ರಾಮನಾಥಪುರ;- ಶೈಕ್ಷಣಿಕವಾಗಿ ಮಕ್ಕಳು ಅಭಿವೃದ್ಧಿ ಸಾಧಿಸಬೇಕು ಎನ್ನುವ ಸದುದ್ದೇಶದಿಂದ ಶಾಸಕನಾದ ಬಳಿಕ ಕಳೆದ ಎರಡು ವರ್ಷಗಳ ಅವಧಿಯಲ್ಲಿ ಹತ್ತಾರು ಅಂಗನವಾಡಿ ಕಟ್ಟಡಗಳನ್ನು ಮಂಜೂರು ಮಾಡಿಸಿ, ಕಟ್ಟಡಗಳು ನಿರ್ಮಾಣವಾಗುತ್ತಿವೆ ಎಂದು ಡಾ. ಎ.ಟಿ. ರಾಮಸ್ವಾಮಿ ತಿಳಿಸಿದರು.
ರಾಮನಾಥಪುರ ಹೋಬಳಿ ಜೆ. ಹೋಸಹಳ್ಳಿ ಗ್ರಾಮದಲ್ಲಿ ೧೬.೫೦ ಲಕ್ಷ ರೂ ಅಂಗನವಾಡಿ ಕಟ್ಟಡದ ನಿರ್ಮಾಣದ ಶಂಕುಸ್ಥಾಪನೆ ಮಾಡಿ ಮಾತನಾಡಿ ಕ್ಷೇತ್ರದ ಬಿದರೂರು, ದಡದಹಳ್ಳಿ, ಚೋಳೆನಹಳ್ಳಿ, ಮುಂತಾದ ಗ್ರಾಮಗಳಲ್ಲಿ ಈಗಾಗಲೇ ಅಂಗನವಾಡಿ ಕಟ್ಟಡಗಳು ನಿರ್ಮಾಣವಾಗುತ್ತಿವೆ. ಗ್ರಾಮಸ್ಥರು ಕಟ್ಟಡವು ಗುಣಮಟ್ಟದಲ್ಲಿ ನಿರ್ಮಾಣವಾಗುವಂತೆ ಅಸಕ್ತಿವಹಿಸಬೇಕು ಎಂದು ಗ್ರಾಮಸ್ಥರಿಗೆ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರಿಗೆ ಹೇಳಿದ ಅವರು ಕ್ಷೇತ್ರದ ಪಟ್ಟಣ, ಗ್ರಾಮೀಣ ಮತ್ತು ವಾರ್ಡ್ಗಳ ವಿದ್ಯುತ್ ವ್ಯವಸ್ಥೆ, ಹಳಿಗಳ ರಸ್ತೆಗಳು, ಕುಡಿಯುವ ನೀರು, ಕೆರೆ-ಕಟ್ಟೆಗಳನ್ನು ಭರ್ತಿ ಮಾಡುವುದು ಸೇರಿದಂತೆ ಹಲವು ಭರವಸೆಗಳನ್ನು ಪ್ರಾಮಾಣಿಕವಾಗಿ ಪ್ರಯತ್ನ ಮಾಡಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ರಾಮು, ಮಾಜಿ ಸದಸ್ಯ ಚಂದ್ರೇಗೌಡ, ಮುಖಂಡರಾದ ಚಂದ್ರೇಗೌಡ, ನಾರಾಯಣಗೌಡ, ರಮೇಶ್, ಮಹದೇವ್, ನಾಗರಾಜು, ಬಸವೇಗೌಡ, ತಮ್ಮೇಗೌಡ, ಕೃಷ್ಣಯ್ಯ ಮುಂತಾದವರು ಭಾಗವಹಿಸಿದ್ದರು.
ರಾಮನಾಥಪುರ ಹೋಬಳಿ ಜೆ. ಹೋಸಹಳ್ಳಿ ಗ್ರಾಮದಲ್ಲಿ ಡಾ. ಎ.ಟಿ. ರಾಮಸ್ವಾಮಿ ೧೬.೫೦ ಲಕ್ಷ ರೂ ಅಂಗನವಾಡಿ ಕಟ್ಟಡದ ನಿರ್ಮಾಣದ ಶಂಕುಸ್ಥಾಪನೆ ಮಾಡಿದರು.