ಹಾಸನ ಏ.೨೧: ಚಾ.ವಿ.ಸ.ನಿ.ನಿಗಮದ ಸಕಲೇಶಪುರ ಉಪ ವಿಭಾಗದ ಕಚೇರಿಯಲ್ಲಿ ಏ.೨೨ ರಂದು ಬೆಳಗ್ಗೆ ೧೧ ಗಂಟೆಗೆ ಸಕಲೇಶಪುರ ಉಪ ವಿಭಾಗದ ಕಾರ್ಯ ಮತ್ತು ಪಾಲನಾ ವಿಭಾಗದ ಕಾರ್ಯನಿರ್ವಹಕ ಇಂಜಿನಿಯರ್ ರವರ ಅಧ್ಯಕ್ಷತೆಯಲ್ಲಿ ಜನ ಸಂಪರ್ಕ ಸಭೆಯನ್ನು ಹಮ್ಮಿಕೊಳ್ಳಲಾಗಿದೆ.
ಸಕಲೇಶಪುರ ಉಪ ವಿಭಾಗದ ವ್ಯಾಪ್ತಿಗೆ ಬರುವ ಸಕಲೇಶಪುರ, ಬಾಳ್ಳುಪೇಟೆ, ಯಸಳೂರು, ಹಾನುಬಾಳು ಹಾಗೂ ಹೆತ್ತೂರು ಶಾಖಾ ವ್ಯಾಪ್ತಿಗೊಳಪಡುವ ಗ್ರಾಹಕರು ವಿದ್ಯುತ್ ಸಮಸ್ಯೆಗಳಿದ್ದಲ್ಲಿ ಕಾರ್ಯನಿರ್ವಾಹಕ ಇಂಜಿನಿಯರ್ ರವರ ಉಪಸ್ಥಿಯಲ್ಲಿ ನಡೆಯುವ ಜನಸಂಪರ್ಕ ಸಭೆಗೆ ಹಾಜರಾಗಿ ತಮ್ಮ ಅಹವಾಲುಗಳನ್ನು ನೀಡಿ ಬಗೆಹರಿಸಿಕೊಳ್ಳುವಂತೆ ಸಕಲೇಶಪುರ ಉಪ ವಿಭಾಗದ ಕಾರ್ಯ ಪಾಲನಾ ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ತಿಳಿಸಿದ್ದಾರೆ.
Tags
ಹಾಸನ