ಅರಕಲಗೂಡು ಸರ್ಕಾರದ ಕೋವಿಡ್ ಮಾರ್ಗಸೂಚಿಯನ್ನು ಗಾಳಿಗೆ ತೂರಿ 50 ಜನಗಳಿಗಿಂತ ಹೆಚ್ಚಾಗಿ ಜನಗಳನ್ನು ಸೇರಿಸಿ ಮದುವೆ ಮಾಡಲು ಅವಕಾಶ ಮಾಡಿಕೊಟ್ಟಿದ್ದ ಪಟ್ಟಣದ ಎರಡು ಕಲ್ಯಾಣ ಮಂಟಪಗಳನ್ನು ತಹಶಿಲ್ದಾರ್ ವೈ.ಎಮ್.ರೇಣುಕುಮಾರ್ ಹಾಗೂ ವೃತ್ತ ನಿರೀಕ್ಷಕ ಸತ್ಯ ನಾರಾಯಣ್ ಸೀಸ್ ಮಾಡಿ ಪ್ರಕರಣ ದಾಖಲಿಸಿದಾರೆ.
ಪಟ್ಟಣ್ಣದ ಸಮೀಪದ ಶಂಭುನಾಥಪುರದ ಗ್ರಾಮದಲ್ಲಿ ಇರುವ ಮಾರುತಿ ಕಲ್ಯಾಣ ಮಂಟಪ ಮತ್ತು ಲತಾಮಹೇಶ್ ಕಲ್ಯಾಣ ಮಂಟಪಗಳಲ್ಲಿ ಇಂದು ನಡೆಯುತ್ತಿದ್ದ ಮದುವೆಗಳಲ್ಲಿ ಕೋವಿಡ್ ನಿಯಮಗಳನ್ನು ಪಾಲಿಸದೆ ಅಧಿಕ ಸಂಖ್ಯೆಯಲ್ಲಿ ಜನಗಳನ್ನು ಸೇರಿಸಿ ಯಾವುದೇ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ನೆಡೆಯುತ್ತಿದ್ದ ಮದುವೆಗೆ ದೀಡಿರ್ ದಾಳಿ ಮಾಡಿದ ತಹಶಿಲ್ದಾರ್ ರೇಣುಕುಮಾರ್ ಮತ್ತು ವೃತ್ತ ನಿರೀಕ್ಷಕ ಸತ್ಯ ನರಾಯಣ್ ಅಲ್ಲಿ ಸೇರಿದ ಜನಗಳನ್ನು ಕಳಿಸಿ ಮದುವೆ ಸಮಾರಂಭ ಮುಗಿದ ಕೂಡಲೇ ಕಲ್ಯಾಣ ಮಂಟಪವನ್ನು ಸೀಸ್ ಮಾಡಿ ಪ್ರಕರಣ ದಾಖಲಿಸಲಾಗಿದೆ ಎಂದು ತಹಶಿಲ್ದಾರ್ ರೇಣುಕುಮಾರ್ ತಿಳಿಸಿದರು.