ಶ್ರೀ ಬಸವೇಶ್ವರಸ್ವಾಮಿ ದೇವಾಲಯಕ್ಕೆ ಸಿದ್ದಗಂಗಾ ಶ್ರೀಗಳ ಬೇಟಿ.

  ರಂಗಾಪುರ ಗ್ರಾಮದಲ್ಲಿ ಭಕ್ತರ ನಿವಾಸದಲ್ಲಿ ನಡೆದ ರುದ್ರಾಭಿಷೇಕ ಕಾರ್ಯಕ್ರಮದಲ್ಲಿ ಸಿದ್ದಗಂಗಾ ಶ್ರೀಗಳು ಮತ್ತು ಭಕ್ತರು. 

ರಾಮನಾಥಪುರ.;- ವೀರಶೈವ ಸಮಾಜ ಐತಿಹಾಸಿಕ ಪಾರಂಪರೆಯನ್ನು ಹೊಂದಿದ್ದು ಸಮಾಜದ ಎಲ್ಲರೂ ಕೂಡ ಒಗ್ಗೂಡುವಿಕೆಯಿಂದ ಸಹಬಾಳ್ವೆಯಿಂದ ಶ್ರಮಿಸಬೇಕು ಎಂದು ಸಿದ್ದಗಂಗಾ ಪೂಜ್ಯರಾದ ಶ್ರೀ ಸಿದ್ದಲಿಂಗಮಹಾಸ್ವಾಮೀಜಿ ಕಿವಿಮಾತು ಹೇಳಿದರು. 


                                                    

ರಾಮನಾಥಪುರ ಹತ್ತಿರವಿರುವ ದೊಡ್ಡಮಗ್ಗೆ ಹೋಬಳಿ ರಂಗಾಪುರ ಗ್ರಾಮದಲ್ಲಿ ಶರಣ ಶಿವಲಿಂಗಶಾಸ್ತಿç ಅವರ ನಿವಾಸದಲ್ಲಿ ನಡೆದ ರುದ್ರಾಭಿಷೇಕ ಪೂಜಾ ಕಾರ್ಯಕ್ರಮದ ನಂತರ ಅರ್ಶಿವಚನ ನೀಡಿದ ಅವರು ಗುರು ಹಿರಿಯರಲ್ಲಿ ದೇವರಲ್ಲಿ ಭಕ್ತಿ ಮಾರ್ಗದಿಂದ ನಡೆಯಲು ಸಮಾಜ ಭಾಂದವರು ತಮ್ಮ ಮಕ್ಕಳಲ್ಲಿ ಪ್ರಜ್ಞೆ ಬೆಳಸಬೇಕಾಗದೆ ಎಂದು ಸಲಹೆ ನೀಡಿದ ಅವರು ಧಾರ್ಮಿಕ ಅಂತರ ದೂರವಾಗಿ ಒಗ್ಗಟ್ಟಿನಿಂದ ಇದ್ದರೆ ದೇಶದ ಅಭಿವೃದ್ದಿಯೊಂದಿಗೆ ಸೌಹಾರ್ಧ ದೇಶ ನಿರ್ಮಾಣ ಸಾಧ್ಯ, ಸುಖ ಶಾಂತಿಯ ಬದುಕಿಗೆ ಧರ್ಮ ಪರಿಪಾಲನೆಯ ಅಗತ್ಯವಿದೆ ಎಂದರು. 

ಜಿಲ್ಲಾ ಬಿಜೆಪಿ ನಿಕಟಪೂರ್ವ ರೈತಮೋರ್ಚ ಅಧ್ಯಕ್ಷ ರಂಗಾಪುರ ಶಿವಲಿಂಗಶಾಸ್ತಿç ಮಾತನಾಡಿ ಈ ನಾಡಿನ ಜನತೆಯನ್ನು ಕತ್ತಲೆಯಿಂದ ಬೆಳಕಿನ ಕಡೆಗೆ ಕರೆತರುತ್ತಿರುವ ಅನೇಕ ಮಠಗಳು ಸಮಾಜಕ್ಕೆ ಒಳ್ಳೆಯ ಕಾಯಕ ಮಾಡುತ್ತಿವೆ. ಅಂತಹದರಲ್ಲಿ ಸಿದ್ದಗಂಗಾ ಮಠದಲ್ಲಿ ಕರ್ನಾಟಕ ಉತ್ತರ ಭಾಗದಲ್ಲಿ ಅತಿಹೆಚ್ಚು ವಿದ್ಯಾರ್ಥಿಗಳು ಸೇರಿದಂತೆ ಅಂಧ್ರಪ್ರದೇಶ, ಮಹಾರಾಷ್ಟç, ತಮಿಳುನಾಡು ಮೊದಲಾದ ಪ್ರಾಂತ್ಯಗಳಿAದ ಅಧ್ಯಯನಕ್ಕೆಂದು ಸುಮಾರು ೧೦ ಸಾವಿರಕ್ಕೂ ಹೆಚ್ಚು ವಿದ್ಯಾಥಿಗಳು ಶ್ರೀಮಠದಲ್ಲಿ ಜಾತಿ ಭೇದ ಮರೆತು ಕಲಿಯುತ್ತಿರುವುದು ಹೆಮ್ಮೆಯ ವಿಷಯ ಎಂದರು. 

ಈ ಸಂದರ್ಭದಲ್ಲಿ ಬಸವಪಟ್ಟಣ ತೋಂಟದಾರ್ಯ ಮಠ ಶ್ರೀ ಸ್ವತಂತ್ರ ಬಸವಲಿಂಗಶಿವಾಚಾರ್ಯಸ್ವಾಮೀಜಿ, ಕಿರಿಕೊಡ್ಡಿ ಮಠದ ಶ್ರೀ ಸದಾಶಿವಸ್ವಾಮಿಜಿ, ತೇಜೂರು ಮಠ ಕಲ್ಯಾಣಸ್ವಾಮಿಜಿ, ಟಿ. ಮಾಹಿಗೌಡನಹಳ್ಳಿ ಶ್ರೀ ಸೋಮಶೇಖರಶಿವಾಚಾರ್ಯಸ್ವಾಮೀಜಿ, ಅರೆಮೇರಿ ಮಠ ಶ್ರೀಗಳು, ಬಾದಮಿ ಕಿತ್ತಳೆಮಠ ಶ್ರೀಗಳು, ಬೆಂಗಳೂರು ನಿಜಗುಮ ಮಠ ಶ್ರೀಗಳು, ಕೊಡ್ಲಿಪೇಟೆ ಸೋಮಶೇಖರಶಾಸ್ತಿç, ಉದ್ದೂರು ಹೊಸಹಳ್ಳಿ ನಟರಾಜಸ್ವಾಮಿ, ಶರಣಾರಾದ ಅರ್.ಎಸ್. ಗಣೇಶ್, ಶಾಂತಮ್ಮ, ಮಮತಗಣೇಶ್ ಮುಂತಾದವರು ಉಪಸ್ಥಿತರಿದ್ದರು.


 

 



Post a Comment

Previous Post Next Post