ನಮ್ಮ ವಿರುದ್ಧ ಹೇಳಿಕೆ ನೀಡಿರುವ ದೇವರಾಜೇಗೌಡರು ಅರ್ಥ ಮಾಡಿಕೊಳ್ಳಲಿ:ಎಸ್. ದ್ಯಾವೇಗೌಡ

ಹಾಸನ: ಕಟ್ಟಾಯ ಕ್ಷೇತ್ರದ ವಿಚಾರವಾಗಿ ನಮ್ಮ ವಿರುದ್ಧ ಹೇಳಿಕೆ ನೀಡಿರುವ ಕಾಂಗ್ರೆಸ್ ಮುಖಂಡರಾದ ದೇವರಾಜೇಗೌಡರು ಮೊದಲು ಅರ್ಥ ಮಾಡಿಕೊಳ್ಳಬೇಕು ಎಂದು ಜೆಡಿಎಸ್ ಪಕ್ಷದ ತಾಲೂಕು ಅಧ್ಯಕ್ಷ ಎಸ್. ದ್ಯಾವೇಗೌಡರು ತಿರುಗೇಟು ನೀಡಿದರು.



       ಪತ್ರಿಕಾಗೋಷ್ಠಿಯಲ್ಲಿ ಸೋಮವಾರದಂದು ಮಾತನಾಡಿ, ಹಾಸನ ತಾಲೂಕಿನ ಇತರೆ ಭಾಗಗಳಲ್ಲಿ ಕಡಿಮೆ ಸಂಖ್ಯೆಯಲ್ಲಿ ಜನಸಂಖ್ಯೆ ಇದ್ದರೂ ಹೆಚ್ಚಿನ ಕ್ಷೇತ್ರ ಮಾಡಲಾಗಿದೆ. ಆದರೇ ಕಟ್ಟಾಯ ಭಾಗದಲ್ಲಿ ೧೭ ಸಾವಿರ ಜನಸಂಖ್ಯೆಯಿದೆ. ಗೊರೂರಿನಲ್ಲಿ ೧೫,೬೦೫ ಹೆಚ್ಚು ಜನಸಂಖ್ಯೆಯಿದ್ದರೂ ಕೇವಲ ಒಂದು ತಾಲೂಕು ಪಂಚಾಯಿತಿ ಕ್ಷೇತ್ರ ಮಾಡಲಾಗಿದೆ. ಇನ್ನು ಕಟ್ಟಾಯ ಹೋಬಳಿ ತೆಗೆದುಕೊಂಡರೆ ನಾಲ್ಕು ಮಾಡಬೇಕಾಗುತ್ತದೆ. ಆದರೇ ನಮಗೆ ಕನಿಷ್ಟ ಮೂರು ತಾಪಂ ಕ್ಷೇತ್ರವನ್ನಾದರೂ ಮಾಡಿಕೊಡಬೇಕು ಎಂದು ಮನವಿ ಮಾಡಿಕೊಳ್ಳಲಾಗಿದ್ದರೂ ಕಾಂಗ್ರೆಸ್ ಪಕ್ಷದ ಮುಖಂಡರಾದ ದೇವರಾಜೇಗೌಡರ ದೃಷ್ಠಿಯಲ್ಲಿ ತಪ್ಪು ಎಂದಿದ್ದಾರೆ. ನಾವು ಪಕ್ಷದ ಹಿತಾದೃಷ್ಠಿಗೆ ಆಗಲಿ, ಇತರೆ ಯಾವ ದೃಷ್ಠಿಯಲ್ಲೂ ಮಾಡಿರುವುದಿಲ್ಲ. ನಮ್ಮ ವಿರುದ್ಧ ಹೇಳಿಕೆಯನ್ನು ನೀಡಿರುವ ದೇವರಾಜೇಗೌಡರು ಅರ್ಥ ಮಾಡಿಕೊಳ್ಳಬೇಕು ಎಂದು ಕೋರಿದರು. 

