ಪರೀಕ್ಷೆ ಮುಂದೂಡಲು ಆಗ್ರಹಿಸಿ ಎಂಸಿಇ ಕಾಲೇಜು ವಿದ್ಯಾರ್ಥಿಗಳ ಪ್ರತಿಭಟನೆ


ಹಾಸನ : ತಾಂತ್ರಿಕ ಪರೀಕ್ಷೆ ಮುಂದೂಡಲು ಒತ್ತಾಯಿಸಿ ಎಂಸಿಇ ವಿದ್ಯಾರ್ಥಿಗಳು ಎಬಿವಿಪಿ ನೇತೃತ್ವದಲ್ಲಿ ಕಾಲೇಜು ಮುಂದೆ ಪ್ರತಿಭಟನೆ ನಡೆಸಿದರು.

    ಹಾಸನದ ಮಲೆನಾಡು ತಾಂತ್ರಿಕ  ಮಹಾವಿದ್ಯಾಲಯ ಕಾಲೇಜಿನ ಹಲವರಿಗೆ ಕೊರೋನಾ ಬಂದಿದ್ದು, ಜೀವ ಉಳಿಸಿಕೊಳ್ಳುವುದೇ ಕಷ್ಟಕರವಾಗಿರುವಾಗ ಇಂತಹ ಸಂಕಷ್ಟದ ಕಾಲದಲ್ಲಿ ಪರೀಕ್ಷೆ ಬೇಡ ಎಂದು ಕಾಲೇಜು ವಿದ್ಯಾರ್ಥಿಗಳು ಒತ್ತಾಯಿಸಿದರು. ಕಾಲೇಜು ಮುಖ್ಯಧ್ವಾರದ ಮುಂದೆ ಧರಣಿ ಕುಳಿತು ನೂರಾರು ವಿದ್ಯಾರ್ಥಿಗಳು ಆಡಳಿತ ಮಂಡಳಿಯ ನಿರ್ಧಾರವನ್ನು ಖಂಡಿಸಿ ಘೋಷಣೆ ಕೂಗಿದರು. ಸ್ವಾಯತ್ತ ಕಾಲೇಜು ಆಗಿರುವುದರಿಂದ ಕಾಲೇಜು ಆಡಳಿತ ಮಂಡಳಿ ಪರೀಕ್ಷೆ ಮುಂದೂಡಬೇಕು. ಈ ಸಮಯದಲ್ಲಿ ಪರೀಕ್ಷೆ ನಡೆಸುವುದು ಸೂಕ್ತವಲ್ಲ. ಕೋವಿಡ್ ತೀವ್ರತೆ ಮುಗಿದ ಬಳಿಕ ಪರೀಕ್ಷೆ ನಡೆಸಲಿ ನಮ್ಮ ಅಭ್ಯಂತವಿಲ್ಲ ಎಂದರು.  ಕೂಡಲೇ ಕಾಲೇಜಿನ ಆಡಳಿತ ಮಂಡಳಿ ಪರೀಕ್ಷೆಯನ್ನು ಮುಂದೂಡುವAತೆ ಪ್ರಾಂಶುಪಾಲರಿಗೆ ಮನವಿ ಸಲ್ಲಿಸಿದರು.

       ಇದೆ ವೇಳೆ ಎಬಿವಿಪಿ ಮುಖಂಡ ಬೊಮ್ಮಣ್ಣ, ಭರತ್ ಇತರರು ಉಪಸ್ಥಿತರಿದ್ದರು.

Post a Comment

Previous Post Next Post