ಸಾಹೇಬ್ರೆ ಮೊದಲು ನಿಮ್ಮ ಮಾಸ್ಕ್ ಎಲ್ರಿ ?

ರಾಜ್ಯದ ಯಾವ ಮೂಲೆಯಲ್ಲಿ ಈ ರೀತಿಯ ಘಟನೆ ನಡೆದರು ಕೂಡ ಇದು ಅಕ್ಷಮ್ಯ ಅಪರಾದವೆ. ವಿಡಿಯೋ ಈ ವರ್ಷದ್ದಾಗಲಿ, ಹಳೆಯದಾಗಲಿ, ನೆನ್ನೆಯದಾಗಲಿ ಪ್ರಶ್ನೆ ಇಷ್ಟೆ ನೀವು ಮೊದಲು ಶಿಸ್ತನ್ನು ಪಾಲಿಸುವುದು ನಿಮ್ಮ ಮೊದಲ ಕರ್ತವ್ಯ ಆದೆ ತದ ನಂತರ ಶಿಸ್ತನ್ನು ಬೇರೆಯವರಿಗೆ ಹೇಳುವುದು ಖಂಡಿಸುವುದು ನಂತರದ ಕೆಲಸ ಸಾಹೇಬರೆ ? ಈಗಾಗಲೆ ರಾಜ್ಯಾದ್ಯಂತ ಮರಣ ಮೃದಂಘದಂತಹ ಸಾವು ಕೇಕೆಗಳಾಕುತ್ತಾ ತನ್ನ ಸಾಮ್ರಾಜ್ಯವನ್ನು ಇನ್ನಷ್ಟು ವಿಸ್ತರಿಸುತ್ತಲೆ ಇದೆ. ಇತ್ತ ಕೊವಿಡ್ ರೋಗಕ್ಕೆ ರಾಜ್ಯದ ಆಸ್ಪತ್ರೆಗಳಲ್ಲಿ ಬೆಡ್ ಇಲ್ಲದೆ, ಆಕ್ಸಿಜನ್ ಇಲ್ಲದೆ ಜನರು ಬೀದಿ ಬೀದಿಗಳಲ್ಲಿ ಸತ್ತು ಮಣ್ಣು ಸೇರುತ್ತಿದ್ದಾರೆ.
 ಸರ್ಕಾರಗಳು ಜವಾಬ್ದರಿಗಳನ್ನು ಕಳಚಿದಂತೆ ಸತ್ತು ಬಿದ್ದಿವೆ. ಇನ್ನೊಂದೆಡೆ ಕೊವಿಡ್ ಪರೀಕ್ಷೆಗೆ ಒಳ ಪಟ್ಟು ಮನೆಗಳಲ್ಲೆ ಹೋಮ್ ಐಸೋಲೇಷನ್‌ಗೆ ಒಳಪಟ್ಟವರಿಗೆ ಸೂಕ್ತ ಚಿಕಿತ್ಸೆಯನ್ನು ಕಾಣದೆ ಸಂಭಂದಿಗಳು ರಸ್ತೆಗಳಲ್ಲಿ ರೋದಿಸುತ್ತ ನಿಮ್ಮಂತವರ ಕೈಲಿ ಓದೆ ತಿನ್ನತ್ತಲೆ ಇದ್ದಾರೆ ನೋಡಿ. ಲಾಕ್ ಡೌನ್ ಜಾರಿಯಾಗಿ ೨೪ ಘಂಟೆಗಳು ಕಳೆದಿಲ್ಲಾ ಆಗಲೆ ನಿಮ್ಮ ಆಟ ಶುರು ಮಾಡಿಯೇ ಬಿಟ್ಟಿದ್ದೀರಿ ಸಾಹೇಬರೆ.
