ಸರ್ಮಜನಿಕರು ಸ್ವಯಂ ಪ್ರೇರಿತರಾಗಿ ಕೊವ್ಯಾಕ್ಸೀನ್ ಲಸಿಕೆಯನ್ನು ಪಡೆಯಿರಿ : ಶಿರಿನ್ ತಾಜ್

 ಆಲೂರು : ತಾಲ್ಲೂಕಿನಾದ್ಯಂತ ೪೫ ರ‍್ಷ ಮೇಲ್ಪಟ್ಟ ಸರ‍್ವಜನಿಕರು ಸ್ವಯಂ ಪ್ರೇರಿತರಾಗಿ ಕೊವ್ಯಾಕ್ಸೀನ್ ಲಸಿಕೆಯನ್ನು ಪಡೆದು ಕೊಳ್ಳಬೇಕು ಎಂದು ತಹಶೀಲ್ದಾರ್ ಶಿರಿನ್ ತಾಜ್  ಮನವಿ ಮಾಡಿದರು.


ತಾಲ್ಲೂಕು ಆಡಳಿತ ಮತ್ತು ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ ವತಿಯಿಂದ ಸರ‍್ವಜನಿಕರಿಗೆ ಮನವಿ ಮಾಡಿದ ಅವರು ತಾಲ್ಲೂಕಿನಲ್ಲಿ ೨೦೧೧ ರ ಜನಗಣತಿ ಯಂತೆ ೮೫೨೫೫ ರಷ್ಟು ಜನಸಂಖ್ಯೆ ಇದ್ದು ಇದರಲ್ಲಿ ೪೫ ರಿಂದ ೬೦ ರ‍್ಷ ಮೇಲ್ಪಟ್ಟವರ ಸಂಖ್ಯೆ ೧೬೨೩೨ ರಷ್ಟಿದೆ.

೬೦ ರ‍್ಷ ಮೇಲ್ಪಟ್ಟವರ ಜನಸಂಖ್ಯೆ ೮೬೨೦ ಇದೆ , ಒಟ್ಟು ೨೪೮೫೨ ರಷ್ಟಿದ್ದು ಮೊದಲ ಹಂತದ ಲಸಿಕೆಯನ್ನು ೪೫ ರ‍್ಷ ಮೇಲ್ಪಟ್ಟ ೬೦ ರ‍್ಷ ಒಳಗಿನ ಒಟ್ಟು ೧೦೩೩ ಜನರಿಗೆ ನೀಡಿದ್ದು ಶೇಕಡವಾರು ೬% ಆಗಿರುತ್ತದೆ. ಅದೇ ರೀತಿ ೬೦ ರ‍್ಷ ಮೇಲ್ಪಟ್ಟ ೮೬೨೦ ಜನರ ಪೈಕಿ ೪೮೧೧ ರಷ್ಟು ಜನರಿಗೆ ಶೇಕಡವಾರು ೫೬% ಜನರು ಮೊದಲ ಹಂತದ ಲಸಿಕೆಯನ್ನು ಪಡೆದಿರುತ್ತಾರೆ.


ಲಸಿಕೆಯನ್ನು ತಾಲ್ಲೂಕು ಸರ‍್ವಜನಿಕ ಆಸ್ಪತ್ರೆ ಆಯ್ದ ಪ್ರಾಥಮಿಕ ಆರೋಗ್ಯ ಕೇಂದ್ರ ಗಳಾದ ರಾಯರಕೊಪ್ಪಲು, ಅಬ್ಬನ ,ಗಂಜಿಗೆರೆ, ಕುಂದೂರು - ಚನ್ನಾಪುರ, ಪಾಳ್ಯ , ಕೆ. ಹೊಸಕೋಟೆ ಪ್ರಾಥಮಿಕ ಆರೋಗ್ಯ ಕೇಂದ್ರ ಗಳಲ್ಲಿ ಮತ್ತು ಆಯುಷ್ ಕೇಂದ್ರಗಳಾದ ಕರ‍್ಜುವಳ್ಳಿ ಮತ್ತು ಹೊಸಪಟ್ಟಣ ಕೇಂದ್ರಗಳಲ್ಲಿ ಕೂಡ ಕೊವ್ಯಾಕ್ಸೀನ್ ಲಸಿಕೆಯನ್ನು ಸರ‍್ವಜನಿಕರಿಗೆ ನೀಡಲಾಗುತ್ತದೆ, ಇದರೊಂದಿಗೆ ಉಪ ಆರೋಗ್ಯ ಕೇಂದ್ರಗಳಾದ  ಸಿಂಗಾಪುರ, ರ‍್ಮಪುರಿ, ಹಂಚೂರು ಮತ್ತು ದೊಡ್ಡಕಣಗಾಲು ಉಪಕೇಂದ್ರಗಳಲ್ಲಿ ಕೂಡಾ ಲಸಿಕೆಯನ್ನು ನೀಡಲಾಗುತ್ತದೆ.ಇದರ ಸಂಪರ‍್ಣ ಪ್ರಯೋಜನವನ್ನು ಸರ‍್ವಜನಿಕರು ಪಡೆದುಕೊಳ್ಳಬೇಕು ಹಾಗೆಯೇ  ಕೊವ್ಯಾಕ್ಸಿನ್ ಲಸಿಕೆಯು ಸುರಕ್ಷಿತವಾಗಿದ್ದು ಆತಂಕ ಪಡದೆ ಅದನ್ನು ಪಡೆದು ಕೊಳ್ಳಬೇಕೆಂದು ಮನವಿ ಮಾಡಿದ ಅವರು ಕರೋನಾ ಎರಡನೇ ಅಲೆಯ ಹಿನ್ನೆಲೆಯಲ್ಲಿ ಎಲ್ಲರೂ ಎಚ್ಚರಿಕೆಯಿಂದ ಇದ್ದು ಮಾಸ್ಕ್ ಧರಿಸಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ತಮ್ಮ ವೈಯಕ್ತಿಕ ಶುಚಿತ್ವವನ್ನು ಕಾಪಾಡಿ ಕೊಳ್ಳಬೇಕು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.


ಈ ಸಂರ‍್ಭದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ  ಡಾ. ತಿಮ್ಮಯ್ಯ , ಹಿರಿಯ ಆರೋಗ್ಯ ಪರಿವೀಕ್ಷಕ ಸತೀಶ್ ಹಿರಿಯ ಆರೋಗ್ಯ ನಿರೀಕ್ಷಕ ಮೋಹನ್ ಉಪಸ್ಥಿತರಿದ್ದರು.

Post a Comment

Previous Post Next Post