ದೊಡ್ಡಿಹಳ್ಳಿಯಲ್ಲಿ ಬೃಹತ್ ಜಾಗೃತಿ ಸಮಾವೇಶ

"ದೊಡ್ಡಿಹಳ್ಳಿಯಲ್ಲಿ ಬೃಹತ್ ರ‍್ಮ ಜಾಗೃತಿ ಸಮಾವೇಶ "

        :- ಬೇಲೂರು ತಾಲ್ಲೂಕಿನ ದೊಡ್ಡಿಹಳ್ಳಿ ಗ್ರಾಮದ ನೂತನ ದೇಗುಲ‌ ಲೋಕರ‍್ಪಣೆ ಅಂಗವಾಗಿ ಬೃಹತ್ ರ‍್ಮ ಜಾಗೃತಿ ಸಮಾವೇಶವನ್ನು ಮೇ.೩ ರಂದು ನಡೆಯಲಿದ್ದು, ಕರ‍್ಯಕ್ರಮದಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ಬಿ.ವೈ.ವಿಜಯೇಂದ್ರರವರು ಸೇರಿದಂತೆ ರಾಜ್ಯದ ಗಣ್ಯಾತೀತ ವ್ಯಕ್ತಿಗಳ ಆಗಮಿಸುವ ಕರ‍್ಯಕ್ರಮ ಯಶಸ್ವಿಯಾಗಲಿ ಎಂದು ಪುಷ್ಪಗಿರಿ ಮಹಾಸಂಸ್ಥಾನ ಮಠದ ಪೂಜ್ಯ ಶ್ರೀ ಶ್ರೀ ಸೋಮಶೇಖರ ಶಿವಾಚರ‍್ಯ ಮಹಾಸ್ವಾಮಿಗಳು ಹೇಳಿದರು.


