ಹಾಸನ : ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್ ರವರು ಜಾತಿ ನಿಂದನೆ ಹೇಳಿಕೆ ಕೊಡುವ ಮೂಲಕ ಕ್ಷೌರಿಕರ ಸ್ವಾಭಿಮಾನಕ್ಕೆ ಧಕ್ಕೆ ಆಗಿದ್ದು, ಕೂಡಲೇ ಕ್ಷಮೆ ಕೇಳುವಂತೆ ಆಗ್ರಹಿಸಿ ಜಿಲ್ಲಾ ಸವಿತಾ ಸಮಾಜ ಮಹಿಳಾ ಸಂಘ ಹಾಗೂ ನಗರ ಸವಿತಾ ಘಟಕದಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ವೃತ್ತಿನಿಂದನೆ ಮಾಡಿ ಕ್ಷೌರಿಕರ ಸ್ವಾಭಿಮಾನಕ್ಕೆ ಧಕ್ಕೆ ತಂದ ಪಶುಸಂಗೋಪನಾ ಸಚಿವ ಪ್ರಭು ಚೌಹ್ವಾಗ್ ನಿಮಗೆ ಸಚಿವನಾಗುವ ಯೋಗ್ಯತೆ ಇದಿಯಾ? ಸದಾಕಾಲವೂ ಸರ್ವರ ಸೇವೆ ಮಾಡುತ್ತಾ ಸ್ವಾಭಿಮಾನದ ಜೀವನ ನಡೆಸುವ ಕ್ಷೌರಿಕರ ವೃತ್ತಿ, ಇಂಥ ವೃತ್ತಿಗೆ ಸೇರಿದ ಸಮಾಜಕ್ಕೆ ಪ್ರತಿದಿನ ಸ್ವಾಭಿಮಾನದ ಮೇಲೆ ದಾಳಿ ಮಾಡಲಾಗುತ್ತಿದೆ. ಸಮಾಜವನ್ನು ತಿದ್ದುವ ಸರ್ವರನ್ನು ಸಮಾನರಾಗಿ ನೋಡಿಕೊಳ್ಳುವ ಜವಾಬ್ದಾರಿಯುತ ಸ್ಥಾನದಲ್ಲಿ ಕುಳಿತು ಅವಮಾನ ಮಾಡಿದ್ದೀರಿ ಎಂದು ದೂರಿದರು. ಕ್ಷೌರಿಕರು ಇಲ್ಲದ ಸಮಾಜವನ್ನು ಒಮ್ಮೆ ಊಹಿಸಿಕೊಳ್ಳಿ, ಕ್ಷೌರಿಕನು ಇಲ್ಲದೆ ನಿಮ್ಮ ಮುಖವನ್ನು ಉಳಿಸಿಕೊಳ್ಳಿ, ಸಚಿವರೇ ಕ್ಷೌರಿಕ ವ್ಲತ್ತಿಯನ್ನು ಅಷ್ಟು ಕೀಳಾಗಿ ಕಾಣುವ ಅಪಹಾಸ್ಯ ಮಾಡುವ ಮೂಲಕ ಮಧ್ಯಮ ವರ್ಗದವರಾದ ಕ್ಷೌರಿಕರು ಕಷ್ಟಪಟ್ಟು ದುಡಿಯುವ ಮೂಲಕ ಸ್ವಾಭಿಮಾನದ ಜೀವನ ನಡೆಸುತ್ತಿದ್ದಾರೆ ಎಂದರು.
