ಕೊಡಗೈದಾನಿ ಶರಣ ಮಹದೇವ್ ಅವರ ಮನೆಯಲ್ಲಿ ಕಪೂರವಳ್ಳಿ ಶ್ರೀಗಳು .

ರಾಮನಾಥಪುರ;- ಭಕ್ತಿಯಿಂದ ಪರಮಾತ್ಮನನ್ನು ಆರಾಧಿಸಿದಾಗ ಮನಸ್ಸಿಗೆ ಸುಖ, ಶಾಂತಿ, ನೆಮ್ಮದಿ, ಜ್ಞಾನ ಲಭಿಸುವುದು. ಇಂತಹ ಪುಣ್ಯ ಕರ‍್ಯಗಳನ್ನು ಮಾಡುವ ಮೂಲಕ ಜೀವನದಲ್ಲಿ ನೆಮ್ಮದಿ ಕಾಣಲು ಸಾಧ್ಯ ಎಂದು ಕಪೂರವಳ್ಳಿ ಮಠದ ಶ್ರೀ ಚಂದ್ರಶೇಖರಶಿವಾಚಾರ್ಯಸ್ವಾಮಿಜಿ ಹೇಳಿದರು. 


                                                                            

ರಾಮನಾಥಪುರ ಹೋಬಳಿ ಬಸವಪಟ್ಟಣ ಗ್ರಾಮದ ತೋಟಿಮನೆ ಕೊಡಗೈದಾನಿ ಶರಣ ಬಿ.ಸಿ. ಮಹದೇವ್ ಅವರ ಮಾತೃಶ್ರೀ ವಿಶಾಲಾಕ್ಷಮ್ಮ ಲಿಂಗೈಕ್ಯ ಅವರ ೫ ದಿವಸದಲ್ಲಿ ನಡೆದ ರುದ್ರಾಭಿಷೇಕ ಪೂಜೆಯಲ್ಲಿ ಕಪೂರವಳ್ಳಿ ಶ್ರೀಗಳು ನೇರವೇರಿಸಿ ಅರ್ಶಿವಚನ ನೀಡಿದ ಅವರು ನಮ್ಮ ಸಂಪ್ರದಾಯ, ನಮ್ಮ ಹಿರಿಯರು ಹಾಕಿಕೊಟ್ಟಿರುವ ಭಕ್ತಿ-ಭಾವ, ರುದ್ರಾಭಿಷೇಕ ಇಂತಹ ಪೂಜಾ ಕೈಕರ್ಯಗಳನ್ನು ಹಿಂದಿನಿAದಲೂ ನಡೆಸಿಕೊಂಡು ಬರುತ್ತಿರುವ ಅಚರಣೆಯಾಗಿದೆ ಎಷ್ಟೋ ಏಶ್ವರ್ಯವಿದ್ದರೂ ಶಾಂತಿ, ನೆಮ್ಮದಿ ಹಾಗೂ ಪ್ರೀತಿ ವಿಶ್ವಾಸಗಳಿಕೆಗಾಗಿ ಮಹತ್ವದ ಕರ‍್ಯ ಮಾಡಬೇಕಾಗುತ್ತದೆ. ಹಿರಿಯರು ಹಾಕಿಕೊಟ್ಟ ಅವರ ತತ್ವ-ಅದರ್ಶಗಳನ್ನು ಜೀವನದಲ್ಲಿ ಮೈಗೂಡಿಸಿಕೊಳ್ಳಿ. ಇಂತಹ ಪುಣ್ಯ ಕಾರ್ಯಗಳನ್ನು ಮಾಡಿ ನಿತ್ಯ ಒಡನಾಡುವ ಜನರ ಭಾವನೆಗಳನ್ನು ಗೌರವಿಸಿದಾಗ ಸಂಘರ್ಷ ರಹಿತ ಬದುಕು ನಮ್ಮದಾಗುತ್ತದೆ ಎಂದರು.

ಅಗಮಿಕರಾದ ನಾಗರಾಜಶಾಸ್ತಿç, ನವೀನ, ಬಿ.ಎಸ್. ಕೆಂಡಗಣ್ಣಶೆಟ್ಟಿ, ಬಿ.ಎಸ್. ಮಹದೇವ್, ರವಿ, ಭಾಸ್ಕರ್, ಬಾಲು, ಪರಮೇಶ್, ಲೋಕಮಾತಮಲ್ಲಪ್ಪ, ಬಿ.ಎ. ಶ್ರೀಕಂಠಶೆಟ್ಟಿ, ಬಿ.ಎಸ್. ಜಗಣ್ಣ, ಬಿ.ಎಂ. ಮುತ್ತಣ್ಣ, ಟಿ.ಸಿ. ಅಂಭರೀಶ್, ಮಹೇಂದ್ರಕುಮಾರ್, ವಾಗೀಶ್, ಕುಮಾರಸ್ವಾಮಿ,  ಮುಂತಾದವರು ಭಾಗವಹಿಸಿದ್ದರು


Post a Comment

Previous Post Next Post