    ತಾಲ್ಲೂಕಿನ ದೊಡ್ಡಿಹಳ್ಳಿ ಗ್ರಾಮದಲ್ಲಿ ಮೇ.೩ ರಂದು ನಡೆಯುವ ಬೃಹತ್ ಸಮಾವೇಶದ ಬಗ್ಗೆ ಕರೆಯಲಾದ ಪರ‍್ವಬಾವಿ ಸಭೆಯಲ್ಲಿ ಮಾತನಾಡಿದ ಅವರು ತಾಲ್ಲೂಕಿನ ದೊಡ್ಡಿಹಳ್ಳಿ ಐತಿಹಾಸಿಕವಾಗಿ ಧರ‍್ಮಿಕ ಕ್ಷೇತ್ರದಲ್ಲಿ ಅತ್ಯಂತ ಕಾಣಿಕೆ ನೀಡಿದ ಗ್ರಾಮವಾಗಿದೆ. ಇಲ್ಲಿಯೇ ತಮ್ಮಡಿಹಳ್ಳಿ ಶ್ರೀ ಮಠದ ಶ್ರಿ ಕರಿಬಸವೇಶ್ವರಸ್ವಾಮೀಜಿಗಳು ಐಕ್ಯವಾದ ಗ್ರಾಮದಲ್ಲಿ ಸದ್ಯ ಇಡೀ ಗ್ರಾಮಸ್ಥರು ಸೇರಿ ಐಕ್ಯವಾದ ಸ್ಥಳದಲ್ಲಿ ಗುದ್ದುಗೆವುಳ್ಳ ದೇಗುಲ ಸೇರಿದಂತೆ ಬಸವೇಶ್ವರ ದೇಗುಲ ನರ‍್ಮಿಸಿ, ಲೋಕರ‍್ಪಣೆ ಅಂಗವಾಗಿ ಗ್ರಾಮದಲ್ಲಿ ಬೃಹತ್ ಧರ‍್ಮಿಕ ಸಮಾವೇಶ ಹಮ್ಮಿಕೊಂಡಿದ್ದಾರೆ. ಈ ಕರ‍್ಯಕ್ರಮಕ್ಕೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ, ಖ್ಯಾತ ಪತ್ರರ‍್ತ ಇಂದ್ರಜೀತ್ ಲಂಕೇಶ್. ಮಾಜಿ ಮುಖ್ಯಮಂತ್ರಿಗಳು, ಸಚಿವರು, ಶಾಸಕರು ಆಗಮಿಸುವ ಸಮಾರಂಭದಲ್ಲಿ ವೀರಶೈವ ಲಿಂಗಾಯತ ರ‍್ಮದ ಜಾಗೃತಿ ಸಮಾವೇಶ ರ‍್ಥಪರ‍್ಣವಾಗಿ ನಡೆಯಬೇಕಿದೆ.ಈಗಾಗಲೇ ದೇಶದಲ್ಲಿ ಕೊರೊನಾ ವೈರಸ್ ಎರಡನೇ ಅಲೆ ಇರುವ ಕಾರಣದಿಂದ ಕರ‍್ಯಕ್ರಮದಲ್ಲಿ ಕಡ್ಡಾಯವಾಗಿ ಕೋವಿಡ್ ನೀತಿ ನಿಯಮಗಳನ್ನು ಅನುಸರಿಸಬೇಕಿದೆ. ಈ ಬಗ್ಗೆ ಗ್ರಾಮಸ್ಥರು ಸಂಬಂಧಿಸಿದ ಇಲಾಖೆಗಳ ಸಂರ‍್ಕಿಸಬೇಕಿದೆ. ಇತ್ತೀಚಿನ ದಿನದಲ್ಲಿ ಸಣ್ಣ ಪುಟ್ಟ ಸಮಾಜಗಳು ಸಂಘಟನೆ ಮೂಲಕ ಮುಖ್ಯ ವಾಹಿನಿಗೆ ಬರುತ್ತಿದೆ. ಅಂದು ನಡೆಯುವ ಸಮಾವೇಶಕ್ಕೆ ಮುನ್ನ ಬೃಹತ್ ಬೈಕ್ ಜಾಥ ನಡೆಸಬೇಕಿದೆ. ದಾಸೋಹ, ಹಣಕಾಸು, ಮೆರವಣಿಗೆ, ವೇದಿಕೆ ಸಮಿತಿ ಜವಾಬ್ದಾರಿ ನೀಡಿದರೆ ಮಾತ್ರ ಕರ‍್ಯಕ್ರಮ ಯಶಸ್ವಿಯಾಗುತ್ತದೆ ಎಂದರು.

    ಪುಷ್ಪಗಿರಿ ಮಹಾಸಂಸ್ಥಾನ ಕರ‍್ಯರ‍್ಶಿ ಗ್ರಾನೈಟ್ ರಾಜಶೇಖರ ಮಾತನಾಡಿ, ಸುಮಾರು ೫ ಸಾವಿರ ಅಧಿಕ ಜನರು ಸೇರುವ ದೊಡ್ಡಿಹಳ್ಳಿ ಗ್ರಾಮದ ಸಮಾವೇಶಕ್ಕೆ ಕೊರೊನಾ ಕರಿನೆರಳು ಇದೆ. ದೇವರು ಮತ್ತು ಗುರುಗಳ ಅನುಗ್ರಹದಿಂದ  ಇಳಿಮುಖವಾಗಿ ಇಂತಹ ಧರ‍್ಮಿಕ ಕರ‍್ಯಕ್ರಮ ನಡೆಸಲಿ ಎಂದ ಅವರು ದೊಡ್ಡಿಹಳ್ಳಿ ಸಣ್ಣ ಗ್ರಾಮವಾದರೂ ಇಲ್ಲಿನ ಎಲ್ಲಾ ಕುಟುಂಬಗಳು ಅನುಕೂಲವಾಗಿದ್ದಾರೆ. ವೀರಶೈವ ಲಿಂಗಾಯತ ಸಮಾಜ‌ದಲ್ಲಿ ಇತ್ತೀಚಿನ ದಿನ ಸಂಘಟನೆ ಜೊತೆ ಸಂಸ್ಕಾರ ಕಡಿಮೆಯಾಗಿ ಇತರ ಸಮುದಾಯದ ಟೀಕೆ ಮಾಡುತ್ತಿದ್ದಾರೆ. ಸಮಾಜದವರು ಸಂಘಟನೆ ಮೂಲಕ ಸಭೆ ನಡೆಯಲಿ ಎಂದು ತಿಳಿಸಿದರು.

