ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆ ನೌಕರರಿಗೆ ಕೊರೋನಾ ಲಸಿಕೆ

ಹಾಸನ: ನಗರದ ಸಾಲಗಾಮೆ ರಸ್ತೆ ಬಳಿ ಇರುವ ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆ ಆವರಣದಲ್ಲಿ ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಶುಕ್ರವಾರದಂದು ೪೫ ವರ್ಷ ತುಂಬಿದ ಸಂಸ್ಥೆಯ ನೌಕರರಿಗೆ ಮೊದಲ ಬಾರಿಗೆ ಕೋವಿ ಶೀಲ್ಡ್ ಲಸಿಕೆಯನ್ನು ಹಾಕಲಾಯಿತು.


        ಹಾಸನ ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳಾದ ಡಾಕ್ಟರ್ ಕೆ.ಎಂ. ಸತೀಶ್ ಹಾಗೂ ಹಾಸನ ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳಾದ ಡಾಕ್ಟರ್ ವಿಜಯ ರವರ ಸಹಕಾರದೊಂದಿಗೆ ಲಸಿಕೆ ಹಾಕುವ ಕಾರ್ಯಕ್ರಮ ಏರ್ಪಡಿಸಿಲಾಗಿತ್ತು. ೨೦೦ಕ್ಕೂ ಹೆಚ್ಚು ನೌಕರರು ಇದರ ಪ್ರಯೋಜನ ಪಡೆದುಕೊಂಡರು. ಎರಡನೆ ಅಲೆ ಈಗಾಗಲೇ ಹರಡಿದ್ದು, ಮುಂಜಾಗೃತ ಕ್ರಮವಾಗಿ ಮನುಷ್ಯನಲ್ಲಿ ಕೊರೋನಾ ವಿರುದ್ಧ ಹೋರಾಟ ನಡೆಸಲು ಈ ಲಸಿಕೆ ಹಾಕಲಾಗುತ್ತಿದೆ. ಆದರೇ ಕಡ್ಡಾಯವಾಗಿ ಮಾಸ್ಕ್, ಅಂತರ ಕಾಪಾಡುವುದು, ಸ್ಯಾನೀಟೈಸರ್ ಬಳಕೆ ಮಾಡುವುದರ ಬಗ್ಗೆ ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆಯ ಡಾ. ಜ್ಯೋತಿ ರವರು ಅರಿವು ಮೂಡಿಸಿದರು.


Post a Comment

Previous Post Next Post