ಹಾಸನ ಏ.೨೨ :- ವಿಶ್ವ ಭೂ ದಿನ ಅಂಗವಾಗಿ ಉದ್ದೂರಳ್ಳಿ ಇನ್ಸೂರೆನ್ಸ್ ಪುಟ್ಟೇಗೌಡ ಟ್ರಸ್ಟ್ ವತಿಯಿಂದ ತಮಲಾಪುರ ಕೆರೆ ಪುನಶ್ಚೇತನ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಟ್ರಸ್ಟ್ನ ಜಯರಾಮ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಬಸವರಾಜ್ ಹಸಿರು ಭೂಮಿ ಪ್ರತಿಷ್ಠಾನದ ಅಧ್ಯಕ್ಷ ಪುಟ್ಟಯ್ಯ, ಟ್ರಸ್ಟಿ ಆರ್. ಪಿ. ವೆಂಕಟೇಶಮೂರ್ತಿ, ಕಾರ್ಯದರ್ಶಿ ಚಿನ್ನೇನಹಳ್ಳಿ ಸ್ವಾಮಿ ಪ್ರತಿಷ್ಠಾನದ ಟ್ರಸ್ಟಿ ಹಾಗೂ ಬಿ.ಜಿ.ಎಸ್ ಜಿಲ್ಲಾ ಗೌರವಾಧ್ಯಕ್ಷ ಡಾ. ಸಾವಿತ್ರಿ, ಬಿ.ಜಿ.ವಿ.ಎಸ್ ಹಾಸನ ತಾಲ್ಲೂಕು ಅಧ್ಯಕ್ಷೆ ರಾಧಾ, ಅನನ್ಯ ಟ್ರಸ್ಟ್ನ ಅಧ್ಯಕ್ಷರಾದ ಕೆ.ಟಿ ಜಯಶ್ರೀ, ವರ್ತುಲ ಕೆರೆ ಅಭಿವೃದ್ಧಿ ಸಮಿತಿಯ ಚಂದ್ರಮ್ಮ ಮತ್ತು ಭಾನುಮತಿ, ಹಸಿರುಭೂಮಿ ಪ್ರತಿಷ್ಠಾನದ ಟ್ರಸ್ಟಿಗಳಾದ ಅಪ್ಪಾಜಿಗೌಡ, ರಾಜೀವೇಗೌಡ, ಅಹಮದ್ ಹಗರೆ , ತೇಜೂರು ಗ್ರಾಮ ಪಂಚಾಯಿತಿ ಪಿಡಿಓ ರೋಹಿತ್, ಸಮಾಜಸೇವಕಿ ಕಲಾವತಿ, ವರ್ತುಲ ಕೆರೆ ಅಭಿವೃದ್ಧಿ ಸಮಿತಿ ಸದಸ್ಯರು, ಗ್ರಾಮಸ್ಥರು, ಮತ್ತಿತರರು ಹಾಜರಿದ್ದರು.
Tags
ಹಾಸನ