ಸೂಚನ ಪಾಲಕ ವಿಲ್ಲದ ಕಾರಣ ಇಬ್ಬರು ಬೈಕ್ ಸವಾರರು ಸಾವು

ರಾಮನಾಥಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಟವಾಳು ಗ್ರಾಮದ ವಿದ್ಯಾನಿಕೇತನ ಶಾಲೆಯ ಮುಂದೆ ಹಾಕಿರುವ ರಸ್ತೆ ದಿಬ್ಬಣಕ್ಕೆ ಬಿಳಿ ಬಣ್ಣ, ಹಾಗೂ ಸಿಗ್ನಲ್ ಲೈಟ್ ಹಾಕದೆ ಇರುವುದರಿಂದ ಇಲ್ಲಿ ಇಬ್ಬರು ಬೈಕ್ ಸವಾರರು ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿರುವ ಸ್ಥಳದ ದೃಶ್ಯ.

 ಈ ಕ್ಷೇತ್ರದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಚ್.ಎಸ್. ಶಂಕರ್  ದೂರಿದರು. 

 

 ವರದಿ.. ೧.                                                                                  ರಾಮನಾಥಪುರ .;- ಇಲ್ಲಿಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಟವಾಳು ಗ್ರಾಮದ ವಿದ್ಯಾನಿಕೇತನ ಶಾಲೆಯ ಮುಂದೆ ಹಾಕಿರುವ ರಸ್ತೆಯ ದಿಬ್ಬಣಕ್ಕೆ ಯಾವುದೇ ರೀತಿಯಲ್ಲಿ ಬಿಳಿ ಬಣ್ಣ ಅಥವಾ ಕೆಂಪು ಸಿಗ್ನಲ್ ಲೈಟ್ ಗುರುತು ಹಾಕದೆ ಇರುವುದರಿಂದ ಇಲ್ಲಿಯ ಸ್ಥಳದಲ್ಲಿ ಇಬ್ಬರು ಬೈಕ್ ಸವಾರರು ಬಿದ್ದು ಸ್ಥಳದಲ್ಲೇ ಸಾವನ್ನಪ್ಪದ್ದಾರೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಚ್.ಎಸ್. ಶಂಕರ್ ದೂರಿದರು.  

ರಾಮನಾಥಪುರದ ಕೋಟವಾಳು ಗ್ರಾಮದಲ್ಲಿ ವರದಿಗಾರರೊಂದಿಗೆ ಮಾತನಾಡಿದ ಅವರು ರಾಮನಾಥಪುರದಿಂದ ಅರಕಲಗೂಡು ಹೋಗುವ ರಾಜ್ಯದ ಹೆದ್ದಾರಿ ಮುಖ್ಯ ರಸ್ತೆಯ ಕೋಟವಾಳು ವಿದ್ಯಾನಿಕೇತನ ಶಾಲೆಯ ಮುಂಭಾಗದ ಹತ್ತಿರ ಪರಿಚಯ ಇದ್ದವರೂ ಕೂಡ ಒಂದು ಕ್ಷಣ ಯಾಮಾರುತ್ತಾರೆ. ಇನ್ನೂ ರಸ್ತೆಯ ಪರಿಚಯವೇ ಇಲ್ಲದವರೂ ಗುರುತಿಲ್ಲದ ದಿಬ್ಬಣದ ಹತ್ತಿರ ಬಿದ್ದು ಎರಡು ಜನ ಮರಣ ಹೊಂದಿದ್ದು, ಕೆಲವರು ಕೈಕಾಲು ಕಳೆದುಕೊಂಡಿರುವುದು. ಈ ರಸ್ತೆಯ ಪರಿಚಯ ಇದ್ದವರು ಕೂಡ ಒಂದು ಕ್ಷಣ ಯಾಮಾರುತ್ತಾರೆ. ಇನ್ನೂ ರಸ್ತೆ ಪÀರಿಚಯವೇ ಹಾಗಿರಲಿ ಜೀವ ಹೋದರೂ ಅಚ್ಚರಿಯಲ್ಲ ಎಂದರು.  

ರಾಮನಾಥಪುರದಿಂದ ಹಾಸನ, ಹೊಳೆನರಸಿಪುರ, ಚನ್ನರಾಯಪಟ್ಟಣ ಮಾರ್ಗ ಬೆಂಗಳೂರು ಮುಂತಾದ ಕಡೆಗಳಿಗೆ ಹೋಗುವ ಈ ರಸ್ತೆ ಲೋಕೋಪಯೋಗಿ ಇಲಾಖೆ ಮತ್ತು ಕೆ.ಅರ್.ಡಿ.ಸಿ.ಎಲ್‌ಗೇ  ಸೇರುತ್ತದೆ. ಈ ಭಾಗಕ್ಕೆ ಹಲವು ಜಿಲ್ಲೆಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದೆ. ಪ್ರತಿ ನಿತ್ಯ ನೂರಾರು ವಾಹನಗಳು ತಿರುಗಾಡುತ್ತಿವೆ ಅಲ್ಲದೇ ಸಾರ್ವಜನಿಕರು ಹತ್ತಾರು ಗ್ರಾಮಗಳಿಗೆ ಈ ರಸ್ತೆಯಲ್ಲಿ ತಿರುಗಾಡುತ್ತಾರೆ ಎಂದರು.

 ಲೋಕೋಪಯೋಗಿ ಇಲಾಖೆ, ಮತ್ತು ಕೆ.ಅರ್.ಡಿ.ಸಿ.ಎಲ್‌ಗೇ ದೂರು ತಿಳಿಸಿದರೂ ಇದುವರೆವಿಗೂ ಯಾವುದೇ ಮುನ್ನೆಚ್ಚರಿಕೆ ಕ್ರಮವನ್ನು ವಹಿಸಿಲ್ಲ. ಈ ಕೂಡಲೆ ಸಂಬAಧ ಪಟ್ಟ ಅಧಿಕಾರಿಗಳು ದಿಬ್ಬಣಕ್ಕೆ ಬಣ್ಣ ಮತ್ತು ಸಿಗ್ನಲ್ ಲೈಟ್ ಹಾಕಿಸುವಂತೆ ಒತ್ತಾಯಿಸಿದ್ದು ಈ ಬಗ್ಗೆ ಶ್ರೀಘವೇ ಕ್ರಮಕೈಗೋಳ್ಳದಿದ್ದರೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್.ಎಸ್. ಶಂಕರ್ ಎಚ್ಚರಿಸಿದರು.


Post a Comment

Previous Post Next Post