ಆಲೂರು : ತಾಲೂಕಿನಲ್ಲಿ ಇಂದು ಜೆಡಿಎಸ್ ಪಕ್ಷದ ವತಿಯಿಂದ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ದೃಷ್ಟಿಯಿಂದ ಪರ‍್ವಭಾವಿಯಾಗಿ ಕರ‍್ಯರ‍್ತರ ಸಭೆಯನ್ನು ಆಯೋಜಿಸಲಾಗಿತ್ತು ಈ ಕರ‍್ಯಕ್ರಮವನ್ನು ಮಾಜಿ ಸಚಿವರು ಹಾಲಿ ಶಾಸಕರು ಆದ ಎಚ್.ಡಿ ರೇವಣ್ಣ ರವರು ಉದ್ಘಾಟಿಸಿದರು
ಈ ಕರ‍್ಯಕ್ರಮದ ಅಧ್ಯಕ್ಷತೆಯನ್ನು ಆಲೂರು ಸಕಲೇಶಪುರ ಕ್ಷೇತ್ರದ ಶಾಸಕರು ಆಗೋ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷರಾದ ಹೆಚ್. ಕೆ ಕುಮಾರಸ್ವಾಮಿ ಅವರು ವಹಿಸಿಕೊಂಡು ಮಾತನಾಡಿ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ರ‍್ಕಾರವು ಹಾಸನ ಜಿಲ್ಲೆಗೆ ನಮ್ಮ ರ‍್ಕಾರವಿದ್ದಾಗ ಮಂಜೂರಾದ ಕಾಮಗಾರಿಗಳಿಗೆ ಅನುದಾನವನ್ನು ತಡೆಹಿಡಿದಿತ್ತು ಇದರ ಜೊತೆಗೆ ಜೆಡಿಎಸ್ ಶಾಸಕರು ಇರುವ ಕ್ಷೇತ್ರಗಳಿಗೆ ಅನುದಾನ ನೀಡುವಲ್ಲಿ ಮಲತಾಯಿ ಧೋರಣೆಯನ್ನು ಅನುಸರಿಸುತ್ತಿದ್ದು ೨ ತಿಂಗಳ ಹಿಂದೆ ಸಿಎಂ ಮನೆ ಮುಂದೆ ಧರಣಿ ನಡೆಸುವುದಾಗಿ ತರ‍್ಮಾನಿಸಲಾಗಿತ್ತು ಆದರೆ ಮುಖ್ಯಮಂತ್ರಿಗಳು ನಿಮ್ಮೆಲ್ಲ ಸಮಸ್ಯೆಗಳನ್ನು ಆದಷ್ಟು ಬೇಗ ಬಗೆಹರಿಸಿ ಕೊಡುವುದಾಗಿ ಪತ್ರ ಮುಖೆನಾ ಭರವಸೆಯನ್ನು ನೀಡಿದ್ದರು ಆದರೆ ಅಲ್ಲಿಂದ ಇಲ್ಲಿಯವರೆಗೆ ಈ ವಿಚಾರದಲ್ಲಿ ಯಾವುದೇ ಪ್ರಗತಿ ಕಾಣದೇ ಇರುವುದರಿಂದ ಸಿಎಂ ಮನೆ ಮುಂದೆ ಧರಣಿ ಮಾಡುವುದು ಅನಿವರ‍್ಯವಾಗಿದೆ ಅಲ್ಲದೆ ರ‍್ಕಾರವು ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಕ್ಷೇತ್ರಗಳನ್ನು ಅವೈಜ್ಞಾನಿಕವಾಗಿ ಪುರ‍್ವಿಂಗಡನೆ ಮಾಡಿರುವುದರಿಂದ ಸಮಸ್ಯೆಯಾಗಿದೆ ಈ ಬಾರಿ ನಾನು ಮೂರು ರ‍್ಷದಲ್ಲಿ ಕ್ಷೇತ್ರಕ್ಕೆ ವಿವಿಧ ಕಾಮಗಾರಿಗಳಿಗಾಗಿ ೨೮೦ ಕೋಟಿ ರೂಗಳನ್ನು ಹಾಗೂ ರಸ್ತೆ ಅಭಿವೃದ್ಧಿಗಾಗಿ ೪೫೦ ಕೋಟಿ ರೂಗಳನ್ನು ಮತ್ತು ೧೧೦ ಕೋಟಿ ರೂಗಳನ್ನು ಎತ್ತಿನಹೊಳೆ ಯೋಜನೆಯ ಅಡಿಯಲ್ಲಿ ಮಂಜೂರು ಮಾಡಿಸಿ ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಿರುವುದಾಗಿ ತಿಳಿಸಿದರು
