ಕ್ರೈಸ್ತರ ಮೇಲೆ ದೌರ್ಜನ್ಯ ಮುಂದುವರೆದರೇ ಉಗ್ರ ಹೋರಾಟ: ಜೀವನಪ್ರಕಾಶ್

 
ಹಾಸನ: ಕರ್ನಾಟಕ ರಾಜ್ಯದ ವಿವಿಧ ಭಾಗಗಳಲ್ಲಿ  ಕ್ರೈಸ್ತರ ಮೇಲೆ ನಾನಾ ರೀತಿಗಳಲ್ಲಿ ದೌರ್ಜನ್ಯಗಳು ನಡೆಯುತ್ತಿದ್ದು, ಇದೆ ರೀತಿ ಮುಂದುವರೆದರೇ ನಮ್ಮ ವೇದಿಕೆಯಿಂದ ಉಗ್ರವಾದ ಹೋರಾಟ ಮಾಡುವುದಾಗಿ ಹಾಸನ ಜಿಲ್ಲಾ ಕ್ರೆöÊಸ್ತರ ಹಿತರಕ್ಷಣ ವೇದಿಕೆಯ ಅಧ್ಯಕ್ಷ ಜೀವನಪ್ರಕಾಶ್ ಎಚ್ಚರಿಸಿದರು.


        ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕರ್ನಾಟಕ ರಾಜ್ಯದ ವಿವಿಧ ಸ್ಥಳಗಳಲ್ಲಿ ಕ್ರೆöÊಸ್ತ ಪ್ರಾರ್ಥನಾ ಮಂದಿರ,  ಕ್ರೈಸ್ತ ವಿಶ್ವಾಸಿಗಳು ಮತ್ತು ಸಭಾಪಾಲಕರುಗಳ ಮೇಲೆ ನಡೆಯುತ್ತಿರುವ ಹಲ್ಲೆ ಮತ್ತು ದೌರ್ಜನ್ಯಗಳನ್ನು ನಾವು ಬಲವಾಗಿ ಖಂಡಿಸುತ್ತೇವೆ. ನಮ್ಮ ಭಾರತ ಸಂವಿಧಾನದ ೨೫ ರಿಂದ ೨೮ ರ ವಿಧಿಗಳ ಅನುಸಾರ ಪ್ರತಿಯೊಬ್ಬ ನಾಗರೀಕನಿಗೂ ಅವನವನ ಇಷ್ಟದ ಧರ್ಮವನ್ನು ಸ್ವೀಕರಿಸುವ, ಆಚರಿಸುವ ಮತ್ತು ಪ್ರಚಾರಮಾಡುವ ಹಕ್ಕಿದ್ದು, ನಮ್ಮ ಧಾರ್ಮಿಕ ಕಾರ್ಯಗಳನ್ನು ನಾವು ಮಾಡಿಕೊಂಡು ಹೋಗುತ್ತಿರುವ ಈ ದಿನಗಳಲ್ಲಿ ಕೆಲವು ಕೋಮುವಾದ ಶಕ್ತಿಗಳು ಮತ್ತು ಸಂಘ ಪರಿವಾರದವರು ನಮ್ಮ ಮೇಲೆ ದೌರ್ಜನ್ಯ ಮಾಡಿ ನೈತಿಕ ಪೋಲೀಸ್ ಗಿರಿ ಮಾಡಿ ಮಾನಸಿಕ ಹಾಗೂ ಧಾರ್ಮಿಕ ಗೊಂದಲಗಳನ್ನು ಉಂಟು ಮಾಡುವುದರ ಮೂಲಕ ಸಮಾಜದ ಸಾಮರಸ್ಯವನ್ನು ಹಾಳು ಮಾಡುತ್ತಿರುವುದನ್ನು ಖಂಡಿಸುತ್ತೇವೆ ಎಂದರು. ಬೆಳಗಾಂ, ಗೋಕಾಕ್, ದಾವಣಗೆರೆ, ಬೈಲಮಂಗಲ, ತಿಪಟೂರು, ಸಾಲಗಾಮೆ ಇತರ ಕಡೆಗಳಲಿ ನಾನಾ ರೀತಿಯಲ್ಲಿ ದೌರ್ಜನ್ಯಗಳು ನಡೆದಿದೆ ಎಂದು ದೂರಿದರು.

      ಮತಾಂತರ ಎಂಬ ಅಪವಾದವನ್ನು ನಮ್ಮ ಸಮುದಾಯದ ಮೇಲೆ ವಿನಾಕಾರಣ ಹೇರುವುದು ಖಂಡನಾರ್ಹವಾಗಿದ್ದು, ಸಮುದಾಯದ ಮೇಲೆ ನಡೆಯುತ್ತಿರುವ ಈ ಹಲ್ಲೆಗಳು ಮತ್ತು ದೌರ್ಜನ್ಯಗಳನ್ನು ನಡೆಸುತ್ತಿರುವವರ ಮೇಲೆ ಸೂಕ್ತ ಕ್ರಮ ಜರುಗಿಸಿ ನಮ್ಮ ಸಮುದಾಯಕ್ಕೆ ಸಾಮಾಜಿಕ ನ್ಯಾಯ ದೊರಕಿಸಿಕೊಡಬೇಕೆಂದು ಮೂಲಕ ಸರ್ಕಾರಕ್ಕೆ ಒತ್ತಾಯಿಸುತ್ತೇವೆ. ಇದೇ ರೀತಿ ಮುಂದುವರಿದಲ್ಲಿ ಮುಂದಿನ ದಿನಗಳಲ್ಲಿ ನಮ್ಮ ವೇದಿಕೆಯ ಮೂಲಕವಾಗಿ ಉಗ್ರವಾದ ಹೋರಾಟ ಮಾಡುತ್ತೇವೆಂದು ಮೂಲಕ ಎಚ್ಚರಿಸುವುದಾಗಿ ಹೇಳಿದರು. 

      ಪತ್ರಿಕಾಗೋಷ್ಠಿಯಲ್ಲಿ ಹಾಸನ ಜಿಲ್ಲಾ ಕ್ರೆöÊಸ್ತರ ಹಿತರಕ್ಷಣಾ ವೇದಿಕೆಯ ಉಪಾಧ್ಯಕ್ಷ ಕೆ. ಕೃಷ್ಣಮೂರ್ತಿ, 

Post a Comment

Previous Post Next Post