   ಪರ‍್ವಭಾವಿ ಸಭೆಯಲ್ಲಿ ಬೇಲೂರು ಹಳೇಬೀಡು ‌ಯೋಜನಾ ಪ್ರಾಧಿಕಾರ ಅಧ್ಯಕ್ಷ ಅಡಗೂರು ಬಸವರಾಜು, ತಾಲ್ಲೂಕು ಪಂಚಾಯತ ಸದಸ್ಯ ವಿಜಯಕುಮಾರ್, ದೇಗುಲ ಸೇವಾ ಸಮಿತಿ ಕರ‍್ಯರ‍್ಶಿ ಯಶೋಧರ, ಸಮಾಜದ ಮುಖಂಡರಾದ ಹಿರಣ್ಣಯ್ಯ, ಹಾರೋಹಳ್ಳಿ ಪಾಪಣ್ಣ, ವಕೀಲರಾದ ತಮ್ಮಣ್ಣಗೌಡ ಇನ್ನೂ ಮುಂತಾದವರು ಹಾಜರಿದ್ದರು.

ಬಾಕ್ಸ್ ನ್ಯೂಸ್

    :- ದೊಡ್ಡಿಹಳ್ಳಿ ಗ್ರಾಮದಲ್ಲಿ ಮೇ.೩ ರಂದು ನಡೆಯುವ ರ‍್ಮ ಜಾಗೃತಿ ಸಮಾವೇಶಕ್ಕೆ ಮೂಳೆನಹಳ್ಳಿ ತೋಟಪ್ಪ ಕುಟುಂಬ ೨೦೦ ಪ್ಯಾಕೆಟ್ ಅಕ್ಕಿ ಮತ್ತು  ಇಡೀ ಶಾ‌ಮೀಯಾನ ವೆಚ್ಚವನ್ನು ಗ್ರಾನೈಟ್ ರಾಜಶೇಖರ್ ವಹಿಸಿಕೊಂಡಿದ್ದಾರೆ. ಹೂವಿನ ಅಲಂಕಾರ ಸೇರಿದಂತೆ ನಾನಾ ಕರ‍್ಯಗಳನ್ನು ಈಗಾಗಲೇ ಒಪ್ಪಿಕೊಂಡಿದ್ದಾರೆ ಎಂದು ದೇಗುಲ ಸೇವಾ ಸಮಿತಿ ಕರ‍್ಯರ‍್ಶಿ ಯಶೋಧರ ಹೇಳಿದರು.

ಬಾಕ್ಸ್ ನ್ಯೂಸ್

    ದೊಡ್ಡಿಹಳ್ಳಿ ಮೇ.೩ ರಂದು ಬೃಹತ್ ಸಮಾವೇಶದಲ್ಲಿ ಬಿ.ವೈ.ವಿಜಯೇಂದ್ರರವರು ಆಗಮಿಸುವ ಕಾರಣದಿಂದ ರ‍್ಕಾರದಿಂದ ಗ್ರಾಮದ ಅಭಿವೃದ್ಧಿ ಬಗ್ಗೆ ಗ್ರಾಮಸ್ಥರು ಚಿಂತನೆ ಮಾಡಿ ಸೌಲಭ್ಯ ಪಡೆಯಬೇಕಿದೆ ಎಂದು‌ ಸಮಾಜದ ಮುಖಂಡರಾದ ಹಿರಣ್ಣಯ್ಯ ತಿಳಿಸಿದರು.


Post a Comment

Previous Post Next Post