ರೈತರು ಸಹಕಾರಿ ಸಂಘಗಳ ಮೂಲಕ ವ್ಯವಹಾರ ಮಾಡಬೇಕು : ಕೆ.ಎಸ್.ಲಿಂಗೇಶ್

 ಜಾವಗಲ್: ರೈತರು ಆರ್ಥಿಕವಾಗಿ ಮೇಲೆ ಬರಬೇಕಾದರೆ ಸಿಲ್ಕ್‌ ಮತ್ತು ಮಿಲ್ಕ್‌ ಕಾರಣ. ರೈತರಿಗೆ ಅವೇ ಆಧಾರಸ್ತಂಭ. ಹಾಲು ಸರಬರಾಜು ಮಾಡಿ ಎಷ್ಟೋ ಕುಟುಂಬಗಳು ಜೀವನ ನಿರ್ವಹಣೆ ಮಾಡುತ್ತಿದ್ದಾರೆ ಎಂದ ಶಾಸಕ ಕೆ.ಎಸ್.ಲಿಂಗೇಶ್ ತಿಳಿಸಿದರು.



     ಸಮೀಪದ ಹಂದ್ರಾಳು ಗ್ರಾಮದಲ್ಲಿ ಭಾನುವಾರ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು ರೈತರು ಸಹಕಾರಿ ಸಂಘಗಳ ಮೂಲಕ ವ್ಯವಹಾರ ಮಾಡಬೇಕು. ಸಹಕಾರಿ ಸಂಘಗಳಲ್ಲಿ ಸಾಲ ಪಡೆದು ವ್ಯವಹಾರ ಮಾಡಬೇಕು. ಖಾಸಗಿ ಬ್ಯಾಂಕ್‌ಗಳ ಆಮಿಷಕ್ಕೆ ಒಳಗಾಗಬಾರದು ಎಂದರು. ಸಂಘದ ಕಾರ್ಯದರ್ಶಿ ಕಾಲ ಕಾಲಕ್ಕೆ ಸರಿಯಾಗಿ ರೈತರ ಬ್ಯಾಂಕ್ ಖಾತೆಗೆ ಹಾಲಿನ ಹಣವನ್ನು ವರ್ಗಾವಣೆ ಮಾಡಬೇಕು. ರೈತರಿಗೆ ಹಣಕ್ಕೆ ಸತಾಯಿಸಬಾರದು ಎಂದರು.
     ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಗೌರಮ್ಮ ಗಂಗಾಭೋವಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹೇಮಾವತಿ ಗಂಗರಾಜು, ಬಂದೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ವಿಶ್ವನಾಥ, ಎಪಿಎಂಸಿ ನಿರ್ದೇಶಕ ದೇಶಾಣಿ ದೇವರಾಜ್, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಶಿವಕುಮಾರ್ ಚಾವಡಿಮನೆ, ನಿರ್ದೆಶಕರಾದ ಬಸವರಾಜು, ಕುಮಾರಸ್ವಾಮಿ, ಬಸವಕುಮಾರ್, ನಾಗರಾಜ್, ಮಲ್ಲೇಶಪ್ಪ, ನಂಜಪ್ಪ, ಕೃಷ್ಣಾಚಾರ್, ಬಸವರಾಜು, ಜಯಮ್ಮ, ಸುವರ್ಣಮ್ಮ, ಹಾಲು ಪರೀಕ್ಷಕ ಮೃತ್ಯುಂಜಯ, ಕಾರ್ಯದರ್ಶಿ ಪ್ರಸನ್ನ, ಬಂದೂರು ನಾಗಣ್ಣ, ಮತ್ತಿತರರು ಇದ್ದರು

Post a Comment

Previous Post Next Post