ಹಾಸನ: ಕನ್ನಡ ಸೇವೆ ಮಾಡಲು ಮತ್ತು ನಾ ಕಂಡಿರುವ ಕನಸ್ಸುಗಳ ಮಹಾಯೋಜನೆಗಳನ್ನು ಜಾರಿಗೊಳಿಸಲು ಮೇ.೯ ರಂದು ನಡೆಯುವ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ಚುನಾವಣೆಯಲ್ಲಿ ನನ್ನನ್ನು ಬೆಂಬಲಿಸುವAತೆ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ ಮಾಯಣ್ಣ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರದಂದು ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತಿನ ಮೂಲಕ ನಾಡು-ನುಡಿಯ ಸರ್ವತೋಮುಖ ಬೆಳವಣಿಗೆಗೆ ಆರ್ಥಿಕ ಬಲ ಅತ್ಯವಶ್ಯಕ. ಅಖಿಲ ಭಾರತ, ಜಿಲ್ಲಾ, ತಾಲೂಕು, ವಿಧಾನಸಭಾ ಕ್ಷೇತ್ರ ಹಾಗೂ ವಾರ್ಡ್ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ, ಹೊಸ ಮುದ್ರಣಾಲಯದ ಸ್ಥಾಪನೆ, ಕನ್ನಡ ನುಡಿ ಪ್ರತಿಕ್ರಿಯೆ ವಿಸ್ತಾರ ಮೊದಲಾದ ಆತ್ಯವಶ್ಯಕ ಕಾರ್ಯಕ್ರಮಗಳಿಗಾಗಿ ಬೃಹತ್ ಮೊತ್ತ ಅಗತ್ಯವಿದ್ದು, ಸರಕಾರದಿಂದ ಒದು ಸಾವಿರ ಕೋಟಿ ರೂಗಳ ಶಾಶ್ವತ ನಿಧಿ ಪಡೆಯುವ ಉದ್ದೇಶ ಹೊಂದಲಾಗಿದೆ ಎಂದರು. ಸುಸರ್ಜಿತ ಪುಸ್ತಕಗಳ ಮಳಿಗೆ, ಪುಸ್ತಕಗಳಿಗೆ ಪುರಸ್ಕಾರ, ರಾಷ್ಟಿçÃಯ ಕನ್ನಡ ಪೀಠ ಪ್ರಶಸ್ತಿ, ಸ್ಮಾರ್ಟ್ ಕಾರ್ಡ್, ಸಾಹಿತ್ಯ ಭವನಗಳ ನಿರ್ಮಾಣ, ಗೌರವ ಸದಸ್ಯತ್ವ ಸೇರಿದಂತೆ ಇತರೆ ಉದ್ದೇಶಗಳನ್ನು ಹೊಂದಿರುವುದಾಗಿ ಹೇಳಿದರು. ಕಸಾಪ ಮತ ಬಾಂಧವರು ರಾಜ್ಯಾಧ್ಯಕ್ಷ ಸ್ಥಾನಕ್ಕಾಗಿ ನನಗೆ ಒಂದು ಮತವನ್ನು ಕೊಡುವುದರ ಮೂಲಕ ನಿಮ್ಮ ಸೇವಾಕಾಂಕ್ಷಿಗೆ ಅವಕಾಶ ಕಲ್ಪಿಸುವಂತೆ ಕೋರಿದರು.
