ನನಗೆ ಬೇರೆ ರಾಜಕಾರಣಿಗಳಂತೆ ಕುಟುಂಬ ವ್ಯಾಮೋಹವಿಲ್ಲ : ಎ.ಟಿ. ರಾಮಸ್ವಾಮಿ

ರಾಮನಾಥಪುರ;- ನನ್ನ ಜೀವಮಾನದಲ್ಲಿ ನಾನು ಅಧಿಕಾರ, ಹಣ, ಅಸ್ತಿಗಳ ವ್ಯಾಮೋಹವನ್ನು ಇಟ್ಟುಕೊಂಡು ರಾಜಕೀಯಕ್ಕೆ ಬಂದವನಲ್ಲ. ನನ್ನ ಕ್ಷೇತ್ರದ ಜನತೆಯ ಸ್ವಾಭಿಮಾನವನ್ನು ಎತ್ತಿಹಿಡಿಯುವ ಕೆಲಸವನ್ನು ಮಾಡುತ್ತಿದ್ದೇನೆ. ಎಂದಿಗೂ ಸ್ವಾರ್ಥತೆಯಿಂದ ನಡೆದುಕೊಂಡಿಲ್ಲ. ಪಕ್ಷ ಹಾಗೂ ಮತದಾರರ ಗೌರವವನ್ನು ರಾಜ್ಯದಲ್ಲಿ ಎತ್ತಿಹಿಡಿಯುವ ಕೆಲಸ ಮಾಡುವ ತೃಪ್ತಿನನಗಿದೆ ಎಂದು ಶಾಸಕ ಡಾ. ಎ.ಟಿ. ರಾಮಸ್ವಾಮಿ ಹೇಳಿದರು.

ರಾಮನಾಥಪುರದ ಸ್ವಾಗತ ಸಮುದಾಯಭವನದಲ್ಲಿ ನಡೆದ ಹೋಬಳಿ ಮಟ್ಟದ ಜಾತ್ಯಾತೀತ ಜನತದಳದ ಕಾರ್ಯಕರ್ತರ ಸಭೆಯ ಉದ್ಘಾಟಿಸಿ, ಮಾತನಾಡಿದ ಅವರು ಕ್ಷೇತ್ರದಲ್ಲಿ ನಾನು ಸಕ್ರಿಯ ರಾಜಕರಣದಲ್ಲಿದ್ದರೂ ನನ್ನ ಕುಟುಂಭದ ರಾಜಕೀಯದಿಂದ ದೂರ ಉಳಿಯುತ್ತದೆ ನನಗೆ ಬೇರೆ ರಾಜಕಾರಣಿಗಳಂತೆ ಕುಟುಂಬ ವ್ಯಾಮೋಹವಿಲ್ಲ. ನನ್ನ ಕುಟುಂಭ ಮನೆ ಒಳಗೆ ಮಾತ್ರ ಹೊರೆಗೆ ಇಲ್ಲ ಎಂದ ಅವರು ಪ್ರಜಾಪ್ರಭುತ್ವದ ಉಳಿವಿಗಾಗಿ ಪ್ರಾಮಾಣಿಕವಾಗಿ ನಾನು ಜಾತಿ, ಧರ್ಮ, ಮತ, ಪಂಥ, ಪಕ್ಷಗಳ ಭೇದ ಮರೆತು ಪ್ರಾಮಾಣಿಕವಾಗಿ ಕ್ಷೇತ್ರದ ಅಭಿವೃದ್ದಿ ಕೆಲಸ ಮಾಡುತ್ತೇನೆ ಎಂದರು. 

