ಕಾಂಗ್ರೆಸ್ ಹಿರಿಯ ಸದಸ್ಯರ ಕಡೆಗಣನೆ ಕಾರ್ಯಕರ್ತರ ಆಕ್ರೋಶ .


ಬೇಲೂರು ಪುರಸಭೆ  ನಡೆಯುವ ಚುನಾವಣೆಗೆ ಸಂಭಂದಿಸಿದಂತೆ  ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ  ಕಾಂಗ್ರೆಸ್    ಪಕ್ಷದ ಸಮಿತಿಯಲ್ಲಿ    ಹಿರಿಯ  ಸದಸ್ಯರನ್ನು ಉದ್ದೇಶಪೂರ್ವಕವಾಗಿ  ಕಡೆಗಣಿಸಲಾಗಿದೆ ಎಂದು  ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ .

    ಪಟ್ಟಣದ ಪ್ರವಾಸಿ ಮಂದಿರದಲ್ಲಿ   ಮಾಜಿ ಸಚಿವ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಬಿ.ರಮಾನಾಥ ರೈ ಅವರ ನೇತೃತ್ವದಲ್ಲಿ ಪುರಸಭೆ ಅಭ್ಯರ್ಥಿಗಳ ಆಯ್ಕೆ ಪಟ್ಟಿ ಬಗ್ಗೆ ಚರ್ಚೆ ನಡೆಯಿತು. ಈ ಸಂದರ್ಭದಲ್ಲಿ ಸಮಿತಿ ಮಾಡುವಾಗ  ಕೆಪಿಸಿಸಿ ಸದಸ್ಯರನ್ನು ಸೇರಿದಂತೆ   ಸ್ಥಳೀಯ ನಾಯಕರನ್ನು  ಹಾಗೂ ಕೈ ಬಿಡಲಾಗಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರು ತೀವ್ರ ಅಸಮಾಧಾನವನ್ನು ಅಕ್ರೋಶ ವ್ಯಕ್ತಪಡಿಸಿದರು.


ಪುರಸಭೆ  ವ್ಯಾಪ್ತಿಯಲ್ಲಿ ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಬಿ,ರಮಾನಾಥ್ ರೈ ಒಳಗೊಂಡಂತೆ ಹಿರಿಯ ಕಾಂಗ್ರೆಸ್ ನಾಯಕರಾದ ಬಿ,ಶಿವರಾಂ ಎಂ ಎಲ್ ಸಿ ಗೋಪಾಲಸ್ವಾಮಿ ,ಮೋಟಮ್ಮ, ಕೀರ್ತನಾ ರುದ್ರೇಶಗೌಡ,ಗಾಯಿತ್ರಿ ಶಾಂತೇಗೌಡ, ಜವರೇಗೌಡ, ಎಸ್ ಎಂ ಆನಂದ್, ಜಿಲ್ಲಾಧ್ಯಕ್ಷ ಜಾವಗಲ್ ಮಂಜುನಾಥ್,  ವೈ ಎನ್ ಕೃಷ್ಣೇಗೌಡ,  ಎಂ ಆರ್ ವೆಂಕಟೇಶ್ , ಸೈಯದ್ ತೌಫಿಕ್,ನಿಶಾಂತ್ ಹಾಗೂ ಮಾಜಿ ಮೇಯರ್ ಹುಚ್ಚಪ್ಪ,ಇವರನ್ನು ಒಳಗೊಂಡಂತೆ ಸಮಿತಿಯನ್ನು ರಾಜ್ಯ ಕಾಂಗ್ರೆಸ್ ರಚಿಸಲಾಗಿತ್ತು. ಆದರೆ ಈ ಸಮಿತಿಯಲ್ಲಿ ಕೆಪಿಸಿಸಿ ಸದಸ್ಯರಾದ ಸ್ಥಳೀಯ ಪ್ರಮುಖರಾದ ಬಿ ಎಲ್‌ಧರ್ಮೇಗೌಡ ಸೇರಿದಂತೆ ಪಕ್ಷದ ನಿಷ್ಠಾವಂತರನ್ನು ಕಡೆಗಣಿಸಿ ತಮಗೆ ಬೇಕಾದಂತವರಿಗೆ ಮಣೆ ಹಾಕುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಯೂತ್ ಕಾಂಗ್ರೆಸ್  ಮಾಜಿ ಅಧ್ಯಕ್ಷ ಪುನೀತ್ ಗೌಡ, ಬಿರಟೇಮನೆ ಸುರೇಶ್ ,ಬಾಬು ಸೇರಿದಂತೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು, ಈ ವೇಳೆ ಸಭೆಯಲ್ಲಿ ಗೊಂದಲ ಉಂಟಾಯಿತು.  ಜಿಪಂ ಮಾಜಿ ಸದಸ್ಯ ವೈ ಎನ್ ಕೃಷ್ಣೇಗೌಡ ಮಾತನಾಡಿ   ಕಳೆದ ವಿಧಾನಸಭಾ ಚುನಾವಣೆಯಲ್ಲಿ ವೈ ಎನ್ ಕೃಷ್ಣೇಗೌಡ ರ ಪತ್ನಿ ಕೀರ್ತನಾ ರುದ್ರೇಶ್ ಗೌಡ ಅವರು  ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದಾಗ  ಕೆಲವು ಕಾಂಗ್ರೆಸ್ ಮುಖಂಡರು ಪ್ರಚಾರಕ್ಕೆ ಬರದೆ ತಪ್ಪಿಸಿಕೊಂಡಿದ್ದು ರಾತ್ರಿ ವೇಳೆ ನಮ್ಮ ಪಕ್ಷದ ವಿರುದ್ಧವೇ ತಂತ್ರಗಾರಿಕೆ ನಡೆಸಿ ಸೋಲಿಸುವಲ್ಲಿ ಸಫಲರಾಗಿದ್ದರು .       ಈ ಹಿಂದೆ  ಪಕ್ಷ ವಿರೋಧಿ ಚಟುವಟಿಕೆ ನಡೆಸಿ  ಈಗ ಒಗ್ಗಟ್ಟಿನ ಮಂತ್ರ ಜಪಿಸುತ್ತಿದ್ದಾರೆ ಇದಕ್ಕೆ ನಾವು ಹೇಗೆ ಬೆಂಬಲ ಕೊಡುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು . 

