ಕುಡಿಯುವ ನೀರಿಗಾಗಿ ಪ್ರತಿ ಶಾಸಕರಿಗೆ ಕನಿಷ್ಟ ೨ ಕೋಟಿ ನೀಡಲಿ: ಹೆಚ್.ಡಿ. ರೇವಣ್ಣ

ಹಾಸನ: ಬೇಕಾದರೇ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಈಶ್ವರಪ್ಪ ಇಬ್ಬರೂ ಹೊಡೆದಾಡಿಕೊಳ್ಳಲಿ ನಾ ಬೇಡ ಅನ್ನುವುದಿಲ್ಲ. ಆದರೇ ಜಿಲ್ಲೆಯಲ್ಲಿ ಈಗಾಗಲೇ ಕುಡಿಯುವ ನೀರಿಗಾಗಿ ಅಹಾಕಾರವಿದ್ದು, ಪ್ರತಿ ಶಾಸಕರಿಗೆ ಕನಿಷ್ಠ ೨ ಕೋಟಿಯನ್ನಾದರೂ ಹಣ ಬಿಡುಗಡೆ ಮಾಡುವಂತೆ ಮಾಜಿ ಸಚಿವ ಹೆಚ್.ಡಿ. ರೇವಣ್ಣನವರು ರಾಜ್ಯ ಸರಕಾರಕ್ಕೆ ಒತ್ತಾಯಿಸಿದರು. 

      ನಗರದ ಸಂಸದರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಸನ ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಆಹಾಕಾರ ಬಂದಿದ್ದು, ಇನ್ನು ಬಿಸಿಲು ೩೮ ಡಿಗ್ರಿ ತಲುಪಿದೆ. ಇದೆ ರೀತಿ ಮುಂದುವರೆದರೇ ಕುಡಿಯುವ ನೀರಿಗಾಗಿ ಗ್ರಾಮಗಳಲ್ಲಿ ಪರದಾಟ ಉಂಟಾಗಿ ಘರ್ಷಣೆ ಆಗುವ ಪರಿಸ್ಥಿತಿಗೆ ಬಂದಿದೆ. ನೀರಿಗಾಗಿ ಒಂದು ಕೋಟಿ ಕೊಟ್ಟರು ಸಾಕಾಗುವುದಿಲ್ಲ. ಬಿಜೆಪಿ ಪಕ್ಷದಲ್ಲಿ ಯಡಿಯೂರಪ್ಪ ಈಶ್ವರಪ್ಪ ಹೊಡೆದಾಡಿಕೊಳ್ಳಲಿ ನಾ  ಬೇಡ ಎಂದು ಹೇಳುವುದಿಲ್ಲ. ಇಲ್ಲಿ ನೀರಿಗಾಗಿ ಜನರು ಪರಿತಪಿಸುತ್ತಿದ್ದಾರೆ ಇತ್ತ ಕಡೆ ಗಮನ ಕೊಡಬೇಕು ಎಂದರು.



