್ಲಿ ಹಾಸನ ಸರ್ಕಾರಿ ಆಸ್ಮತ್ರೆಗೆ ಚಿಕಿತ್ಸೆಗಾಗಿ ಕರೆದುಕೊಂಡು ಬಂದಿರುವುದಾಗಿ ಹೇಳಿದರು. ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದರೂ ಇದುವರೆಗೂ ಯಾರನ್ನು ಬಂಧಿಸಿರುವುದಿಲ್ಲ. ನಮ್ಮ ಮೇಲೆ ಹಲ್ಲೆ ಮಾಡಿರುವವರನ್ನು ಕೂಡಲೇ ಬಂಧಿಸಿ ನಮಗೆ ನ್ಯಾಯಕೊಡಿಸಬೇಕೆಂದು ಇದೆ ವೇಳೆ ಮನವಿ ಮಾಡಿದರು.