ತಾಲ್ಲೂಕಿನಲ್ಲಿ 5 ಕೇಂದ್ರಗಳನ್ನು ಸ್ಥಾಪಿಸಿ ಸ್ಥಳೀಯವಾಗಿ ವಿದ್ಯುತ್ ಸಂಬಂಧಿತ ತೊಂದರೆಗಳನ್ನು ನಿವಾರಿಸಲು ಆದ್ಯತೆ ನೀಡಲಾಯಿತು. ಇನ್ನು ಇವಾಗ ಮತ್ತೆ ತಾಲ್ಲೂಕಿನ ನಾಲ್ಕು ಕಡೆಯಲ್ಲಿ ಸಂತೆಮರೂರು, ಬೆಳವಾಡಿ, ದೊಡ್ಡಬೆಮ್ಮತ್ತಿ ಮತ್ತು ಸಿದ್ದಾಪುರ ಗ್ರಾಮದಲ್ಲಿ ವಿದ್ಯುತ್ ಉಪ ಕೇಂದ್ರವನ್ನು ಇನ್ನು ಒಂದು ವರ್ಷದ ಒಳಗೆ ಸ್ಥಾಪಿಸಲಾಗುವುದು. 66/11 ಕೆ.ವಿ. 5 ಕಡೆಗಳಲ್ಲಿ ವಿದ್ಯುತ್ ಉಪ ಕೇಂದ್ರ ಅಗುತ್ತಿರುವುದರಿಂದ ವಿವಿಧ ಗ್ರಾಮಗಳಿಗೆ ಗುಣಮಟ್ಟದ ವಿದ್ಯುತ್ ಸರಬರಾಜು ಮಾಡಲು ಸಹಕಾರಿಯಾಗಲಿದೆ. ರಾಮನಾಥಪುರ ಪಟ್ಟಣಕ್ಕೆ ಈಗಾಗಲೇ ಸುಮಾರು 10 ಕೋಟಿಗೂ ಅಧಿಕ ವಿವಿಧ ಕಾಮಗಾರಿ ಮಾಡಿಸಲಾಗಿದೆ. ಇನ್ನು ಅಭಿವೃದ್ದಿಯ ಪತದಲ್ಲಿ ಸಾಗಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹೆಮಾವತಿ ಸೆಕ್ಕರೆ ಕಾಖಾನೆ ನಿದೇಶಕರು ಮುತ್ತಿಗೆ ರಾಜೇಗೌಡ, ಜೆ.ಡಿ.ಎಸ್. ಅಧ್ಯಕ್ಷರು ಜನಾರ್ಧನಗುಪ್ತ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ನರಸೇಗೌಡ, ಕೇರಳಾಪುರ ಮಾಜಿ ಅಧ್ಯಕ್ಷ ಸಂತೋಷಗೌಡ, ಮಹಾಸಭಾ ಅದ್ಯಕ್ಷ ರವಿಕುಮಾರ್, ರಾಮನಾಥಪುರ ಗ್ರಾ.ಪಂ. ಅಧ್ಯಕ್ಷೆ ಎ.ಜೆ. ಹೇಮಲತಾ, ಸದಸ್ಯರಾದ ಅರ್.ಅರ್. ಪುಪ್ಷ, ಕೆ.ವಿ. ಸುನೀಲ್, ಪವನಕುಮಾರಿ, ರಾಮನಕೊಪ್ಪಲು ಮಹಾದೇಶ, ಹೇಮಂತ್‍ಕುಮಾರ್, ಮುಖಂಡರಾದ ಬಿಳಗೂಲಿ ಬಿ.ಜಿ. ಸಣ್ಣಸ್ವಾಮಿ, ಉಪರಿಕೇಗೌಡ, ನಾರಾಯಣಸ್ವಾಮಿ, ದಿವಾಕರ್, ತಿಪ್ಪೇಗೌಡ, ಐಯಣ್ಣಗೌಡ, ವಿರುಪಾಕ್ಷ ಮುಂತಾದವರು ಉಪಸ್ಥಿತರಿದ್ದರು. ಜನಾರ್ದನಗುಪ್ತ ಸ್ವಾಗತಿಸಿ, ಎಸ್. ದಿವಾಕರ್ ವಂದಿಸಿದರು.

Post a Comment

Previous Post Next Post