ಹಾಸನ: ಬಿಜೆಪಿ ಪಕ್ಷದ ಸಂಸ್ಥಾಪನ ದಿನದ ಅಂಗವಾಗಿ ನಗರದ ವಿದ್ಯಾನಗರದಲ್ಲಿರುವ ಕ್ಷೇತ್ರದ ಶಾಸಕರಾದ ಪ್ರೀತಮ್ ಜೆ. ಗೌಡರ ಕುಟುಂಬದಿAದ ಪಕ್ಷದ ಭಾವುಟ ಹಾರಿಸುವುದರ ಮೂಲಕ ಆಚರಿಸಲಾಯಿತು.
ಶಾಸಕರ ತಂದೆ ಜವರೇಗೌಡ, ತಾಯಿ ರತ್ನಮ್ಮ, ಪತ್ನಿ ಕಾವ್ಯ ಪುತ್ರ ಪ್ರಮುಖ್ ಹಾಗೂ ಬಿಜೆಪಿ ನಗರಾಧ್ಯಕ್ಷ ವೇಣುಗೋಪಾಲ್ ಇವರು ಮೊದಲು ಬಿಜೆಪಿ ಸ್ಥಾಪಕರಾದ ಶಾಮ್ ಪ್ರಸಾದ್ ಮುಖರ್ಜಿ, ದೀನ್ ದಯಾಲ್ ಉಪಾದ್ಯಾಯ ಹಾಗೂ ಭಾರತ ಮಾತೆಯ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡುವುದರ ಮೂಲಕ ಬಿಜೆಪಿ ಸಂಸ್ಥಾಪನ ದಿನವನ್ನು ಭಕ್ತಪೂರ್ಣವಾಗಿ ಆಚರಿಸಲಾಯಿತು. ನಂತರ ಮನೆ ಮೇಲೆ ಪಕ್ಷದ ಭಾವುಟವನ್ನು ಹಾರಿಸಿದರು.
ನಂತರ ಮಾತನಾಡಿದ ಬಿಜೆಪಿ ನಗರಾಧ್ಯಕ್ಷ ವೇಣುಗೋಪಾಲ್ ರವರು, ಬಿಜೆಪಿಯ ಸಂಸ್ಥಾಪನ ದಿನಾಚರಣೆಯನ್ನು ಏಪ್ರಿಲ್ ೬ ರಂದು ದೇಶದಾದ್ಯಂತ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರ ಮನೆ ಮನೆಯಲ್ಲಿ ಆಚರಿಸಲಾಗುತ್ತಿದೆ. ಹಾಸನ ಕ್ಷೇತ್ರದ ಶಾಸಕರಾದಂತಹ ಪ್ರೀತಂ ಜೆ. ಗೌಡರ ಮನೆಯ ಕುಟುಂಬದೊAದಿಗೆ ಧ್ವಜಾರೋಹಣವನ್ನು ಮಾಡಲಾಗಿದೆ ಎಂದು ಹೇಳಿದರು.