ಹಾಸನ : ಆಲೂರು ತಾಲೂಕಿನ ಹೊಂಕರವಳ್ಳಿ ಸಮೀಪದ ನಂದೀಶ್ವರ ಎಸ್ಟೇಟ್ ನಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿ ಮೇಲೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಶ್ರೀನಿವಾಸ್ ಗೌಡ ಶನಿವಾರ ರಾತ್ರಿ ದಾಳಿ ನಡೆಸಿ ನೂರಕ್ಕೂ ಹೆಚ್ಚು ಯುವಕ , ಯುವತಿಯರನ್ನು ವಶಕ್ಕೆ ಪಡೆದಿದ್ದಾರೆ.
ಸುಮಾರು ನೂರು ಐಷಾರಾಮಿ ಕಾರು , ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ . ಬೆಂಗಳೂರಿನಿಂದ ಬಂದು ಪಾರ್ಟಿಯಲ್ಲಿ ತೊಡಗಿದ್ದವರಿಂದ ಮಾದಕ ವಸ್ತುಗಳ ಬಳಕೆ ಮಾಹಿತಿ ಆಧರಿಸಿ ತಡ ರಾತ್ರಿ ರೇಡ್ ನಡೆಸಲಾಗಿದೆ.
ವಶಕ್ಕೆ ಪಡೆದವರನ್ನು ಆಲೂರಿನ ವೀರಶೈವ ಕಲ್ಯಾಣ ಮಂಟಪದಲ್ಲಿರಿಸಿ ವಿಚಾರಣೆ ನಡೆಸಲಾಗುತ್ತಿದೆ. ಗಾಂಜಾ ಮುಂತಾದ ಮಾದಕ ವಸ್ತುಗಳು ದೊರಕಿದ್ದು , ಕಾರ್ಯಕ್ರಮ ಆಯೋಜಕರ ಮಾಹಿತಿಯನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ .