ರೈಲು ನಿಲ್ದಾಣಗಳ ನಡುವೆ ಅಪರಿಚಿತ ವ್ಯಕ್ತಿ ಮೃತ ಪತ್ತೆ.

ಹಾಸನ ಏ.೨೨:- ಹೊಳೆನರಸೀಪುರ - ಮಾವಿನಕೆರೆ ರೈಲು ನಿಲ್ದಾಣಗಳ ನಡುವೆ ರೈಲ್ವೆ ಕಿ.ಮಿ.ನಂ ೮೮/೪೦೦ ರಲ್ಲಿ ಸುಮಾರು ೩೫-೪೦ ವರ್ಷದ ಗಂಡಸು ರೈಲು ಗಾಡಿಗೆ ಸಿಕ್ಕಿ ಮೃತ ಪಟ್ಟಿದ್ದು ಮೈಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತ ಪಟ್ಟ ವ್ಯಕ್ತಿಗೆ ಸುಮಾರು ೩೫ ರಿಂದ ೪೦ ವರ್ಷ ವಯಸ್ಸಾಗಿದ್ದು, ಸುಮಾರು ೫.೬ ಎತ್ತರ, ಗೋಧಿ ಮೈ ಬಣ್ಣ, ಕೋಲುಮುಖ, ಗಿಡ್ಡ ಮೂಗು, ತಲೆಯಲ್ಲಿ ಅರ್ಧ ಇಂಚು ಕಪ್ಪು ಕೂದಲು, ಮುಖದ ಮೇಲೆ ಸುಮಾರು ಅರ್ಧ ಇಂಚು ಗಡ್ಡ ಮೀಸೆಯಿದ್ದು,  ಮೃತನ ಮೈ ಮೇಲೆ ಕಪ್ಪು ನೀಲಿ ಮಿಶ್ರಿತ ಚೌಕಳಿಯುಳ್ಳ ಕಾಫಿ ಬಣ್ಣದ ರೆಡಿಮೇಡ್ ತುಂಬು ತೋಳಿನ ಶರ್ಟ್ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್, ಕಪ್ಪು ಉಡುದಾರ ಧರಿಸಿದ್ದಾರೆ.

ಮೃತನ ವಾರಸುದಾರರ ಮಾಹಿತಿ ದೊರೆತಲ್ಲಿ ಮೈಸೂರು ರೈಲ್ವೆ ಪೊಲೀಸ್ ಠಾಣೆ ದೂ. ಸಂ. ೦೮೨೧-೨೫೧೬೫೭೯ ಮತ್ತು ಹಾಸನ ಹೊರ ಉಪಠಾಣೆ ದೂ. ಸಂ. ೦೮೧೭೨-೨೬೮೬೧೭ ಸಂಪರ್ಕಿಸಬಹುದಾಗಿದೆ.


Post a Comment

Previous Post Next Post