ಹಾಸನ ಏ.೨೩ :- ಜಿಲ್ಲೆಯಲ್ಲಿ ಕೋವಿಡ್ ಎರಡನೇ ಅಲೆ ದಿನೇ ದಿನೇ ಹೆಚ್ಚುತ್ತಿರುವುದರಿಂದ ನಿಯಂತ್ರಣ ಕ್ರಮ ಹಾಗೂ ಚಿಕಿತ್ಸ ಸೌಲಭ್ಯಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ವೃದ್ದಿಸಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಅಬಕಾರಿ ಸಚಿವರಾದ ಕೆ.ಗೊಪಾಲಯ್ಯ ಅವರು ತಿಳಿಸಿದ್ದಾರೆ.
ಬೇಲೂರಿನಲ್ಲಿಂದು ಲೋಕಸಭಾ ಸದಸ್ಯರಾದ ಪ್ರಜ್ವಲ್ ರೇವಣ್ಣ ಅವರ ಉಪಸ್ಥಿಯಲ್ಲಿ ಕೋವಿಡ್-೧೯ ನಿಯಂತ್ರಣ ಕ್ರಮ ಕುರಿತು ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು ಕಳೆದ ಬಾರಿ ಆಶಾ ಕಾರ್ಯಕರ್ತೆಯರು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಿದ್ದು, ಆದರೆ ಈ ಬಾರಿಯೂ ಅದೇ ರೀತಿ ಸಮರ್ಪಣ ಸೇವೆ ಅಗತ್ಯ ಎಂದರು.
ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನಿಡಿ ಕೊರೋನಾ ನಿಯಂತ್ರಣದ ಬಗ್ಗೆ ಅರಿವು ಮೂಡಿಸಿ ಔಷಧಿ ಮಾತ್ರೆಗಳನ್ನು ನೀಡಬೇಕು. ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸಿದರೆ ಕೊರೋನಾ ತಡೆಯಲು ಸಹಕಾರಿಯಾಗಬೇಕು ಎಂದು ಅವರು ಹೇಳಿದರು ಎಂದರು
ಎಲ್ಲಾ ಆಸ್ಪತ್ರೆಗಳಲ್ಲಿ ಯಾವುದೇ ಔಷಧಿಗಳ ಕೊರತೆ ಇಲ್ಲ ಯಾವುದೇ ರಿತಿ ಇತರ ಸಮಸ್ಯೆ ಇದ್ದರೂ ನನ್ನನ್ನು ಭೇಟಿ ಮಾಡಿ ಎಂದು ಸಚಿವರು ಅಧಿಕಾರಿಗಳಿಗೆ ತಿಳಿಸಿದರು.
ಜನರ ಸರ್ಕಾರ ನಿಮ್ಮ ಜೊತೆಯಲ್ಲಿದ್ದು, ಎಲ್ಲಾ ಸೌಲಭ್ಯವನ್ನು ನೀಡಲಾಗುತ್ತದೆ ಜನರು ಭಯಪಡುವ ಅವಶ್ಯಕತೆ ಇಲ್ಲ ಎಂದು ತಿಳಿಸಿದರು.
ಸಭೆಯಲ್ಲಿ ಮಾತನಾಡಿದ ಲೋಕಸಭಾ ಸದಸ್ಯರಾದ ಪ್ರಜ್ವಲ್ ರೇವಣ್ಣ ಅವರು ದಿನೇ ದಿನೇ ಸೋಂಕಿನ ಪ್ರಮಾಣ ಹೆಚ್ಚ÷್ಳವಾಗುತ್ತಿದ್ದು ಅದನ್ನು ನಿಯಂತ್ರಿಸಲು ಇನ್ನಷ್ಟೂ ಕಟ್ಟುನಿಟ್ಟಿನ ಕ್ರಮಗಳು ಅಗತ್ಯ ತಾಲ್ಲುಕು ಆಸ್ಪತ್ರೆಯಲ್ಲಿ ವೆಂಟಿಲೇಟರ್ ಸೇರಿದಂತೆ ಚಿಕಿತ್ಸಾ ಸೌಲಭ್ಯವನ್ನು ಉನ್ನತಿಕರಣ ಮಾಡಬೇಕು ಜೊತೆಗೆ ಹೆಚ್ಚಿನ ಅನುದಾನ ಕೂಡ ಒದಗಿಸಬೇಕು ಎಂದರು.
ಜಿಲ್ಲೆಯಲ್ಲಿ ಸೋಂಕಿನ ವ್ಯಾಪಕತೆಯ ತೀವ್ರತೆ ಕಳವಳಕಾರಿಯಾಗಿದ್ದು, ಈಗಲೇ ಮುಂಜಾಗ್ರತೆ ವಹಿಸಿ ಸೌಲಭ್ಯ ಹೆಚ್ಚಿಸಬೇಕಿದೆ ಎಂದು ಪ್ರಜ್ವಲ್ ರೇವಣ್ಣ ಹೇಳಿದರು.
ಶಾಸಕರಾದ ಕೆ.ಲಿಂಗೇಶ್ ಅವರು ಮಾತನಾಡಿ ತಾಲ್ಲೂಕಿನಲ್ಲಿ ಉತ್ತಮ ಆಸ್ಪತ್ರೆ ಇದ್ದು ಇಲ್ಲಿನ ಸೌಲಭ್ಯ ವೃದ್ದಿಯಾಗಬೇಕು ಸ್ಥಳೀಯವಾಗಿಯೂ ಸೋಂಕಿತರ ಚಿಕಿತ್ಸೆಗೆ ಎಲ್ಲಾ ರೀತಿಯ ಅನುಕೂಲಗಳ ಸೃಷ್ಠಿಯಾಗಬೇಕು, ಇದರಿಂದ ಹಿಮ್ಸ್ ಆಸ್ಪತ್ರೆಯ ಮೇಲಿನ ಹೊರೆ ಕಡಿಮೆಯಾಗಲಿದೆ ಎಂದು ಹೇಳಿದರು.
ಸಭೆಯಲ್ಲಿ ಉಪ ವಿಭಾಗಾಧಿಕಾರಿ ಗಿರೀಶ್ ನಂದನ್ ತಹಸೀಲ್ದಾರ್ ನಟೇಶ್, ತಾಲ್ಲೂಕು ಕಾರ್ಯನಿರ್ವಾಹಣಾಧಿಕಾರಿ ರವಿಕುಮಾರ್ ಉಪಸ್ಥಿತರಿದ್ದರು.
