ಹಾಸನ ಏ.೨೨ :- ಜಿಲ್ಲೆಯಲ್ಲಿಂದು ವಿವಿಧಡೆ ಹಸಿರು ಭೂಮಿ ಪ್ರತಿಷ್ಠಾನ ಅರಣ್ಯ ಇಲಾಖೆ, ವಿವಿಧ ಸಂಘಗಳ ಸಹಯೋಗದೊಂದಿದೆವಿಶ್ವ ಭೂ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ನಗರದ ಜವೇನಹಳ್ಳಿ ಕೆರೆಯಲ್ಲಿ ವಿಶ್ವ ಭೂ ದಿನದ ಅಂಗವಾಗಿ ಹಸಿರು ಪ್ರತಿಷ್ಠಾನ ಹಾಗೂ ಕರ್ನಾಟಕ ಅರಣ್ಯ ಇಲಾಖೆ ಸಹಯೋಗದೊಂದಿಗೆ ಏರ್ಪಡಿಸಿದ್ದ ಗಿಡ ನೆಡುವ ಕಾರ್ಯಕ್ರಮಕ್ಕೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ|| ಬಸವರಾಜು ಅವರು ಚಾಲನೆ ನೀಡಿದರು.
ಜೀವ ವೈವಿಧ್ಯಗಳೊಂದಿಗೆ ಭೂಮಿಯ ರಕ್ಷಣೆ ಎಂಬ ಧ್ಯೇಯದೊಂದಿಗೆ ಈ ಬಾರಿ ವಿಶ್ವ ಭೂ ದಿನವನ್ನು ಆಚರಿಸಲಾಗುತ್ತದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ|| ಬಸವರಾಜ್ ತಿಳಿಸಿದ್ದಾರೆ.
ವಿಶ್ವ ಭೂ ದಿನ ಆಚರಣೆಗೆ ೫೧ ವರ್ಷಗಳ ಇತಿಹಾಸವಿದ್ದು, ೧೯೭೦ ಏ .೨೨ ರಂದು ಮೊದಲನೇ ಬಾರಿ ಅಮೆರಿಕದಲ್ಲಿ ವಿಶ್ವ ಭೂ ದಿನಾಚರಣೆ ಆಚರಣೆ ಆರಂಭವಾಯಿತು ಎಂದು ಡಾ|| ಬಸವರಾಜು ಮಾಹಿತಿ ನೀಡಿದರು.
ಕೋವಿಡ್ ನಂತರದ ದಿನಗಳಲ್ಲಿ ಭೂಮಿಯ ರಕ್ಷಣೆ ಮಾಡುವುದು ಎಷ್ಟು ಅಗತ್ಯ ಎಂಬುದು ಅರಿವಾಗಿದೆ ಆದ್ದರಿಂದ ಜೀವವೈವಿಧ್ಯತೆ ರಕ್ಷಣೆಯೊಂದಿಗೆ ಭೂಮಿಯ ರಕ್ಷಣೆ ಮಾಡಬೇಕಿದೆ ಎಂದು ತಿಳಿಸಿದರು.
ನಗರದ ಜವೇನಹಳ್ಳಿಕೆರೆ, ತಮ್ಮಲಾಪುರ ಕೆರೆ, ಚನ್ನಪಟ್ಟಣ ಕೆರೆಯ ಅಂಚು ಸೇರಿದಂತೆ ವಿವಿಧಡೆ ಸಾಕೇತಿಕವಾಗಿ ಗಿಡ ನೇಡಲಾಗುತ್ತಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಹಸಿರು ಭೂಮಿ ಪ್ರತಿಷ್ಠಾನದ ಅಧ್ಯಕ್ಷ ಪುಟ್ಟಯ್ಯ, ಟ್ರಸ್ಟಿ ಆರ್. ಪಿ. ವೆಂಕಟೇಶಮೂರ್ತಿ ,ಕಾರ್ಯದರ್ಶಿ ಚಿನ್ನೇನಹಳ್ಳಿ ಸ್ವಾಮಿ ಪ್ರತಿಷ್ಠಾನದ ಟ್ರಸ್ಟಿ ಹಾಗೂ ಬಿ.ಜಿ.ಎಸ್ ಜಿಲ್ಲಾ ಗೌರವಾಧ್ಯಕ್ಷ ಡಾ. ಸಾವಿತ್ರಿ, ಸಹಾಯಕ ಅರಣ್ಯ ಸಂರಕ್ಷಕರಾದ ಹರೀಶ್ ಮತ್ತಿತರರು ಹಾಜರಿದ್ದರು
