೨೪ ತೀರ್ಥಂಕರರ ವೃಕ್ಷಗಳಿಗೆ ಪೂಜೆ ಸಲ್ಲಿಸಿ ಮಹಾವೀರಜಯಂತಿ ಆಚರಣೆ ನಡೆದಿದೆ.



ನಾಡಿನ ಎಲ್ಲೆಡೆ ಮಹಾವೀರ ಜಯಂತಿ ಸರಳವಾಗಿ ಮನೆ-ಮನೆಗಳಲ್ಲಿ ಆಚರಣೆಯಾಗುತ್ತಿದೆ.ಕೊರೋನಾ ಕಾರಣ ಸರಳವಾಗಿ ಶ್ರವಣಬೆಳಗೊಳದ ಶ್ರೀ ಕ್ಷೇತ್ರದದಲ್ಲಿ ನಡೆದಿದೆ.ತಾ//ನ ಬೆಕ್ಕ ಗ್ರಾಮದ ಪ್ರಗತಿಪರ ರೈತ ಹಾಗೂ ೨೪ ತೀರ್ಥಂಕರರಗಳ ವೃಕ್ಷಗಳನ್ನು ಬೆಳೆಸಿರುವುದು ರಾಘವೆಂದ್ರ ಅವರ ತೋಟದಲ್ಲಿ  ಈ ಬಾರಿಯ ಮಹಾವೀರ ಜಯಂತಿ ಕರ‍್ಯಕ್ರಮ ವೃಕ್ಷಗಳಿಗೆ ಪೂಜೆ ಸಲ್ಲಿಸುವ ಮೂಲಕ ವೃಕ್ಷ ಪ್ರೇಮದ ಸಂಗಡ ನಡೆದಿರುವುದು ವಿಶೆಷ. ಮಹಾವೀರ ತೀರ್ಥಂಕರರಿಗೆ ಜೈಕಾರ ಹಾಕುತ್ತಾ. ವೃಕ್ಷಗಳಿಗೆ ಪೂಜೆಯನ್ನು ಸಲ್ಲಿಸಲಾಯಿತು. ವರ್ಧಮಾನ-ಶಾಲ್ಮಲಿ ವೃಕ್ಷ, ಪಾಶ್ವನಾಥ, ಧವಳವೃಕ್ಷ ಮುನಿಸುವ್ರತ-ಚಂಪಕವೃಕ್ಷ, ನೇಮಿನಾಥ-ಬುಳವೃಕ್ಷ, ನೇಮಿನಾಥ-ಬಿದಿರು, ಮಲ್ಲಿನಾಥ-ಅಶೋಕವೃಕ್ಷ, ಅರನಾಥ-ಅಮ್ರಕಂದುನಾಥ-ತಿಲಕವೃಕ್ಷ-ನAದಿವೃಕ್ಷ, ಧರ್ಮನಾಥ-ಪಕಿಲವೃಕ್ಷ, ಅನಂತನಾಥ-ಅಶ್ವಥವೃಕ್ಷ, ನಿರ್ಮಲಾನಾಥ-ಜಂಬೂವೃಕ್ಷ, ವಾಸುಪೂಜ್ಯ-ಕದಂಬವೃಕ್ಷ, ಶ್ರೇಯಾಂಸನಾಥ-ರಿAದುಕಾವೃಕ್ಷ, ಪುಷ್ಪದಂತ-ಬಬೀತಕ ವೃಕ್ಷ, ಶೀತಲನಾಥ-ಬಿಲ್ವವೃಕ್ಷ, ಸುಪಾಶ್ವನಾಥ-ಶರೀಷವೇಕ್ಷ, ಚಂದ್ರಪ್ರಭ-ನಾಗಕೇಸರವೃಕ್ಷ, ಪದ್ಮಪ್ರಭ-ಪ್ರಿಯಾಂಗುವೃಕ್ಷ, ಸುಮತಿನಾಥ-ಪ್ರಿಯಾಂಗುವೃಕ್ಷ, ಅಭಿನಂದನ-ಸರಳವೃಕ್ಷ, ಅಜಿತನಾಥ-ಸಪ್ತ ಪರ್ಣೀವೃಕ್ಷ, ಶಂಭವನಾಥ-ಮತ್ತಿವೃಕ್ಷ, ವೃಷಭನಾಥ-ವಟವೃಕ್ಷಗಳಿಗೆ, ಜೈನ ಬಂಧುಗಳು ಪೂಜೆ ಸಲ್ಲಿಸಿ, ಮಹಾವೀರಜಯಂತಿ ಆಚರಿಸಿದ್ದು ವಿಶೇಷವಾಗಿತ್ತು. ಬೆಕ್ಕ ರಾಘವೇಂದ್ರಅವರು ಸಾವಯವಕೃಷಿಕರಾಗಿದ್ದು, ೨೪ ತೀರ್ಥಂಕರ ವೃಕ್ಷ ಬೆಳೆಸಿದ ಅಪರೂಪದ ವ್ಯಕ್ತಿಯಾಗಿದ್ದಾರೆ.


Post a Comment

Previous Post Next Post