ಬೇಲೂರು :ವೈನ್ ಶಾಪ್ ಸ್ಥಳಾಂತರ ಬೇಡ ಎಂದು ಶಾಸಕರ ನೇತೃತ್ವದಲ್ಲಿ ಸರ‍್ವಜನಿಕರು ಹಾಗೂ ಜನಪ್ರತಿನಿಧಿಗಳು ಪ್ರತಿಭಟನೆ ನಡೆಸಿ ತಹಸಿಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
ತಾಲೂಕಿನ ಬಿಕ್ಕೋಡಿನ ಆಲೂರು ರಸ್ತೆಯಲ್ಲಿರುವ ಬಾಲಾಜಿ ವೈನ್ ಶಾಪ್ ಅನ್ನು ಮುಖ್ಯರಸ್ತೆಗೆ ರ‍್ಗಾವಣೆ ಮಾಡುವುದು ಬೇಡ ಎಂದು ಬಿಕ್ಕೊಡು ಚೋಕನಹಳ್ಳಿ ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಜನ ಪ್ರತಿನಿಧಿಗಳು ಇಂದು ಶಾಸಕ ಕೆಎಸ್ ಲಿಂಗೇಶ್ ರವರ ಸಮ್ಮುಖದಲ್ಲಿ ನಾಡಕಚೇರಿ ಎದುರು ಪ್ರತಿಭಟನೆ ನಡೆಸಿದರು ಕಳೆದ ಮೂರು ರ‍್ಷಗಳ ಹಿಂದೆ ಸ್ಥಳಾಂತರಗೊಂಡಿದ್ದ ವೈನ್ ಶಾಪ್ ಅನ್ನು ಹಳೆಯ ಸ್ಥಳಕ್ಕೆ ಸ್ಥಳಾಂತರ ಮಾಡಲು ಸಿದ್ಧತೆ ಮಾಡುತ್ತಿದ್ದು ಕಂಡುಬಂದಿದ್ದು ಯಾವುದೇ ಕಾರಣಕ್ಕೂ ಮುಖ್ಯ ರಸ್ತೆಯಲ್ಲಿ ವೈನ್ ಶಾಪ್ ತೆರೆಯಲು ಅವಕಾಶ ನೀಡಬಾರದು ಎಂದು ಒತ್ತಾಯಿಸಿದರು ಸಭೆಯಲ್ಲಿ ಮಾತನಾಡಿದ ಬಿಜೆಪಿ ಮುಖಂಡ ಚಂದ್ರಶೇಖರ್ ನಿಯಮನುಸಾರ ರ‍್ಗಾವಣೆ ಆಗಿರುವ ವೈನ್ ಶಾಪ್ ಅನ್ನು ಮತ್ತೆ ಮುಖ್ಯ ರಸ್ತೆಗೆ ತರಲು ಅವಕಾಶ ಇಲ್ಲದಿದ್ದರೂ ಕೂಡ ವೈನ್ ಶಾಪ್ ಮಾಲೀಕರು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗಳ ಮನೆಗೆ ಭೇಟಿ ನೀಡಿ ಹಣದ ಆಮಿಷ ನೀಡುತ್ತಿದ್ದಾರೆ ಎಂದು ಆರೋಪಿಸಿದರು ಯಾವುದೇ ಕಾರಣಕ್ಕೂ ಆಲೂರು ರಸ್ತೆ ಯಿಂದ ಮುಖ್ಯರಸ್ತೆಗೆ ಸ್ಥಳಾಂತರ ಮಾಡಲು ಹೊರಟರೆ ಈಗಿರುವ ವೈನ್ ಶಾಪ್ ಅನ್ನು ಶಾಶ್ವತವಾಗಿ ರದ್ದುಪಡಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಅಧಿಕಾರಿ ಗಳೊಂದಿಗೆ ಮಾತನಾಡಿದ ಶಾಸಕ ಕೆ ಎಸ್ ಲಿಂಗೇಶ್ ಬಿಕ್ಕೋಡು ಗ್ರಾಮದಲ್ಲಿ ಇರುವುದು ಒಂದೇ ವೈನ್ ಶಾಪ್ ಅದನ್ನು ಯಾವುದೇ ಸ್ಥಳಕ್ಕೆ ಬದಲಾವಣೆ ಮಾಡಲು ಅನುಮತಿ ನೀಡಬಾರದೆಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದೆ ಯಥಾಸ್ಥಿತಿ ಕಾಪಾಡುವಂತೆ ಆದೇಶವಿದ್ದರೂ ಕೂಡ ವೈನ್ ಶಾಪ್ ಮಾಲೀಕರು ಜನಸಾಮಾನ್ಯರಲ್ಲಿ ಗೊಂದಲ ಉಂಟುಮಾಡುತ್ತಿದ್ದಾರೆ ಎಂದರು ಅಧಿಕಾರಿಗಳು ಯಾವುದೇ ಕಾರಣಕ್ಕೂ ಬದಲಾವಣೆಗೆ ಅವಕಾಶ ನೀಡಬಾರದೆಂದು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ್ದ ತಹಸಿಲ್ದಾರ್ ಹಾಗೂ ವೃತ್ತ ನಿರೀಕ್ಷಕರಿಗೆ ತಿಳಿಸಿದರು ಪ್ರತಿಭಟನೆಯಲ್ಲಿ ಬಿಕ್ಕೋಡು ಗ್ರಾ ಪಂ ಅಧ್ಯಕ್ಷೆ ಸುಧಾ ಕಾಂತರಾಜ್ ಲಕ್ಕುಂದ ಗ್ರಾ ಪಂ ಅಧ್ಯಕ್ಷ ತಮ್ಮೇಗೌಡ ಸದಸ್ಯರಾದ ಹೇಮಚಂದ್ರ. ಮೋಹನ್ ರಾಜು .ವನಿತಾ .ರಾಧಾ ಜೆಡಿಎಸ್ ಮುಖಂಡರಾದ ಬಿಡಿ ಚಂದ್ರೇಗೌಡ. ನಟರಾಜು .ಎಚ್ಎಸ್ ಗಣೇಶ್. ಗ್ರಾಮಸ್ಥರಾದ ರಾಮೇಗೌಡ . ಸೋಮೇಶ್. ಹಾಲಪ್ಪ ಗೌಡ .ಇತರರು ಹಾಜರಿದ್ದರು