ಈ ಸಂದರ್ಭದಲ್ಲಿ   ಅಸಾಮಧಾನಗೊಂಡಿದ್ದವರನ್ನು ಸಮಾಧಾನ ಪಡಿಸಿ ಮಾತನಾಡಿದ ಮಾಜಿ ಸಚಿವ ರಮಾನಾಥ್ ರೈ ಇಲ್ಲಿ ಯಾವುದೇ ಗುಂಪುಗಾರಿಕೆಗೆ ಅವಕಾಶವಿಲ್ಲ. ಹಳೆಯ ಕಹಿ ಘಟನೆಗಳನ್ನು ಮರೆತು ಒಂದಾಗಿ ಇರಲು ಪ್ರಯತ್ನಿಸಬೇಕು . ಇಲ್ಲಿ ಪ್ರತಿಯೊಬ್ಬರೂ ಸಹ ಕಾಂಗ್ರೆಸ್ ಪಕ್ಷದ ನಿಷ್ಟಾವಂತ ಕಾರ್ಯಕರ್ತರು.ಇಲ್ಲಿ ಯಾವುದೇ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಬಂದಿಲ್ಲ.ಸ್ಥಳೀಯರ ಹಾಗೂ ಗೆಲ್ಲುವಂತ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಮೂಲಕ ಪುರಸಭೆಯನ್ನು ನಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಉತ್ಸುಕರಾಗಿದ್ದೇವೆ.ನಾವೂ ಸಹ ಪಕ್ಷದಲ್ಲಿ ತಳಮಟ್ಟದಿಂದ ಬಂದಿದ್ದು ,ಎಲ್ಲರೂ ಸಹ ಉತ್ತಮ ಒಡನಾಟ ಇಟ್ಟುಕೊಂಡಿರುವುದರಿಂದ ಉತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಉದ್ದೇಶದಿಂದ ನಮ್ಮನ್ನು ಸಮಿತಿ ಅಧ್ಯಕ್ಷರನ್ನಾಗಿ ಮಾಡಿದ್ದಾರೆ.ಇಲ್ಲಿ ಗೊಂದಲದಿಂದ ಬೇರೆಯವರಿಗೆ ಪುರಸಭೆಯ ಹಿಡಿತವನ್ನು ಕೊಡುವುದು ಬೇಡ ಎಂದರು.

Post a Comment

Previous Post Next Post