       ಕಟ್ಟಾಯ ಹೋಬಳಿಯನ್ನು ವಿಧಾನ ಕ್ಷೇತ್ರದ ಪುನರ್ ವಿಂಗಡಣೆಯಲ್ಲಿ ಸಕಲೇಶಪುರ ಕ್ಷೇತ್ರಕ್ಕೆ ಸೇರಿಸಿದ ವೇಳೆ ಇವರು ಪ್ರತಿಭಟನೆ ಮಾಡಲಿಲ್ಲ. ಈಗ ಪ್ರತಿಭಟನೆ ಮಾಡಲು ಹೊರಟಿದ್ದಾರೆ ಎಂದು ದೂರಿದ್ದು, ನಾವು ಅಂದು ಕೂಡ ಹಾಸನ ಜಿಲ್ಲಾಧಿಕಾರಿ ಕಛೇರಿ ಮುಂದೆ ಹೋರಾಟ ನಡೆಸಿ ಮತ್ತು ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿಗಳಲ್ಲೂ ಕೂಡ ಮನವಿ ಸಲ್ಲಿಸಿದ್ದರೂ ಇವೆಲ್ಲಾ ಕಾಂಗ್ರೆಸ್ ಪಕ್ಷದ ದೇವರಾಜೇಗೌಡರಿಗೆ ತಿಳಿದಿರುವುದಿಲ್ಲವೇ ಎಂದು ಪ್ರಶ್ನೆ ಮಾಡಿದರು. 

     ಅಲ್ಲಿ ಇರುವವರು ಯಾರು ಕಟ್ಟಾಯ ಹೋಬಳಿಯವರು ಯಾರು ಅಲ್ಲ, ಬೇರೆ ಬೇರೆ ಸ್ಥಳದ ಶಾಂತಿಗ್ರಾಮ, ದುದ್ದ ಹೋಬಳಿ ಕಡೆಯವರು ಸೇರಿದ್ದಾರೆ ಎಂದು ದೂರಿದ್ದಾರೆ. ನಮ್ಮನ್ನೆ ದೃಷ್ಠಿಯಲ್ಲಿಟ್ಟುಕೊಂಡು ಇಂತಹ ಹೇಳಿಕೆ ನೀಡಿರಬಹುದು, ನಾನು ಜಿಪಂ ಸದಸ್ಯನಾಗಿದ್ದಾಗ ಕಟ್ಟಾಯ ಹೋಬಳಿ ಎರಡು ಗ್ರಾಮ ಪಂಚಾಯಿತಿಗಳು ಮೊಸಳೆ ಹೊಸಳ್ಳಿ ಜಿಲ್ಲಾ ಪಂಚಾಯಿತಿಗೆ ಒಳಪಡುತಿತ್ತು. ನಮ್ಮ ಮನೆಯವರು ಈಗ ಜಿಪಂ ಸದಸ್ಯರಾಗಿದ್ದು, ಈಗ ಮೂರು ಗ್ರಾಪಂಗಳು ನಮ್ಮ ವ್ಯಾಪ್ತಿಗೆ ಬರುತ್ತದೆ ಎಂದರು. ಕಟ್ಟಾಯ ಹೋಬಳಿಯಿಂದ ಪ್ರತಿನಿಧಿಸುತ್ತಿರುವುದರಿಂದ ಮತ್ತು ನಾನು ಜೆಡಿಎಸ್ ಪಕ್ಷದ ತಾಲೂಕು ಅಧ್ಯಕ್ಷನಾಗಿ ಭಾಗವಹಿಸಬಾರದು ಎಂದು ಏನಾದರಾ ಇದಿಯಾ? ಈ ಬಗ್ಗೆ ದೇವರಾಜೇಗೌಡರು ಮನಗಾಣಬೇಕು. ಅನ್ಯಾಯವಾಗಿದೆ ಎಂದು ಪ್ರತಿಭಟನೆ ಮಾಡಿದ್ದೇವೆ ವರತು ಯಾವ ಉದ್ದೇಶವಿಲ್ಲ ಎಂದು ಹೇಳಿಕೆಗೆ ತಿರುಗೇಟು ನೀಡಿದರು.


Post a Comment

Previous Post Next Post