ಹಾಸನ: ಕಳೆದ ನಾಲ್ಕು ದಿವಸಗಳ ಹಿಂದೆ ಸಂಭವಿಸಿದ ಜಿಲೆಟಿನ್, ಡಿಟೋನೇಟರ್ ಸ್ಫೋಟ ಪ್ರಕರಣದಲ್ಲಿ ಈಗಾಗಲೇ ಇಬ್ಬರೂ ಸಾವನಪ್ಪಿದ್ದು, ಮತ್ತೋರ್ವ ಸಾವನಪ್ಪುವ ಮೂಲಕ ಸಾವಿನ ಸಂಖ್ಯೆ ಮೂರಕ್ಕೆ ಏರಿಕೆ ಆಗಿದೆ.
ಕಳೆದ ನಾಲ್ಕು ದಿನಗಳ ಹಿಂದೆ ಹಾಸನ ತಾಲೂಕಿನ ಮತ್ತು ಹೊಳೆನರಸೀಪುರ ತಾಲೂಕಿಗೆ ಒಳಪಡುವ ಚಾಕೇನಹಳ್ಳಿ ಗ್ರಾಮದ ಬಳಿ ಕಲ್ಲು ಸಿಡಿಸುವ ಸ್ಪೋಟಕ ವಸ್ತುಗಳು ಸ್ಪೋಟಗೊಂಡು ಸ್ಥಳದಲ್ಲೆ ಸಂಪತ್ತು ಸಾವನಪ್ಪಿದರೇ, ಮಾರನೆ ದಿನ ದಾಸ್ತಾನು ಗೋದಾಮಿನ ಮೇಲ್ವಿಚಾರಕ ರವಿ ಕೂಡ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಹಾಸನ ಜಿಲ್ಲಾಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದ್ದ ನಟರಾಜು ಕೂಡ ಗುರುವಾರದಂದು ಕೊನೆ ಉಸಿರು ಎಳೆಯುವ ಮೂಲಕ ಸ್ಪೋಟ ಪ್ರಕರಣದಲ್ಲಿ ಸಾವಿನ ಸಂಖ್ಯೆ ನಾಲ್ಕಕ್ಕೆ ಏರಿಕೆ ಆಗುವ ಮೂಲಕ ಗಾಯಗೊಂಡ ಮೂವರು ಕೂಡ ಮೃತಪಟ್ಟಿದಂತಾಗಿದೆ.