      ಕಲ್ಲಾಡೆಬಾರೆಕೊಪ್ಪಲಿನ ವಿಚಾರವಾಗಿ ವಿಧಾನಸಭೆಯಲ್ಲಿ ನಾನು ಪ್ರಶ್ನಿಸಿದ್ದೆ. ತಹಸೀಲ್ದಾರ್, ಇನ್ಸ್ ಪೆಕ್ಟರ್ ರಿಪೋರ್ಟ್ ಕೊಟ್ಟರು ಜಿಲ್ಲಾಡಳಿತ ಕ್ರಮ ಕೈಗೊಳ್ಳಲಿಲ್ಲ. ೩೦ ರಿಂದ ೫೦ ಅಡಿಗಳ ಆಳದಲ್ಲಿ ಸಿಡಿಸಲಾಗುತಿದ್ದು, ಇದರಿಂದ ಸುತ್ತ ಮುತ್ತಲ ಗ್ರಾಮ ನಡುಗುತ್ತಿರುವುದರಿಂದ ಗ್ರಾಮಸ್ಥರು ಭಯಭೀತಿಯಲ್ಲಿದ್ದಾರೆ. ಈ ಬಗ್ಗೆ ಗಮನವಹಿಸಿ ಕ್ರಮಕೈಗೊಳ್ಳಬೇಕು. ಕಾನೂನು ರೀತಿ ಇದ್ದರೇ ಗಣಿಗಾರಿಕೆಗೆ ಅವಕಾಶ ಕೊಡಬೇಕು.  ಜಿಲ್ಲೆ ಒಳಗೆ ಹೇಳುವರು, ಕೇಳುವರು ಯಾರು ಇಲ್ಲ. ಈಗಾಗಲೇ ಜಿಲ್ಲಾಡಳಿತ ಗಮನಕ್ಕೂ ತಂದಿದ್ದು, ಕಲ್ಲಾಡೆಬಾರೆಕೊಪ್ಪಲಿನಲ್ಲಿ ಅಕ್ರಮ ಗಣಿಗಾರಿಕೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಅಧಿಕಾರಿಗಳ ವರ್ಗ ಮಾಡಿದಾರೆ. ಬಡವರ ಕಷ್ಟಕ್ಕೆ ಸ್ಪಂದಿಸುವವರು ಯಾರು. ಕ್ರಷರ್ ಮಾಲೀಕರಿಗೆ ಹೆದರಿಸುತ್ತಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

      ಭಾನುವಾರ ಸಂಜೆ ವೇಳೆ ತಾಲೂಕಿನ ಬಾಚೇನಹಳ್ಳಿಯಲ್ಲಿ ದುರ್ಘಟನೆ ನಡೆದು ಸ್ಥಳದಲ್ಲೆ ಓರ್ವ ಸಾವನಪ್ಪಿದರೇ, ಸೋಮವಾರದಂದು ಬೆಂಗಳೂರಿನ ಆಸ್ಪತ್ರೆಯಲ್ಲಿ ಮತ್ತೋಬ್ಬ ಸಾವನಪ್ಪಿದ್ದಾರೆ. ಆ ಬಡ ಕುಟುಂಬಕ್ಕೆ ನೋವನ್ನು ಭರಿಸುವ ಶಕ್ತಿ ದೇವರು ಕರುಣಿಸಲಿ ಎಂದು ದೇವರಲ್ಲಿ ಪ್ರಾರ್ಥಿಸುವುದಾಗಿ ಹೇಳಿದರು. ಈ ಕುಟುಂಬಕ್ಕೆ ಕನಿಷ್ಠ ೫ ಲಕ್ಷ ರೂಗಳನ್ನು ಕೊಟ್ಟು ನೆರವಾಗುವಂತೆ ಈಗಾಗಲೇ ಸಚಿವರಲ್ಲಿ ಹೇಳಿದ್ದೇನೆ. ಜೊತೆಗೆ ಈ ಬಗ್ಗೆ ಸಮಗ್ರ ತನಿಖೆ ಮಾಡಬೇಕು ಎಂದರು. 

