ಬೇಲೂರು ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಡಾ.ಬಾಬು ಜಗಜೀವನರಾಮ್ ಜನ್ಮ ದಿನ ಆಚರಣೆ

ಡಾ. ಬಾಬು ಜಗಜೀವನ್ ರಾಮ್ ಅವರ ಜೀವನ ಆದರ್ಶ, ಚಿಂತನೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಯುವ ಪೀಳಿಗೆಗೆ ಅವರ ವ್ಯಕ್ತಿತ್ವ ಜೀವನ ಚರಿತ್ರೆ ಪರಿಚಯಿಸುವ ಕಾರ್ಯ ನಡೆಯಬೇಕು.ಅವರು ಅಡಿಪಾಯ ಹಾಕಿಕೊಟ್ಟಂತ್ತಾ ಹಸಿರು ಕ್ರಾಂತಿಯ ಯೋಜನೆ ಸರ್ವ ಕಾಲಕ್ಕೂ ಜಗಜೀವನ್ ರಾಮ್ ಸಾರಿ ಸಾರಿ ಹೆಸರು ಹೇಳುತ್ತದೆ. ಎಂದು ಶಾಸಕ ಕೆ.ಎಸ್.ಲಿಂಗೇಶ್ ಹೇಳಿದರು.

ಪಟ್ಟಣದ ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ಬಾಬು ಜಗಜೀವನರಾಮ್ ಜನ್ಮ ದಿನದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಶೋಷಿತರ ಹಕ್ಕಿಗಾಗಿ ಹೋರಾಡಿ ಹಸಿರು ಕ್ರಾಂತಿಯ ಹರಿಕಾರ. ಆಹಾರ ಉತ್ಪಾದನೆ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ರು, ಕೃಷಿ, ರಕ್ಷಣಾ ಸಚಿವರಾಗಿ ಸೇವೆ ಸಲ್ಲಿಸಿದ್ರು ಅವರ ಸೇವೆ ಸ್ಮರಣೀಯವಾದದು. ಅವರ ಜೀವನ ಚರಿತ್ರೆ ಯುವ ಪೀಳಿಗೆಗೆ ತಲುಪಿಸುವ ಕಾರ್ಯ ನಡೆಯಬೇಕು ಎಂದರು.

ತಾಲ್ಲೂಕು ಪಂಚಾಯತ ಅಧ್ಯಕ್ಷೆ ಸುಮಾಪರಮೇಶ ಮಾತನಾಡಿಸಂವಿಧಾನ ಅಸ್ತಿತ್ವದಲ್ಲಿದ್ದರೂ ಸಂವಿಧಾನದ ಆಶಯಗಳಿಗೆ ತಕ್ಕಂತೆ ಕೆಳ ವರ್ಗಗಳಿಗೆ ಮೀಸಲಾತಿ ತಲುಪುತ್ತಿಲ್ಲ. ಶಿಕ್ಷಣ, ಔದ್ಯೋಗಿಕ ರಂಗಗಳಲ್ಲಿ ಮೀಸಲು ಸೌಲಭ್ಯವನ್ನು ಸಮಪರ್ಕವಾಗಿ ಬಳಸಿಕೊಳ್ಳುವಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಜಾತಿಗಳಿಗೆ ಸರಕಾರದಿಂದ ಸೂಕ್ತ ಮಾರ್ಗದರ್ಶನ ಸಕಾಲಕ್ಕೆ ಸಿಗದ ವಾತಾವರಣ ನಿರ್ಮಾಣವಾಗಿದೆ’ ಎಂದು ಅತೃಪ್ತಿ ವ್ಯಕ್ತಡಿಸಿದರು.ಹಲವಾರು ವರ್ಷಗಳಿಂದ ದಲಿತರು ಖಾಸಗಿ ಕ್ಷೇತ್ರದ ಉದ್ಯೋಗಳಿಂದ ವಂಚಿತರಾಗುತ್ತಿದ್ದಾರೆ. ಖಾಸಗಿ ವಲಯದಲ್ಲೂ ದಲಿತರಿಗೆ ಮೀಸಲು ಸೌಲಭ್ಯ ಕಲ್ಪಿಸಿ ಉದ್ಯೋಗ ಲಭ್ಯವಾಗುವಂತೆ ಸರಕಾರ ಸೂಕ್ತ ಕಾನೂನು ರೂಪಿಸುವುದು ಮುಖ್ಯವೆಂದರು.

ತಹಸೀಲ್ದಾರ್ ಎನ್.ವಿ.ನಟೇಶ್, ಇಒ ರವಿಕುಮಾರ್, ಸಿಪಿಐ ಶ್ರೀಕಾಂತ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ಉಪ ನಿರ್ದೇಶಕ ಮೋಹನ್, ತಾಲ್ಲೂಕು ಪಂಚಾಯತ ಸದಸ್ಯ ಮಂಜುನಾಥ ದಲಿತ ಮುಖಂಡರಾದ ಮರಿಯಪ್ಪ ದಾಸಪ್ಪ, ಕೃಷಿ ಇಲಾಖೆ ಅಧಿಕಾರಿ ಪ್ರಸನ್ನ ಇನ್ನೂ ಮುಂತಾದವರು ಹಾಜರಿದ್ದರು.

Post a Comment

Previous Post Next Post