ಈಗ ನನ್ನ ಪ್ರಶ್ನೆ ನೀವು ನಿಮ್ಮ ಸರ್ಕಾರಗಳು ಹೋಮ್ ಐಸೋಲೇಷನ್ ರೋಗಿಗಳಿಗೆ ಗುಣಮುಖವಾಗುವ ತನಕ ಕುಟುಂಬಸ್ತರಿಗೆ ರೋಗಿಯ ಸಂಪೂರ್ಣ ಜವಾಬ್ದಾರಿಯನ್ನು ನಾವು ವಹಿಸಿಕೊಂಡಿದ್ದೇವೆ ವಹಿಸಿಕೊಳ್ಳುತ್ತೇವೆ ಎಂಬ ಭರವಸೆಯನ್ನು ಏನಾದರು ನೀಡಿದ್ದೀರ  ಸಾರ್ ? ನೀವು ನಿಮ್ಮ ಸರ್ಕಾರಗಳು ? ಇನ್ನೊಂದು ಪ್ರಶ್ನೆ ರೋಗಿ ಆಸ್ಪತ್ರೆಯಲ್ಲಿದ್ದು ರೋಗಿಗೆ ಬೇಕಾದ ಎಲ್ಲಾ ಔಷದಿಗಳನ್ನು ನೀವೇನೊ ಕೊಡುತ್ತಿಲ್ಲಾ ಅಥವಾ ಆಚೆ ಓಡಾಡಲು ರೋಗಿಯ ಸಂಭಂಧಿಕರಿಗೆ ಏನಾದರು ವಿಶೇಷ ಪಾಸ್ ಅಥವಾ ಅವಕಾಶಗಳನ್ನು ಏನಾದರು ನೀಡಿದ್ದೀರೆ ಹೇಳಿ  ? ಅದು ಕೂಡ ನಿಮ್ಮಿಂದ ಸಾದ್ಯವಾಗಿಲ್ಲಾ ಆಗೋದು ಇಲ್ಲಾ ? ಊರಿಗೆಲ್ಲಾ ನೀವು ಪಾಠ ಹೇಳಲು ಲಾಟಿ ಹಿಡಿಯುವವರು ನೀವೆ ಮಾಸ್ಕ್ ಹಾಕದೆ ಅಥವಾ ಸಾರ್ವಜನಿಕರ ಹತ್ತಿರ ಪ್ರಾಥಮಿಕವಾಗಿ ನಡೆದುಕೊಳ್ಳುವ ರೀತಿ ರಿವಾಜುಗಳನ್ನಂತು ನೀವು ಪಾಲಿಸಿಲ್ಲಾ ಬಿಡಿ. 
ದ್ವಿಚಕ್ರ ವಾಹನದಲ್ಲಿ ಬಂದ ಕೂಡಲೆ ಏಕೆ ಏನೆಂದು ವಿಚಾರಿಸದೆ ಗಾಡಿಯನ್ನು ಸೈಡಿಗೂ ಹಾಕದೆ ದಾಖಲೆಗಳನ್ನು ಪರಿಶೀಲಿಸದೆ ಏಕಾ ಏಕಿ ಆ ಮುಗ್ದ ಜನರ ಮೇಲೆ ಎರಗಲು ಹೇಗಾದರು ಮನಸ್ಸು ಬಂತು ಹೇಳ್ರಿ ನಿಮಗೆ ? ಅದೆ ನೀವು ನಿಮ್ಮ ಕುಟುಂಬದವರು ಅಲ್ಲಿಗೆ ಬಂದಿದ್ದರೆ ಅಥವಾ ಯಾರೊ ದೊಡ್ಡ ವ್ಯಕ್ತಿಗಳೆ ಬಂದಿದ್ದರೆ ನೀವು ನಿಮ್ಮ ನೈತಿಕತೆ ಹೀಗೆ ನ್ಯಾಯ ಸಮತ್ತವಾಗಿ ಅವರ ಮೇಲೂ ಲಾಟಿ ಗದಾ ಪ್ರಹಾರ ಮಾಡ್ತಿದ್ರಾ ? ಈಗಾಗಲೆ ಜನರನ್ನು ಪ್ರಾಣಿಗಳೆಂತೆ ಕಂಡು ಬೀದಿಯಲ್ಲಿ ಬಿಟ್ಟಿರುವ ನೀವು ನಿಮ್ಮ ಸರ್ಕಾರಗಳು ಇನ್ಯಾವಾಗ ಜನರ ಮೇಲೆ ಕಾಳಜಿ ತೋರುತ್ತೀರ ಜನರನ್ನು ಉಳಿಸುತ್ತೀರೋ ಗೊತ್ತಿಲ್ಲಾ. ಸಂವಿಧಾನಾತ್ಮಕವಾಗಿ ಜನರು ಕೂಡ ಜೀವಿಗಳೆಂದು ಪರಿಗಣಿಸುತ್ತಾರೋ ಕಾದು ನೋಡ ಬೇಕಾಗಿದೆ. ಏನೆ ಆಗಲಿ ಸಂಭಂಧ ಪಟ್ಟ ಅಧಿಕಾರಿಗಳು ಈ ಸಾಹೇಬರ ಮೇಲೆ ಕಠಿಣ ಕ್ರಮ ಜರುಗಿಸಲು ಮುಂದಾಗಬೇಕಿದೆ. ನೀವು ನಿಮ್ಮ ಕಳಜಿಗೆ ಧನ್ಯವಾದಗಳು ಆದರು  ಲಾಟಿ ಏಟಿಗಿಂತ ನೀವು ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡರಷ್ಟೆ ಇಲ್ಲಿ ಸಮಸ್ಯೆ ಬಗೆಹರಿಯುವುದು ದಯವಿಟ್ಟು ಪ್ರೀತಿಯಿಂದಲೆ ಜಗತ್ತನ್ನು ಗೆಲ್ಲಲು ಸಾದ್ಯ ನಿಮಗೂ ