ಬೇಲೂರು ಪುರಸಭಾ ಚುನಾವಣೆ ಹಿನ್ನಲೆಯಲ್ಲಿ ಶ್ರೀ ಚನ್ನಕೇಶವ ದೇವಾಲಯದಲ್ಲಿ ಗೆಲುವಿಗಾಗಿ ವಿಶೇಷ ಪೂಜೆ

 ಬೇಲೂರು:ಈ ಬಾರಿ ಜೆಡಿಎಸ್ ಪಕ್ಷ ಮತ್ತೆ ಪುರಸಭೆಯ ಅಧಿಕಾರ ಹಿಡಿಯುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಸಂಸದ ಪ್ರಜ್ವಲ್ ರೇವಣ್ಣ ತಿಳಿಸಿದರು.



     ಪುರಸಭಾ ಚುನಾವಣೆ ಹಿನ್ನಲೆಯಲ್ಲಿ ಶ್ರೀ ಚನ್ನಕೇಶವ ದೇವಾಲಯದಲ್ಲಿ ಅಭ್ಯರ್ಥಿಗಳ ಗೆಲುವಿಗಾಗಿ ವಿಶೇಷ ಪೂಜೆ ಸಲ್ಲಿಸಿ ದೇಗುಲದಿಂದ ಪುರಸಭೆಯವರೆಗೂ ಪಾದಯಾತ್ರೆ ಮಾಡುವ ಮೂಲಕ ಆಗಮಿಸಿ ಜೆಡಿಎಸ್ ಪಕ್ಷದ ಅಭ್ಯರ್ಥಿಗಳ ಜೊತೆ ನಾಮಪತ್ರ ಸಲ್ಲಿಸಿ ಮಾತನಾಡಿದ ಅವರು ಈ ಬಾರಿ ನಮ್ಮ ನಿಷ್ಟಾವಂತ ಕಾರ್ಯಕರ್ತರಿಗೆ ಪಕ್ಷದಲ್ಲಿ ಯಾವುದೇ ಜಾತಿ ,ಮತ,ಭೇದವಿಲ್ಲದೆ ಎಲ್ಲಾ ಜನಾಂಗದವರಿಗೂ ಸಾಮಾಜಿಕ ನ್ಯಾಯ ದೊರಕಿಸುವ ಉದ್ದೇಶದಿಂದ ಜಾತ್ಯಾತೀತದ ನಿಲುವು ಸಿದ್ಧಾಂತ ಇಟ್ಟುಕೊಂಡು ಪ್ರತಿಯೊಬ್ಬರಿಗೂ ಸಹ ಸಮಾನವಾಗಿ ಟಿಕೇಟ್ ಹಂಚಿಕೆ ಮಾಡಲಾಗಿದೆ.ಈ ಹಿಂದೆ ಪುರಸಭೆಯಲ್ಲಿ ನಮ್ಮ ಪಕ್ಷ ಅಧಿಕಾರದಲ್ಲಿದ್ದಾಗ ಉತ್ತಮ ಆಡಳಿತ ನೆಡೆಸುವ ಮೂಲಕ ಶಾಸಕರ ನೇತೃತ್ವದಲ್ಲಿ ಸುಮಾರು ೯೦೦ ಕೋಟಿ ಅನುದಾನ ತಂದು ವಿವಿಧ ಕಾಮಗಾರಿಗಳನ್ನು ನಡೆಸಲಾಗಿದೆ.ಈ ಬಾರಿ ೨೩ ವಾರ್ಡ್ ಗಳಲ್ಲಿ ೨೨ ವಾರ್ಡ್ ಗಳಿಗೆ ಎಲ್ಲಾ ವರ್ಗದವರಿಗೂ ಟಿಕೇಟ್ ಹಂಚಲಾಗಿದೆ. ೧೮ ವಾರ್ಡ್ ಗಳಲ್ಲಿ ಜೆಡಿಎಸ್ ಜಯಭೇರಿ ಬಾರಿಸುವ ಮೂಲಕ ಮತ್ತೆ ಪುರಸಭೆಯ ಅಧಿಕಾರ ಹಿಡಿಯುವುದು ಶತಸಿದ್ಧ .ನಮ್ಮಲ್ಲಿ ಯಾವುದೇ ರೀತಿಯ ಗೊಂದಲವಿಲ್ಲ,ವಾರ್ಡ್ ಸಭೆಯಲ್ಲಿ ಹಾಗೂ ಕಾರ್ಯಕರ್ತರ ಒಮ್ಮತದ ನಿರ್ಣಯ ಪಡೆದು ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.

ಶಾಸಕ ಕೆ ಎಸ್ ಲಿಂಗೇಶ್ ಮಾತನಾಡಿ ಹೆಚ್ ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದ ಕಾಲದಲ್ಲಿ ೫೦ ಕೋಟಿ ವೆಚ್ಚದಲ್ಲಿ ವಿವಿಧ ಕಾಮಗಾರಿ ನಡೆಸಿದ್ದು,ಕುಡಿಯುವ ನೀರು,ರಸ್ತೆ,ಚರಂಡಿ ,ಸೌಲಭ್ಯಗಳನ್ನು ಕಲ್ಪಿಸುವ ಜೊತೆಗೆ ೨೪x೭ ಕಾಲ ಕುಡಿಯುವ ನೀರಿನ ಯೋಜನೆಗೆ ಚಾಲನೆ ನೀಡಲಾಗುತ್ತಿದೆ. ಬಹುಮುಖ್ಯ ವಾಗಿ ಭಸ್ಮೀಕರಣ ಹೊಂಡವನ್ನು ಬೇರೆಡೆಗೆ ಸ್ಥಳಾಂತರಿಸಲು ಈಗಾಗಲೇ ಕಾರ್ಯ ಯೋಜನೆ ಮಾಡಲಾಗಿದೆ.ಇದರ ಜೊತೆಗೆ ಬಸ್ ನಿಲ್ದಾಣ ನವೀಕರಣ ,ಮುಖ್ಯರಸ್ತೆ ಅಗಲೀಕರಣಕ್ಕೆ ಈಗಾಗಲೇ ಚಾಲನೆ ನೀಡಲಾಗುತ್ತಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ತಾಲೂಕು ಅದ್ಯಕ್ಷ ತೊಚ ಅನಂತ ಸುಬ್ಬರಾಯ್ ,ಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಎಂಎ ನಾಗರಾಜ್, ಮುಖಂಡರಾದ ಬಿಡಿ ಚಂದ್ರೇಗೌಡ,ಬಿಸಿ ಮಂಜುನಾಥ್,ಚೇತನ್ ಕುಮಾರ್,ಪ್ರಧಾನ ಕಾರ್ಯದರ್ಶಿ ಸಿಹೆಚ್ ಮಹೇಶ್,ನಾಗೇಶ್,ದಿಲೀಪ್,ಶ್ರೀನಿಧಿ ಸೇರಿದಂತೆ ಇನ್ನು ಮುಂತಾದವರು ಹಾಜರಿದ್ದರು.

Post a Comment

Previous Post Next Post