ವಿಶ್ವ ಪಶುವೈದ್ಯಕೀಯ ದಿನಾಚರಣೆ.

ಹಾಸನ ಏ.೨೧(ಕರ್ನಾಟಕ ವಾರ್ತೆ):- ಪಶುವೈದ್ಯಕೀಯ ವೃತ್ತಿಯ  ಮಹತ್ವವನ್ನು    ತಿಳಿಯಲು ಏ. ೨೪ ರಂದು ವಿಶ್ವ ಪಶುವೈದ್ಯಕೀಯ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.

 


ಇದರ ಪ್ರಯುಕ್ತ ಪಶು ಆಸ್ಪತ್ರೆ, ಸಂತೆಪೇಟೆ, ಹಾಸನ ಇಲ್ಲಿ ಅಂದು ಬೆಳಗ್ಗೆ  ೯ ಗಂಟೆಯಿAದ ೧೧:೩೦ ವರೆಗೆ ರೇಬಿಸ್ (ಹುಚ್ಚು ನಾಯಿ ರೋಗ ) ಕಾಯಿಲೆ ವಿರುದ್ಧ ಉಚಿತ ಲಸಿಕಾ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ಸಾರ್ವಜನಿಕರು ಹಾಗೂ ಸಾಕು ಪ್ರಾಣಿಗಳ ಮಾಲೀಕರು ಸದರಿ ಲಸಿಕಾ ಕಾರ್ಯಕ್ರಮದ ಸದುಪಯೋಗಪಡಿಸಿಕೊಳ್ಳುವಂತೆ ಪಶುಪಾಲನಾ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.


Post a Comment

Previous Post Next Post