ಹಾಸನ: ಎರಡನೇ ಅಲೆ ವ್ಯಾಪಕವಾಗಿ ಹರಡುವ ಬಗ್ಗೆ ಹಲವಾರು ಜನ ತಜ್ಞರು ಮೊದಲೆ ತಿಳಿಸಿದ್ದರೂ ಬಿಜೆಪಿ ಸರಕಾರ ಗಮನ ನೀಡಿದೇ ಚುನಾವಣೆಯಲ್ಲಿ ಒಂದು ತಿಂಗಳ ಕಾಲ ಕಳೆದಿದೆ. ಜನರ ಪ್ರಾಣದ ಮೇಲೆ ಸರಕಾರ ಚೆಲ್ಲಾಟ ಮಾಡಬಾರದು ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಬೇಸರವ್ಯಕ್ತಪಡಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕೊರೋನಾ ಎರಡನೇ ಹಂತದ ಅಲೆ ಹೆಚ್ಚಾಗುತ್ತಿರುವ ಬಗ್ಗೆ ಸರಕಾರವು ಮೊದಲೆ ಮುಂಜಾಗೃತವಹಿಸಬೇಕಾಗಿತ್ತು. ಇನ್ನು ಚುನಾವಣೆ ಗೆಲುವಿಗಾಗಿ ಎರಡು ರಾಷ್ಟಿçÃಯ ಪಕ್ಷಗಳು ಒಂದು ತಿಂಗಳುಗಳ ಕಾಲ ಸಮಯ ವ್ಯರ್ಥ ಮಾಡಿದ್ದು, ಹಲವಾರು ಜನ ತಜ್ಞರು ೨ನೇ ಅಲೆ ಬಗ್ಗೆ ತಿಳಿಸಲಾಗಿದ್ದರೂ ಕ್ರಮ ತೆಗೆದುಕೊಳ್ಳಲಿಲ್ಲ. ಒಂದು ಕಡೆ ಕೆ.ಎಸ್.ಆರ್.ಟಿ.ಸಿ. ನೌಕರರ ಒಡೆತ, ಮತ್ತೊಂದು ಕಡೆ ಜನಸಾಮಾನ್ಯರಿಗೆ ಸರಕಾರದ ಒಡೆತ. ಬೇರೆ ಬೇರೆ ಸ್ಥಳಗಳಿಂದ ಹಬ್ಬಹರಿದಿನಗಳಲ್ಲಿ ಊರಿಗೆ ಜನರು ಬಂದು ಒಟ್ಟಿಗೆ ಇರುತ್ತಾರೆ. ಸಾರಿಗೆ ನೌಕರರು ತಮ್ಮ ಮುಷ್ಕರವನ್ನು ತಕ್ಷಣದಲ್ಲಿ ಮಾಡಬಾರದಿತ್ತು. ಇದರಿಂದ ಖಾಸಗಿ ವಾಹನ ಮಾಲೀಕರು ಹೆಚ್ಚಿನ ಹಣ ವಸೂಲಿ ಮಾಡುವ ಅವಕಾಶ ಸಿಕ್ಕಿದಂತಾಗಿದೆ. ಸರಕಾರವೇ ಖಾಸಗಿಯವರಿಗೆ ಯಾವ ನಿಯಮ ಮಾಡದೇ ಪ್ರೀ ಆಗಿ ಬಿಟ್ಟಿದೆ ಎಂದು ದೂರಿದ ಅವರು ಸರಕಾರವು ಈಗಲಾದರೂ ಬಡವರ ಆರೋಗ್ಯದಲ್ಲಿ ಚೆಲ್ಲಾಟವಾಡದೆ ಗಮನ ಕೊಡಬೇಕು ಎಂದರು.
