ಅರಸೀಕೆರೆ :- ಅಂತೂ ಇಂತೂ ಅರಸೀಕೆರೆ ನಗರಸಭೆಗೆ ನೂತನ ಅಧ್ಯಕ್ಷರಾಗಿ ಗಿರೀಶ್ ಅಧಿಕಾರ ವಹಿಸಿಕೊಳ್ಳುವ ಮೂಲಕ ಮೀಸಲಾತಿ ಆಧಾರದ ಮೇಲೆ ಅರಸೀಕೆರೆ ನಗರಸಭೆ ಆಡಳಿತವನ್ನು ಬಿಜೆಪಿ ತನ್ನ ತೆಕ್ಕೆಗೆತೆಗೆದುಕೊಂಡಿದೆ.
ನಗರಸಭೆಗೆ ಚುನಾವಣೆ ನಡೆದು ಬರೋಬ್ಬರಿ ಎರಡೂವರೆ ವರ್ಷಗಳು ಕಳೆದು ಜೆಡಿಎಸ್ ಕಾಂಗ್ರೆಸ್ ಮೈತ್ರಿ ಸರ್ಕಾರ ಪತನಗೊಂಡು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೂ ಸಹ ಸ್ಥಳೀಯವಾಗಿ ಏರ್ಪಟ್ಟಿದ್ದ ಜೆಡಿಎಸ್ ಹಾಗೂ ಬಿಜೆಪಿ ನಡುವಿನ ಮೀಸಲಾತಿಗೆ ಸಂಬAಧಿಸದೆ ಹಗ್ಗ ಜಗ್ಗಾಟವನ್ನು ವಿಚಾರಣೆ ನಡೆಸಿದ ನ್ಯಾಯಾಲಯಅಂತಿಮವಾಗಿ ಸರ್ಕಾರ ಪ್ರಕಟಿಸಿರುವ ಮೀಸಲಾತಿಕುರಿತು ಸಹಮತ ವ್ಯಕ್ತಪಡಿಸಿದರಿಂದ ಎಸ್ ಟಿ ಸಮುದಾಯಕ್ಕೆ ಸೇರಿದಗಿರೀಶ್‌ಅವರು ನಗರಸಭೆಯ ಅಧ್ಯಕ್ಷಗಾದೆಯನ್ನು ಶುಕ್ರವಾರ ಅಲಂಕರಿಸಿದರು.
ನಗರಸಭೆಯ ನೂತನ ಅಧ್ಯಕ್ಷರಾಗಿ ನಿಯೋಜನೆಗೊಂಡ ಗಿರೀಶ್‌ಅವರಿಗೆ ನಗರಾಭಿವೃದ್ಧಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎನ್.ಡಿ.ಪ್ರಸಾದ್ ಸೇರಿದಂತೆ ಬಿಜೆಪಿ ಮುಖಂಡರು ಹಾಗೂ ಅಭಿಮಾನಿಗಳು ಪುಷ್ಪಹಾರ ಹಾಕುವ ಮೂಲಕ ಶುಭ ಹಾರೈಸಿದರು.
ಸುದ್ದಿಗಾರರೊಂದಿಗೆ ನಗರಸಭೆಯ ನೂತನ ಅಧ್ಯಕ್ಷಗಿರೀಶ್ ಮಾತನಾಡಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳೂ ಹಾಗೂ ನನ್ನ ಮಾರ್ಗದರ್ಶಕರಾದಎನ್‌ಆರ್ ಸಂತೋಷ್ ಅವರ ಅಪೇಕ್ಷೆಯಂತೆ ನಗರಸಭೆಯ ಅಧ್ಯಕ್ಷ ಸ್ಥಾನವು ನನಗೆ ಒಲಿದು ಬಂದಿದ್ದು ಪಕ್ಷದಎಲ್ಲಾ ಮುಖಂಡರ ಸಲಹೆಯೊಂದಿಗೆ ಪಕ್ಷಾತೀತ ನಗರಸಭೆಯ ಹಿರಿಯಕಿರಿಯಎಲ್ಲ ಸದಸ್ಯರನ್ನು ವಿಶ್ವಾಸಕ್ಕೆತೆಗೆದುಕೊಂಡು ನಗರದಅಭಿವೃದ್ಧಿಗೆ ಶ್ರಮಿಸುವ ಭರವಸೆ ನೀಡಿದರು.
ಪತ್ರಿಕೆಯೊಂದಿಗೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎನ್‌ಆರ್ ಸಂತೋಷ್ ಮಾತನಾಡಿ ಸಂವಿಧಾನದತ್ತವಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮೀಸಲಾತಿಯಆಧಾರದ ಮೇಲೆ ಹಿಂದುಳಿದ ಸಮುದಾಯಕ್ಕೆ ಸೇರಿದಯುವಕರೊಬ್ಬರುಇಂದು ಅರಸೀಕೆರೆ ನಗರ ಸಭೆಯಅಧ್ಯಕ್ಷ ಸ್ಥಾನವನ್ನು ಅಲಂಕರಿಸಿರುವುದು ನಮ್ಮ ಸಂವಿಧಾನ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯ ಮಹತ್ವವನ್ನು ಸಾರುತ್ತಿದೆಎಂದು ಹೇಳಿದ ಅವರು ನೂತನಅಧ್ಯಕ್ಷಗಿರೀಶ್‌ಅವರು ನಗರದಅಭಿವೃದ್ಧಿಗೆ ಶ್ರಮಿಸಲಿ ಎಂದು ಕಿವಿಮಾತು ಹೇಳಿದರು
