ಮಲ್ಲೇಶಗೌಡರಿಗೆ ಜಾವಗಲ್ ಪ್ರಸನ್ನ ಬೆಂಬಲ ಘೋಷಣೆ

ಹಾಸನ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಗಳಲ್ಲಿ ಒಬ್ಬರೆಂದೇ ಗುರುತಿಸಲ್ಪಟ್ಟಿದ್ದ ಜಾವಗಲ್ ಪ್ರಸನ್ನ ಕುಮಾರ್,ಕಣದಿಂದ ಹಿಂದೆ ಸರಿದು ಡಾ ಎಚ್.ಎಲ್ ಮಲ್ಲೇಶಗೌಡರಿಗೆ ಬೆಂಬಲ ಘೋಷಿಸಿದ್ದಾರೆ.
ಈ ಸಂಬಂಧ ನಗರದ ಖಾಸಗಿ ಹೋಟೆಲ್ ಸಭಾಂಗದಲ್ಲಿ ತಮ್ಮ 500ಕ್ಕೂ ಹೆಚ್ಚು ಕಸಾಪ ಸದಸ್ಯ ಬೆಂಬಲಿಗರ ಸಭೆ ಕರೆದು ಚಚಿ೯ಸಿ ಎಲ್ಲರ ಸಮ್ಮುಖದಲ್ಲಿ  ಮಲ್ಲೇಶಗೌಡರ ಎದುರಿನಲ್ಲೇ ಅವರಿಗೆ ಬೆಂಬಲ ಘೋಷಿಸಿದರು.
ಈ ವೇಳೆ ಮಾತನಾಡಿದ ಜಾವಗಲ್ ಪ್ರಸನ್ನ ಕುಮಾರ್, ಡಾ.ಎಚ್.ಎಲ್ ಮಲ್ಲೇಶಗೌಡರು ನನಗಿಂತ ಹಿರಿಯರಿದ್ದಾರೆ. ಸಾಹಿತ್ಯಾತ್ಮಕವಾಗಿ ಸಾಕಷ್ಟು ಪ್ರಬುದ್ಧರಿರುವ ಮಲ್ಲೇಶಗೌಡರಿಗೆ ಈ ಬಾರಿ ನಾನು ಬೆಂಬಲಿಸುವುದು ಸೂಕ್ತ ಎಂದು ಹಿರಿಯರೆಲ್ಲರ ಸಲಹೆ ಮೇರೆಗೆ ಹಿಂಸರಿಯುತ್ತಿರುವುದಾಗಿ ತಿಳಿಸಿದರು.
ನಂತರ ಮಾತನಾಡಿದ ಮಲ್ಲೇಶಗೌಡರು,ಸಾಹಿತ್ಯ ಪರಿಷತ್ತಿಗೆ ಜಾವಗಲ್ ಪ್ರಸನ್ನರಂತಹ ಸಾಹಿತ್ಯಾಸಕ್ತರ ಅಗತ್ಯವಿದ್ದು,ಎಲ್ಲರು ಒಟ್ಟಾಗಿ ಕನ್ನಡದ ತೇರು ಎಳೆಯೋಣ ಎಂದರು.
ಈ ಸಂದಭ೯ದಲ್ಲಿ ಸಾಹಿತಿ ಅರಸೀಕೆರೆ ರಾಮಸ್ವಾಮಿ,ರಾಜೇಶ್ವರಿ ಹುಲ್ಲೇನಹಳ್ಳಿ,ಸ.ವೆಂ ಪೂಣಿ೯ಮ,ವನಜಾ ಸುರೇಶ್,ಜಯ ರಮೇಶ್,ಭಾನುಮತಿ,ಅರಸೀಕೆರೆ ತಾಲೂಕು ಕಸಾಪ ಅಧ್ಯಕ್ಷ ಕೆ.ವಿ ಶಿವಮೂತಿ೯,ಕಸಬಾ ಹೋಬಳಿ ಅಧ್ಯಕ್ಷ ದಿವಾಕರ್ ಬಾಬು,ಮಾಜಿ  ಕಾಯ೯ದಶಿ೯ ಶೇಖರ್ ಬಾಬು,ಚನ್ನರಾಯಪಟ್ಟಣ ಕಸಾಪ ಮಾಜಿ ಖಜಾಂಚಿ ಮುಳಕೆರೆ ಪ್ರಕಾಶ್,ಸುನೀಲ್ ಆಡುವಳ್ಳಿ,ರೋಟರಿ ಅಧ್ಯಕ್ಷ ಅರುಣ್ ಕುಮಾರ್,ಜಾ.ಥ ಕೃಷ್ಣಮೂತಿ೯,ಸಾಹಿತಿ ಸಂಘಟಕ ಶಿವಣ್ಣಗೌಡ ಪಾಟೀಲ್,ಕೆಂಪೇಗೌಡ ಸೇನೆಯ ಅಧ್ಯಕ್ಷ  ರಾಜೇಶಗೌಡ,ಭ್ರಮರಾಂಬ ಮಂಜುನಾಥ್ ಸೇರಿದಂತೆ ಹಲವು ಸಾಹಿತಿಗಳು ಹಾಜರಿದ್ದರು.

Post a Comment

Previous Post Next Post