ಹಾಸನ : ಪ್ರತಿದಿನ ಕೊರೋನಾ ಹೆಚ್ಚುತ್ತಿರುವುದರಿಂದ ಚಿಕಿತ್ಸೆಯ ಇಂಜೆಕ್ಷನನ್ನು ಖಾಸಗಿ ಮತ್ತು ಸರಕಾರಿ ಆಸ್ಪತ್ರೆಗಳು ಉಚಿತವಾಗಿ ಕೊಡದೆ ಸರಕಾರವು ಕಣ್ಣುಮುಚ್ಚಿ ಕುಳಿತಿದಿಯಾ? ಇಲ್ಲವೇ ಏನಾದರೂ ಪಾಪರ್ ಬಿದ್ದಿದೀಯಾ! ಹಣ ಇಲ್ಲ ಎಂದರೆ ನಾವೇ ಬೀದಿಲಿ ತಟ್ಟೆ ಹಿಡಿದು ಹಣ ಎತ್ತುತ್ತೇವೆ ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ವ್ಯಂಗ್ಯವಾಡಿ, ಅಸಮಧಾನ ಹೊರ ಹಾಕಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ರೆಮ್ಡಿಸಿವಿರ್ ಇಂಜೆಕ್ಷನ್ ಕೊರತೆಯಿತ್ತು ನಾನೇ ಹೇಳಿ 480 ಇಂಜೆಕ್ಷನನ್ನು ಖಾಸಗಿಯವರಿಗೆ ಕೊಡಿಸಿದ್ದೇನೆ. ಡ್ರಗ್ ಕಂಟ್ರೋಲರ್ ಫೋನ್ ರಿಸೀವ್ ಮಾಡ್ತಿಲ್ಲ. ಏನಾದರೂ ಸತ್ತೋಗಿದ್ದಾನಾ ಗೊತ್ತಿಲ್ಲ. ಹಾಸನ ಜಿಲ್ಲೆಗೆ ತಕ್ಷಣದಲ್ಲಿ 2 ಸಾವಿರ ರೆಮ್ಡಿಸಿವಿರ್ ಇಂಜೆಕ್ಷನ್ ಕಳುಹಿಸಿ ಇದನ್ನು ಸಂಪೂರ್ಣ ಉಚಿತವಾಗಿ ಕೊಡಬೇಕು. ಆದರೇ ಇಂಜಕ್ಷನನ್ನು ಮಾರಾಟ ಮಾಡುತ್ತಿದ್ದರೂ ಸರಕಾರವು ಕಣ್ಣು ಮುಚ್ಚಿ ಕುಳಿತಿದೆ. ಹಾಸನ ಜಿಲ್ಲೆಯಲ್ಲಿ ಹೇಳೋರು, ಕೇಳೋರು ಯಾರು ಇಲ್ಲಾ. ಸರ್ಕಾರ ಏನಾದ್ರು ಪಾಪರ್ ಬಿದ್ದಿದಿಯಾ! ನಾವು ಪಾಪರ್ ಆಗಿದ್ದೀವಿ, ನಮ್ಮಬಳಿ ಹಣ ಇಲ್ಲಾ ಎಂದು ಸರ್ಕಾರ ಹೇಳಲಿ ಆಗ ನಾವೇ ತಟ್ಟೆ ಹಿಡಿದು ಬಿಕ್ಷೆ ಬೇಡಿ ಹಣ ಸಂಗ್ರಹಣೆ ಮಾಡಿ ಚಿಕಿತ್ಸೆ ಕೊಡಿಸುತ್ತೇವೆ. ನಮ್ಮ ಕಾರ್ಯಕರ್ತರಿಗೂ ಬಿಕ್ಷೆಬೇಡಿ ಹಣ ಸಂಗ್ರಹಿಸುವAತೆ ಹೇಳುತ್ತೇನೆ ಎಂದು ವ್ಯಂಗ್ಯವಾಡಿದರು. ಸರ್ಕಾರ ಇಷ್ಟೊಂದು ಕೀಳುಮಟ್ಟಕ್ಕೆ ಇಳಿದಿದ್ದು, ಬಡವರನ್ನು ನೋಯಿಸಬೇಡಿ, ನಿಮ್ಮ ಮಕ್ಕಳಿಗೆ ನಿಮ್ಮ ಕುಟುಂಬಕ್ಕೆ ಒಳ್ಳೆಯದಾಗುವುದಿಲ್ಲ.
