ಹಾಸನ: ನಗರದ ತಣ್ಣೀರುಹಳ್ಳ, ಬೇಲೂರು ರಸ್ತೆಯ ವಿಜಯನಗರ ಬಡಾವಣೆ ಉದ್ಯಾನವನದಲ್ಲಿ ಉಚಿತ ಕಣ್ಣು ಶಸ್ತç ಚಿಕಿತ್ಸಾ ಕಾರ್ಯಕ್ರಮವನ್ನು ಕಾಂಗ್ರೆಸ್ ಮುಖಂಡರಾದ ಬನವಾಸೆ ರಂಗಸ್ವಾಮಿಯವರು ಉದ್ಘಾಟಿಸುವ ಮೂಲಕ ಚಾಲನೆ ನೀಡಿದರು.
ನಂತರ ಮಾತನಾಡಿದ ರಂಗಸ್ವಾಮಿಯವರು, ಕೊರೋನಾ ಇರುವುದರಿಂದ ಸಾಮಾಜಿಕ ಅಂತರದಲ್ಲಿ, ಮಾಸ್ಕ್ ಕಡ್ಡಾಯದೊಂದಿಗೆ ಉಚಿತ ಕಣ್ಣಿನ ಶಸ್ತç ಚಿಕಿತ್ಸೆ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಕಣ್ಣಿನ ಪರೀಕ್ಷೆ ಮತ್ತು ಶಸ್ತç ಚಿಕಿತ್ಸೆಯನ್ನು ಆಯೋಜಿಸಲಾಗಿದೆ. ಜೊತೆಯಲ್ಲಿ ಕೋವ್ಯಾಕ್ಸಿನನ್ನು ಕೊಡಲಾಗುತ್ತಿದೆ ಎಂದರು. ಇದು ಮೊದಲ ಹಂತದಲ್ಲಿ ಪ್ರಾರಂಭಿಸಿದ್ದು, ಹಿರಿಯ ಜೀವಿಗಳಿಗೆ ನೆರವಾಗುವ ಉದ್ದೇಶದಲ್ಲಿ ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಆರೋಗ್ಯ ಶಿಬಿರಗಳನ್ನು ಹಮ್ಮಿಕೊಳ್ಳಲಾಗುವುದು. ಶಿಬಿರದಲ್ಲಿ ಬಳಗದ ವರದ ಪ್ರಸಾದ್, ಸುನೀಲ್, ಮೋಹನ್, ರಘು ಹಾಗು ಐಕೇರ್ ನ ಗೌತಮಿ, ಮಹದೇವ್ ಇವರ ಸಹಕಾರದಲ್ಲಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
Tags
ಹಾಸನ