ಕೊರೋನಾ ನಿಯಂತ್ರಣದ ಜಾಗೃತಿ ಆಂದೋಲನಕ್ಕೆ ನ್ಯಾ. ಶಿವಣ್ಣ ಚಾಲನೆ

© ಹಾಸನ ಸೀಮೆ ನ್ಯೂಸ್

ಹಾಸನ: ದೇಶದಾದ್ಯಂತ ವ್ಯಾಪಕವಾಗಿ ಹರಡುತ್ತಿರುವ ಕೊರೋನಾ ಮಹಾಮಾರಿ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಗುರುವಾರದಂದು ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯಾಂಗ, ವಕೀಲರ ಸಂಘ ಹಾಗೂ ಸ್ಕೌಟ್ ಅಂಡ್ ಗೈಡ್ಸ್ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಾಗೃತಿ ಆಂದೋಲನಕ್ಕೆ ಜಿಲ್ಲಾ ನ್ಯಾಯಾಧೀಶರಾದ ಡಾ. ಶಿವಣ್ಣನವರು ಹಸಿರು ಭಾವುಟ ಪ್ರದರ್ಶಿಸುವುದರ ಮೂಲಕ ಚಾಲನೆ ನೀಡಿದರು.



        ನಂತರ ಮಾತನಾಡಿದ ಅವರು, ಈ ಜಾಗೃತಿ ಜಾಥ ವಾಹನವು ನಾಲ್ಕು ದಿನಗಳ ಕಾಲ ಹಾಸನ ನಗರಾಧ್ಯಂತ ಸಂಚರಿಸಲಿದ್ದು, ಸಾರ್ವಜನಿಕರು ಅನಗತ್ಯವಾಗಿ ಯಾರು ಹೊರಗೆ ಬಾರದೆ ಮನೆಯಲ್ಲಿದ್ದು, ಕೊರೋನಾ ವಿರುದ್ಧ ಹೋರಾಟ ನಡೆಸಬೇಕಾಗಿದೆ. ಇನ್ನು ಅಗತ್ಯ ಕೆಲಸಗಳಿಗಾಗಿ ಬರುವವರು ಕಾನೂನಿನ ನಿಯಮದಂತೆ ಮತ್ತು ತಮ್ಮ ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಬೇಕು ಎಂದರು. ಕರ್ನಾಟಕ ಉಚ್ಛ ನ್ಯಾಯಾಲಯದ ನಿರ್ದೇಶನದಂತೆ ಕೊರೋನಾ ನಿಯಂತ್ರಣಕ್ಕಾಗಿ ಕ್ರಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸುತ್ತಿದ್ದು, ಮಾಸ್ಕ್ ಧರಿಸದವರಿಗೆ ದಂಢ ಹಾಕಲಾಗುತ್ತಿದೆ. ನಿಯಮ ಮೀರದವರಿಗೆ ಪ್ರಕರಣವನ್ನು ಕೂಡ ದಾಖಲಿಸುತ್ತಿದೆ ಎಂದು ಹೇಳಿದರು. ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವು ಕೊರೋನಾ ನಿಯಂತ್ರಣಕ್ಕಾಗಿ ಮತ್ತು ನೆರವಿಗಾಗಿ ಸಹಾಯವಾಣಿ ಸಂಖ್ಯೆ ೧೮೦೦-೪೨೫-೯೦೯೦೦ ತೆರೆಯಲಾಗಿದೆ. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಾಯವಾಣಿ ಸಂಖ್ಯೆ ೦೮೧೭೨-೨೬೮೩೫೬, ಪ್ರಾಧಿಕಾರದ ಪ್ಯಾನಲ್ ವಕೀಲರಾದ ಜಿ.ಎಲ್. ರೋಹಿತ್ ಮೊ. ೯೯೪೫೬೨೯೮೭೨, ರಾಮು ಮೊ. ೮೧೦೫೭೨೧೭೧೯, ತುಳಸಿರಾಮ್ ಮೊ. ೮೯೭೦೫೪೭೮೭೬ ಇಲ್ಲಿಗೆ ಕರೆ ಮಾಡಿ ನೆರವು ಪಡೆಯಬಹುದಾಗಿದೆ ಎಂದು ಮಾಹಿತಿ ನೀಡಿದರು.

     ಇದೆ ವೇಳೆ ವಕೀಲರ ಸಂಘದ ಅಧ್ಯಕ್ಷ ಜೆ.ಪಿ. ಶೇಖರ್, ನ್ಯಾಯಾಧೀಶರಾದ ಬಸವರಾಜು, ಬಿ.ಕೆ. ರವಿಕಾಂತ್ ಹಾಗೂ ಸ್ಕೌಟ್ ಅಂಡ್ ಗೈಡ್ಸ್ ನ ಗಿರೀಶ್, ಭರತ್ ರಾಜು, ಆರ್ಮಿ ರಂಗೇಗೌಡ ಇತರರು ಉಪಸ್ಥಿತರಿದ್ದರು.


Post a Comment

Previous Post Next Post