ಹಳ್ಳಿಗಳಲ್ಲಿ ಬಡವರು ನರಳಾಡುತ್ತ ಸಾಯುತ್ತಿದ್ದಾರೆ. ಇನ್ನು ಸರ್ಕಾರವು ಖಾಸಗಿ ಆಸ್ಪತ್ರೆಯ ಗುಲಾಮಾರಾಗಿದ್ದೇವೆ ಎಂದು ಹೇಳಲಿ ಎಂದು ಸವಾಲು ಹಾಕಿದರು.
ಉಸ್ತುವಾರಿ ಸಚಿವರು ಏನು ಮಾಡುತ್ತಾರೆ? ಈ ಜಿಲ್ಲೆ ಲೂಟಿ ಕೋರರ ಕೈ ಸೇರಿದೆ. ನನ್ನ 21 ವರ್ಷದ ರಾಜಕೀಯದಲ್ಲಿ ಇಂತಹ ಕೆಟ್ಟ ಸರ್ಕಾರವನ್ನು ನೋಡಿರಲಿಲ್ಲ. ನಾಯಿಗಳು ಕಾಯುವ ರೀತಿ, ಆಸ್ಪತ್ರೆ ಮುಂದೆ ಕೊರೋನಾ ಸೋಂಕಿತರು ನಿಂತಿರುತ್ತಾರೆ. ಕರೆ ಮಾಡಿದರೇ ಆರೋಗ್ಯ ಸಚಿವರು ಫೋನ್ ತೆಗೆಯುವುದಿಲ್ಲ. ಇದೆ ರೀತಿ ಮುಂದುವರೆದರೇ ಸರಕಾರದ ವಿರುದ್ಧ ಪಕ್ಷದಿಂದ ಉಗ್ರ ಹೋರಾಟ ಮಾಡುವ ಹಾದಿ ಹಿಡಿಯ ಬೇಕಾಗುತ್ತದೆ ಎಂದು ಎಚ್ಚರಿಸಿದರು. ಜಿಲ್ಲಾ ಉಸ್ತುವಾರಿ ಸಚಿವರು ಕ್ಯಾಂಪ್ ಮಾಡಿ ಇಲ್ಲಿನ ಪ್ರತಿ ಕ್ಷಣದ ಸ್ಥಿತಿಯನ್ನು ಅರಿಯಬೇಕು. ಇನ್ನು ಕಳೆದ ಎರಡು ವರ್ಷಗಳಿಂದ ಸರಕಾರವು ತಿಂದು ತೇಗಿದೆ. ಇಂತಹ ಸಂದರ್ಭದಲ್ಲಾರೂ ಜಿಲ್ಲಾಧಿಕಾರಿಗಳ ನಿಧಿಗೆ ಹತ್ತು ಕೋಟಿ ಕೊಡಿ ಸಲ್ಪವಾದರೂ ಸುಧಾರಿಸುವುದಕ್ಕೆ ಒತ್ತು ನೀಡಲಿ. ಜನಸಾಮಾನ್ಯರ ಸಾವು-ನೋವುಗಳನ್ನು ಕಣ್ಣಿಂದ ನೋಡಲು ಆಗುತ್ತಿಲ್ಲ ಎಂದು ಮರುಗಿದರು.
ಬಡವರಿಗೆ ಎರಡು-ಮೂರು ತಿಂಗಳಿಗಾಗುವಷ್ಟು 10 ಕೆಜಿ ಅಕ್ಕಿ, 5 ಗೋಧಿ ನೀಡಲಿ. ಈ ಹಣವನ್ನು ಇವರ ಅಪ್ಪನ ಮನೆಯ ದುಡ್ಡನ್ನು ಸರ್ಕಾರ ಕೊಡಲ್ಲ. ತೆರಿಗೆ ಹಣವನ್ನು ಸರ್ಕಾರ ನೀಡುತ್ತದೆ ಅಷ್ಟೆ. ಇಲ್ಲವಾದರೆ ಸರ್ಕಾರ ಸತ್ತುಹೋಗಿದೆ ಎಂದು ಕೈಎತ್ತಿ ಮಲಗಿಕೊಳ್ಳಲಿ ಎಂದ ಅವರು, ಡಬಲ್ ಇಂಜಿನ್ ಸರ್ಕಾರ ಬಂದು ರೈತರು ಗೋಳಾಡುತ್ತಿದ್ದಾರೆ ಎಂದು ಕುಟುಕಿದರು.
ಇದೆ ವೇಳೆ ಶ್ರವಣಬೆಳಗೊಳ ಕ್ಷೇತ್ರದ ಶಾಸಕ ಸಿ.ಎನ್. ಬಾಲಕೃಷ್ಣ ಉಪಸ್ಥಿತರಿದ್ದರು.