ಹಾಸನ: ನಗರದ ಸರಕಾರಿ ನರ್ಸಿಂಗ್ ಕಾಲೇಜಿನಲ್ಲಿ ಪರೀಕ್ಷಾ ಪತ್ರಿಕೆ ಸ್ಕಾö್ಯನ್ ಮಾಡುವ ವೇಳೆ ಉತ್ತರ ಪತ್ರಿಕೆಯ ಬರಹವನ್ನು ಹೊಡೆದು ಹಾಕಿರುವ ಬಗ್ಗೆ ಪ್ರಾಂಶುಪಾಲರೆ ಒಪ್ಪಿಕೊಂಡರು ಇದುವರೆಗೂ ಅವರ ಮೇಲೆ ಯಾವ ಕ್ರಮಕೈಗೊಳ್ಳದ ಪೊಲೀಸ್ ಕ್ರಮ ಖಂಡಿಸಿ ಮತ್ತು ಅನ್ಯಾಯವಾಗಿರುವ ವಿದ್ಯಾರ್ಥಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ನರ್ಸಿಂಗ್ ವಿದ್ಯಾರ್ಥಿಗಳು ತರಗತಿಗೆ ಹೋಗದೆ ಬಹಿಷ್ಕರಿಸಿ ಎಬಿವಿಪಿ ನೇತೃತ್ವದಲ್ಲಿ ಕಾಲೇಜು ಮುಂದೆ ಪ್ರತಿಭಟನೆ ನಡೆಸಿ ಆಕ್ರೋಶವ್ಯಕ್ತಪಡಿಸಿದರು.
ನರ್ಸಿಂಗ್ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರು ತಮ್ಮ ಕಾಲೇಜು ತರಗತಿಯನ್ನು ಬಹಿಷ್ಕರಿಸಿ ಗುರುವಾರದಂದು ಬೆಳಿಗ್ಗೆ ತಮ್ಮ ಕಾಲೇಜು ಆವರಣದಲ್ಲಿ ಒಟ್ಟಾಗಿ ಸೇರಿದ ಅವರು, ನರ್ಸಿಂಗ್ ಪರೀಕ್ಷೆ ನಡೆದ ಉತ್ತರ ಪತ್ರಿಕೆಯನ್ನು ಸ್ಕಾ÷್ಯನ್ ಮಾಡುವ ವೇಳೆ ತೃತೀಯ ವರ್ಷದ ನರ್ಸಿಂಗ್ ವಿಧ್ಯಾರ್ಥಿ ಚನ್ನಯ್ಯ ಹಿರೇಮಠ ಅವರ ಉತ್ತರ ಪತ್ರಿಕೆ ದುರುದ್ದೇಶಪೂರ್ವಕವಾಗಿ ಹೊಡೆದು ಹಾಕುವ ಮೂಲಕ ವಿದ್ಯಾರ್ಥಿ ಅನುತ್ತೀರ್ಣಕ್ಕೆ ಕಾರಣರಾಗಿರುವವರ ವಿರುದ್ಧ ಕ್ರಮಕ್ಕೆ ಮತ್ತು ಕಾಲೇಜು ಪ್ರಾಂಶುಪಾಲರನ್ನು ಬಂಧಿಸುವAತೆ ಹಾಗೂ ಪಲಿತಾಂಶದಲ್ಲಿ ವಂಚಿತರಾಗಿರುವ ವಿದ್ಯಾರ್ಥಿ ಚನ್ನಯ್ಯರಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿದರು. ಸತತ ಕಳೆದ ಎರಡು ವರ್ಷವು ಕಾಲೇಜಿನಲ್ಲಿ ರ‍್ಯಾಂಕ್ ಬಂದಿದ್ದು, ಎಲ್ಲಾ ಪ್ರಶ್ನೆಗಳಿಗೆ ಸರಿಯಾದ ಉತ್ತರ ಬರೆಯಲಾಗಿದ್ದರೂ ತೃತೀಯ ವರ್ಷದ ಪಲಿತಾಂಶ ಅನಿತ್ತೀರ್ಣ ಎಂದು ಬಂದಿದೆ. ಗಾಬರಿಗೊಂಡ ವಿದ್ಯಾರ್ಥಿ ಉತ್ತರ ಪತ್ರಿಕೆಯ ನಕಲು ತರಿಸಿ ನೋಡಿದಾಗ ಸರಿಯಾಗಿ ಬರೆದ ಉತ್ತರಗಳನ್ನು ಹೊಡೆದು ಹಾಕಿರುವ ಬಗ್ಗೆ ತಿಳಿದು ಬಂದಿದೆ. ಕಾಲೇಜಿನ ಪ್ರಾಂಶುಪಾಲರ ಬಳಿ ಈ ಬಗ್ಗೆ ಕೇಳಲು ಹೋದರೆ ನಾನೇನು ಮಾಡಲಿ, ಏನು ಮಾಡಿಕೊಳ್ಳುತ್ತೀಯಾ ಮಾಡಿಕೋ ಎಂದು ಹೆದರಿಸಿ ಕಳುಹಿಸಲಾಗಿತ್ತು ಎಂದು ದೂರಿದರು. ಈ ಬಗ್ಗೆ ಬಡವಾಣೆ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಲಾಗಿದೆ. ಮಾಡಿರುವ ತಪ್ಪನ್ನು ಪ್ರಾಂಶುಪಾಲರೆ ಒಪ್ಪಿಕೊಂಡಿರುವಾಗ ಪೊಲೀಸರು ಬಂಧಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ದೂರಿದರು.
ವಿದ್ಯಾರ್ಥಿ ಜೀವನವನ್ನೇ ಹಾಳು ಮಾಡುವ ಸಂಚು ರೂಪಿಸಲಾಗಿದ್ದು, ಸರಕಾರಿ ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳಲಾಗಿದೆ. ವಿಶ್ವವಿದ್ಯಾಲಯದ ನಿಯಮಗಳನ್ನು ಉಲ್ಲಂಘಿಸಿ ಸರಿಯಾಗಿ ಬರೆದ ಉತ್ತರಗಳನ್ನು ಪ್ರಾಂಶುಪಾಲರು ಹೊಡೆದು ಹಾಕಿಸಿ ಈ ಕೃತ್ಯ ಎಸಗಿದ್ದಾರೆ ಎಂದರು. ಕೂಡಲೇ ಸಂತ್ರಸ್ಥ ವಿದ್ಯಾರ್ಥಿಗೆ ನ್ಯಾಯ ಒದಗಿಸಿಬೇಕು. ಎಷ್ಟು ವಿದ್ಯಾರ್ಥಿಗಳ ಉತ್ತರವನ್ನು ಹೊಡೆದು ಹಾಕಲಾಗಿದೆ ಬಗ್ಗೆ ತನಿಖೆ ಮಾಡಿ ಪ್ರಾಂಶುಪಾಲರನ್ನು ಸೇವೆಯಿಂದ ವಜಾ ಮಾಡುವಂತೆ ಒತ್ತಾಯಿಸಿದ ಅವರು, ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ಮುಂದುವರೆಯಲಿದ್ದು, ಏನಾದರೂ ಬೇಜವಬ್ಧಾರಿ ಮಾಡಿದರೇ ಎಲ್ಲಾ ಕಾಲೇಜು ವಿದ್ಯಾರ್ಥಿಗಳ ಸೇರಿ ಬೃಹತ್ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಬಿವಿಪಿ ಮುಖಂಡ ಬೊಮ್ಮಣ್ಣ ರವರು ಎಚ್ಚರಿಸಿದರು.
ಇದೆ ವೇಳೆ ಎಬಿವಿಪಿಯ ಐಶ್ವರ್ಯ, ಅಭಿಶೇಕ್, ಬಿಪಿನ್, ಮಂಜುನಾಥ್, ವಿನಿತಾ, ಅಮೂಲ್, ಪ್ರಣವ್ ಭಾರಧ್ವಜ್ ಇತರರು ಪಾಲ್ಗೊಂಡಿದ್ದರು.