ನಂತರ ಮಾತನಾಡಿದ ಮಾಜಿ ಸಚಿವರಾದ ಎಚ್. ಡಿ ರೇವಣ್ಣ ರವರು ಬೇಸಿಗೆಕಾಲ ಪ್ರಾರಂಭವಾಗಿದ್ದು ಪ್ರತಿ ಶಾಸಕರ ಕ್ಷೇತ್ರಗಳಿಗೆ ಕುಡಿಯುವ ನೀರಿನ ಉದ್ದೇಶಕ್ಕಾಗಿ ೨ ಕೋಟಿ ರೂಗಳನ್ನು ಬಿಡುಗಡೆ ಮಾಡಬೇಕಾಗಿ ರ‍್ಕಾರವನ್ನು ಒತ್ತಾಯಿಸಿದರು ಕೂಡರ‍್ಕಾರ ಇತ್ತ ಗಮನ ಹರಿಸದೆ ಗ್ರಾಮೀಣ ಪ್ರದೇಶದ ಮೂಲಭೂತ ಸೌರ‍್ಯಗಳಾದ ರಸ್ತೆ,ಚರಂಡಿ,ನೀರು ಇವುಗಳಿಗೆ ಅನುದಾನ ನೀಡಿ ಎಂದು ರ‍್ಕಾರವನ್ನು ಕೇಳಿದರೆ ರ‍್ಕಾರ ಇವುಗಳನ್ನು ಬಿಟ್ಟು ಗ್ರಾಮೀಣ ಪ್ರದೇಶಗಳಲ್ಲಿ ಸಿ.ಎಲ್ -೭ ಬಾರ್ ಅಂಡ್ ರೆಸ್ಟೋರೆಂಟ್ ಗಳನ್ನು ಮಂಜೂರು ಮಂಜೂರು ಮಾಡುವುದರಲ್ಲಿ ತಲ್ಲೀನವಾಗಿದೆ ಅಲ್ಲದೆ ಮಾನ್ಯ ಮುಖ್ಯಮಂತ್ರಿಗಳ ಬಳಿ ಹಣಕಾಸು ಇಲಾಖೆ ವಿದ್ಯುತ್ ಇಲಾಖೆ ಇದ್ದು ಕನಿಷ್ಠಪಕ್ಷ ರೈತರಿಗೆ ೨ ಗಂಟೆವಿದ್ಯುತ್ತನ್ನು ಪೂರೈಸಲು ಸಾಧ್ಯವಾಗದ ಸ್ಥಿತಿ ರಾಜ್ಯದ ಮುಖ್ಯಮಂತ್ರಿಗೆ ಬಂದಿದೆ ಎಂದು ಆಕ್ರೋಶ ಹೊರಹಾಕಿದರು ಅಲ್ಲದೆ ರಾಜ್ಯ ರ‍್ಕಾರವು ಡಬಲ್ ಇಂಜಿನ್ ರ‍್ಕಾರವಾಗಿದ್ದು ಕೇಂದ್ರರ‍್ಕಾರದ ಅಣತಿಯಂತೆ ಕೆಲಸ ಕರ‍್ಯಗಳು ನಡೆಯುತ್ತಿರುವುದರಿಂದ ನಮ್ಮ ಹಾಸನ ಜಿಲ್ಲೆಗೆ ಹಿಂದೆ ಮಂಜೂರಾದ ಕಾಮಗಾರಿಗಳಿಗೆ ತಡೆಹಿಡಿದಿರುವ ಅನುದಾನವನ್ನು ಮಂಜುರೂಮಾಡದೆ ಇದ್ದರೆ ಇದೇ ತಿಂಗಳು ೧೯ನೇ ತಾರೀಕು ಸಿಎಂ ಮನೆ ಮುಂದೆ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು
ಕರ‍್ಯಕ್ರಮದಲ್ಲಿ ತಾಲೂಕು ಜೆಡಿಎಸ್ ಅಧ್ಯಕ್ಷ ಕೆ.ಎಸ್ ಮಂಜೇಗೌಡ,ಹಿಂದುಳಿದ ರ‍್ಗಗಳ ಮುಖಂಡ ಬಿ.ಸಿಶಂಕರಾಚಾರ್, ತಾಪಂ ಉಪಾಧ್ಯಕ್ಷೆ ರಮ್ಯ, ತಾಪಂ ಸದಸ್ಯರುಗಳಾದ ನಟರಾಜು, ಸಿವಿ ನಿಂಗರಾಜು,ಉಮೇಶ್ ಮುಖಂಡರಾದ ರಾಜಪ್ಪ ಗೌಡ, ವಿಜಯಕಾಂತ್,ಕೆಎಂಎಫ್ ನರ‍್ದೇಶಕ ಜಯರಾಮ್ ಹಾಗೂ ನೂತನವಾಗಿ ಆಯ್ಕೆಯಾದ ಗ್ರಾಮ ಪಂಚಾಯತಿ ಅಧ್ಯಕ್ಷರುಗಳು ಹಾಗೂ ನೂರಾರು ಸಂಖ್ಯೆಯ ಕರ‍್ಯರ‍್ತರು ಉಪಸ್ಥಿತರಿದ್ದರು