ಇಚಿತಹ ಸಮಾಜದ ಬಗ್ಗೆ ವೇದಿಕೆಯ ಮೇಲೆ ಚುನಾವಣಾ ಪ್ರಚಾರದ ಸಮಯದಲ್ಲಿ ಅಪಹಾಸ್ಯ ಮಾಡಿರುವ ನಿಮ್ಮ ಅಪಹಾಸ್ಯಕ್ಕೆ ಕೆಲವರು ಶಿಳ್ಳೆ, ಚಪ್ಪಾಳೆ ತಟ್ಟಿ ಸಂತೋಷ ಪಟ್ಟಿರಬಹುದು, ಆದರೆ ಅಲ್ಲಿ ಪ್ರಜ್ಞಾವಚಿತರು ನಿಮ್ಮ ನಾಲಿಗೆ ಮತ್ತು ನಿಮ್ಮ ಸಂಸ್ಸöÈತಿಯ ಮೇಲೆ ಅಸಹ್ಯಪಟ್ಟಿದ್ದಾರೆ. ಒಮ್ಮೆ ಯೋಚಿಸಿ ಕ್ಷೌರಿಕ ವ್ಲತ್ತಿಯ ಮೇಲೆ ನಾಲಿಗೆ ಹರಿಬಿಟ್ಟ ನಿಮಗೆ ಕ್ಷೌರಿಕರಿಂದ ಇಲ್ಲವೇ ಕ್ಷೌರಿಕ ವೃತ್ತಿಯಿಂದ ಆದ ಅನ್ಯಾಯವಾದರೂ ಏನು ಸ್ವಾಮಿ ಎಂದು ಪ್ರಶ್ನೆ ಮಾಡಿದರು. ಕ್ಷೌರಿಕರು ಏನಾದರೂ ನಿಮ್ಮ ಮಂತ್ರಿ ಪದವಿ ಕಿತ್ತುಕೊಂಡು ಹೋಗಿದ್ದಾರಾ! ಒಂದು ರಾಜ್ಯದ ಮಂತ್ರಿಯಾಗಿ ನಾಲಿಗೆ ಮೇಲೆ ಹಿಡಿತ ಇಲ್ಲದ ನಿಮ್ಮನ್ನು ನಾವು ಮಂತ್ರಿಗಳು ಅನ್ನು ಸಾಧ್ಯವೇ? ಸಣ್ಣ ಜಾತಿಗಳ ವ್ಲತ್ತಿಯ ಮೇಲೆ ಅಪಹಾಸ್ಯಮಾಡಿ ನೀವುಗಳಿಸಿರುವುದು ಕೇವಲ ಶಿಳ್ಳೆ, ಚಪ್ಪಾಳೆ ಮಾತ್ರ. ಆದರೆ ನೀವು ಕಳೆದುಕೊಂಡಿರುವುದು ನಿಮ್ಮ ಮರ್ಯಾದೆ ಎಂದು ಆಕ್ರೋಶವ್ಯಕ್ತಪಡಿಸಿದರು. ಕ್ಷೌರಿಕರ ಮೇಲೆ ಜಾತಿ ನಿಂದನೆಗೆ ವೃತ್ತಿ ನಿಂದನ ಪ್ರಕರಣ ದಾಖಲಿಸಬಹುದಾಗಿದೆ ಎಂದು ಎಚ್ಚರಿಸಿದರು. ನೀವು ಮಂತ್ರಿ ಸ್ಥಾನದಲ್ಲಿ ಕುಳಿತುಕೊಳ್ಳುವ ಯೋಗ್ಯತೆ ಕಳೆದುಕೊಂಡಿದ್ದೀರಿ ಎಂದು ದೂರಿದರು.
ಇದೆ ವೇಳೆ ಹಾಸನ ಜಿಲ್ಲಾ ಸವಿತಾ ಸಮಾಜ ಮಹಿಳಾ ಸಂಘದ ಅಧ್ಯಕ್ಷೆ ಬಿ.ಎನ್. ಪುಷ್ಪಲತಾ, ಶಿಲ್ಪ, ನಗರಸಭಾ ಸದಸ್ಯ ದಯಾನಂದ್, ನಗರ ಘಟಕದ ಸಂಘಟನಾ ಕಾರ್ಯದರ್ಶಿ ರವಿಕುಮಾರ್, ಹೆಚ್.ಎಂ. ರಮೇಶ್ ಇತರರು ಪಾಲ್ಗೊಂಡಿದ್ದರು.