೧೦೮ ತುರ್ತು ವಾಹನಕ್ಕೆ ಯಾರು ಹಣ ಕೊಡುತ್ತಾರೆ ಅವರನ್ನು ಕರೆದೊಯ್ಯುತ್ತಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲಿ ಸತ್ತ ಹೆಣಕ್ಕೆ ಚಿಕಿತ್ಸೆ ನೀಡಿದ್ದೇವೆ ಎಂದು ಬಡವರಿಂದ ಹಣ ವಸೂಲಿ ಮಾಡಲಾಗುತ್ತಿದೆ. ಬಡವರು ಔಷಧಿಗೆ ಹಣವಿಲ್ಲದೆ ಪರದಾಡುವ ಪರಿಸ್ಥಿತಿ ಬಂದಿದೆ. ಕೂಡಲೇ ಜಿಲ್ಲಾಧಿಕಾರಿಗಳು ಖಾಸಗಿ ಆಸ್ಪತ್ರೆಗೆ ಕಟ್ಟುನಿಟ್ಟಿನ ಸೂಚನೆ ಕೊಟ್ಟು ಬಡವರನ್ನು ಉಳಿಸಬೇಕು, ಖಾಸಗಿ ಆಸ್ಪತ್ರೆಯಲ್ಲಿ ಬಡವರ ಬಿಲ್ ಗಳನ್ನು ಸರಕಾರವೇ ಪಾವತಿ ಮಾಡುವುದಾಗಿ ಹೇಳಬೇಕು ಎಂದು ಕೋರಿದರು. ಆನರ ಪ್ರಾಣದ ಮೇಲೆ ಚೆಲ್ಲಾಟವನ್ನು ಸರಕಾರ ಆಡಬಾರದು. ರಾಜ್ಯದ ಪ್ರತಿ ಜಿಲ್ಲಾಧಿಕಾರಿಗಳಿಗೆ ೧೦ ಕೋಟಿ ನೀಡಿದರೇ ಸರಕಾರಕ್ಕೆ ಕೇವಲ ೩೦೦ ಕೋಟಿ ರೂ ಮಾತ್ರ ವೆಚ್ಚವಾಗಲಿದೆ, ಇದು ಯಾವ ದೊಡ್ಡ ವಿಷಯ ಎಂದು ಕುಟುಕಿದರು. ಈಬಗ್ಗೆ ಎಲ್ಲಾ ವಿಚಾರವನ್ನು ಜಿಲ್ಲಾಧಿಕಾರಿಗಳಿಗೆ ತಿಳಿಸಲಾಗುವುದು. ಇವರು ಕೂಡ ಕೊರೋನಾ ವಿಚಾರವಾಗಿ ಸತತವಾಗಿ ಸ¨ಭೆಯನ್ನು ಮಾಡುತ್ತಿದ್ದಾರೆ. ಆದರೇ ಸರಕಾರವು ಕೂಡ ಇವರಿಗೆ ಸಹಕರಿಸಬೇಕು ಎಂದರು. ಜಿಲ್ಲೆಯ ಯಾವ ಕಾಮಗಾರಿಗಳಾನ್ನಾದರೂ ಒಂದು ವರ್ಷಗಳ ಕಾಲ ನಿಲ್ಲಿಸಲಿ. ಇದರ ಬದಲು ಬಡವರನ್ನು ಉಳಿಸಿಕೊಳ್ಳಲಿ. ಹಳ್ಳಿಗಳಲ್ಲಿ ಮದ್ಯದಂಗಡಿ ಬೇಡ. ಇದರಿಂದ ಹೆಂಡತಿಯ ತಾಳಿ ಎಲ್ಲಾವನ್ನು ಕಳೆದುಕೊಳ್ಳುವ ಪರಿಸ್ಥಿತಿ ಬಂದಿದೆ ಎಂದು ಸಲಹೆ ನೀಡಿದರು.
ರಾಜ್ಯದ ಆಸ್ತಿ ಉಳಿಯಲಿ ಎಂದರೇ ಸರಕಾರ ಗಮನ ಕೊಡುತ್ತಿಲ್ಲ. ರಾಜ್ಯ ಸರಕಾರವು ಒಂದು ಕಡೆ ರಾಜಕೀಯ ಪಕ್ಷಗಳನ್ನು ಧಮನ ಮಾಡಲು ಬಿಜೆಪಿಯು ಸರಕಾರಿ ವಕೀಲರು ಮತ್ತು ಅಡ್ವೋಕೇಟ್ ಜನರಲ್ ಇಟ್ಟುಕೊಂಡಿದೆ. ಅದರಲ್ಲೂ ಪ್ರಾದೇಶಿಕ ಪಕ್ಷವನ್ನು ಮುಗಿಸಬೇಕು ಎಂದು ಕಾರ್ಯಪ್ರವೃತ್ತರಾಗಿದ್ದಾರೆ ಎಂದು ಕಿಡಿಕಾರಿದ ಅವರು, ಹಾಸನ ಜಇಲ್ಲೆಯಲ್ಲಿ ನಗರಸಭೆ ಬಿಜೆಪಿ ಪಾಲಾದ ವಿಚಾರವಾಗಿ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಇನ್ನು ರಾಜ್ಯದಲ್ಲಿ ಕಾನೂನು ಮಂತ್ರಿಯನ್ನು ರಾತ್ರೋರಾತ್ರಿಯೇ ಬದಲಾವಣೆ ಮಾಡುವ ಪರಿಸ್ಥಿತಿಗೆ ಸರಕಾರ ತಲುಪಿದೆ ಎಂದು ಆತಂಕವ್ಯಕ್ತಪಡಿಸಿದರು