      ಎರಡು ರಾಷ್ಟಿçÃಯ ಪಕ್ಷಗಳು ಒಂದಾಗಿದ್ದು, ಸುಮ್ಮನೆ ನಾಮಕಾಸ್ತೆ ಹೊಡೆದಾಡುತ್ತಿದೆ ಅಷ್ಟೆ. ನಾವೇನು ಮಾಡುವುದು ಬೇಡ ರಾಷ್ಟಿçÃಯ ಪಕ್ಷ ಕಾಂಗ್ರೆಸ್ ಅದಾಗೆ ಕುಸಿಯುತ್ತಾ ಹೋಗುತ್ತಿದೆ. ನಮ್ಮದು ಒಂದು ಪ್ರಾದೇಶಿಕ ಪಕ್ಷವಾಗಿದ್ದು, ನಾವೇನಾದರೂ ಕಾಂಗ್ರೆಸ್ ಮನೆ ಬಾಗಿಲಿಗೆ ಹೋಗಿದ್ದೇವಾ.. ಅವರೆ ನಮ್ಮ ಮನೆ ಬಾಗಿಲಿಗೆ ಬಂದಿದ್ದರು. ೧೫ ಕೆಜಿ ಅಕ್ಕಿ ಕೊಟ್ಟಿದ್ದರೇ ೩೦ ಸೀಟಿಗೆ ಬರುತ್ತಿದ್ದರಾ.. ೭ ಕೆಜಿ ಅಕ್ಕಿ ಕೊಟ್ಟು ೮೦ ಸೀಟು ಪಡೆದರು. ಏನು ಅಕ್ಕಿ ಕೊಡದವರನ್ನು ಬಿಜೆಪಿಗೆ ೧೦೦ ಸೀಟು ಜನರು ಕೊಟ್ಟಿದ್ದಾರೆ. ಯಡಿಯೂರಪ್ಪನವರು ಇನ್ನು ೨ ಕೆಜಿ ಅಕ್ಕಿ ಕಡಿಮೆ ಮಾಡಿದ್ದಾರೆ ಎಂದು ವ್ಯಂಗ್ಯವಾಡಿದರು.

       ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಹೆಚ್.ಕೆ. ಕುಮಾರಸ್ವಾಮಿ ಮಾತನಾಡಿ, ಸಕಲೇಶಪುರ ಕ್ಷೇತ್ರದಲ್ಲಿ ಆನೆಗಳ ಕಾಟಕ್ಕೆ ಮರಣ ಹೊಂದಿದಾಗ ಪರಿಹಾರ ಕೊಡುವ ಕೆಲಸ ಮಾಡಲಾಗಿದೆ. ಆನೆಗಳ ವಿಚಾರವಾಗಿ ಉಸ್ತುವಾರಿ ಸಚಿವರು ಮತ್ತು ಅರಣ್ಯ ಸಚಿವರೆಲ್ಲಾ ಬಂದು ಸುಧಿರ್ಘವಾಗಿ ಚರ್ಚೆಯಾದರೂ ಪರಿಣಾಮ ಸೂನ್ಯವಾಗಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಇಚ್ಛಾ ಶಕ್ತಿಯನ್ನು ಪ್ರದರ್ಶನ ಮಾಡಿದೆ. ಇಲ್ಲಿ ಒಂಟಿ ಆನೆಗಳಂತು ಹೆಚ್ಚು ಇದೆ. ಒಂಟಿ ಆನೆ ಹಿಡಿಯಲು ಇನ್ನು ಕೂಡ ತೀರ್ಮಾನಕೈಗೊಂಡಿರುವುದಿಲ್ಲ. ಕನಿಷ್ಟ ಮೂರು ನಾಲ್ಕು ಒಂಟಿ ಆನೆ ಹಿಡಿಯಲೇ ಬೇಕು ಎಂದರು. ಮಾನವ ಮತ್ತು ಪ್ರಾಣಿ ಸಂಘರ್ಷಕ್ಕೆ ರಾಜ್ಯ ಮತ್ತು ಕೇಂದ್ರ ಸರಕಾರಗಳು ಅಂತ್ಯವಾಡಲೇಬೇಕು. ಇಲ್ಲ ಸಂಪೂರ್ಣ ಸ್ಥಳಾಂತರ ಮಾಡಬೇಕು ಇಲ್ಲವೇ ಆನೆ ಕಾರಿಡರ್ ಮಾಡಲಿ ಎಂದು ಆಗ್ರಹಿಸಿದರು. ಈ ತಿಂಗಳ ೧೪ ಕಳೆದ ಮೇಲೆ ಆ ಭಾಗದ ರೈತರು, ಬೆಳೆಗಾರರು, ಕಾರ್ಮಿಕರ ಸಭೆ ಕರೆದು ರಾಜ್ಯ ಮತ್ತು ಕೇಂದ್ರ ಸರಕಾರಕ್ಕೆ ಅಂತಿಮ ಗಡುವು ಕೊಡಲಾಗುವುದು ಎಂದು ಎಚ್ಚರಿಸಿದರು. 


Post a Comment

Previous Post Next Post