ಹಾಸನ: ತನ್ನ ತಾಯಿಗೆ ಕೊರೋನಾ ಸೋಂಕು ಹರಡಿದ್ದು, ಕಳೆದ 11 ದಿನಗಳಿಂದ ಚಿಕಿತ್ಸೆ ಪಡೆಯುತ್ತಿರುವ ತಾಯಿಯ ನೋವು ನೋಡಲಾಗದೆ ನೊಂದು ಬೇಸರದಲ್ಲಿ ಪುತ್ರನು ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾಸನ ನಗರದ ಜಿಲ್ಲಾ ಸರಕಾರಿ ಆಸ್ಪತ್ರೆ ಮಹಡಿ ಮೇಲೆ ನಡೆದಿದೆ.
ಕೊಡಗು ಜಿಲ್ಲೆ ಶನಿವಾರಸಂತೆ ಸಮೀಪದ ಮಾದರೆ ಗ್ರಾಮದ ಶರತ್ ಕುಮಾರ್ (31) ಎಂಬುವನೆ ಆತ್ಮಹತ್ಯೆ ಮಾಡಿಕೊಂಡ ದುರ್ಧೇವಿ ಎಂದು ತಿಳಿದು ಬಂದಿದೆ. ಕಳೆದ ಹತ್ತು ದಿನಗಳಿಂದÀ ಮೃತ ಶರತ್ ಕುಮಾರ್ ತಾಯಿಗೆ ಕೊರೊನಾ ಸೋಂಕು ತಗುಲಿತ್ತು. ನಗರದ ಕೊವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ತಾಯಿ ಕೊರೋನಾದ ಚಿಕಿತ್ಸೆ ಪಡೆಯುತ್ತಿದ್ದರೂ ಚಿಂತಾಜನಕ ಸ್ಥಿತಿಯಲ್ಲಿತ್ತು. ಆಸ್ಪತ್ರೆಯಲ್ಲಿ ಸಹೋದರರಿಬ್ಬರು ತಾಯಿಯ ಆರೈಕೆ ಮಾಡುತ್ತಿದ್ದರು. ಮೃತ ಶರತ್ ಕಳೆದ ರಾತ್ರಿ ಸಮಯದಲ್ಲಿ ಸಹೋದರನಾದ ಶಶಿಕುಮಾರ್ ಗೆ ಕರೆ ಮಾಡಿ ಅಮ್ಮ ತುಂಬಾ ನೋವು ಅನುಭವಿಸುತ್ತಿದ್ದಾರೆ. ನನ್ನಿಂದ ಇದನ್ನು ನೋಡಲು ಸಾಧ್ಯವಿಲ್ಲ ದಯಮಾಡಿ ಆಸ್ಪತ್ರೆಗೆ ಬಾ ಎಂದು ಕರೆದಿದ್ದನು. ಸಹೋದರ ಆಸ್ಪತ್ರೆಗೆ ಬಂದು ನೋಡಿದಾಗ ಅಲ್ಲಿ ಶರತ್ ಕಾಣಲಿಲ್ಲ. ಆದರೇ ಸೋಮವಾರದಂದು ಬೆಳಗ್ಗೆ ಆಸ್ಪತ್ರೆಯ ಏಳನೇ ಮಹಡಿಯ ಮೇಲೆ ನೀರಿನ ಟ್ಯಾಂಕ್ ನ ಪೈಪ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಸ್ವಚ್ಛತೆ ಮಾಡುವವರಿಂದ ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ. ವಿಷಯ ತಿಳಿದ ಹಾಸನ ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದಾರೆ.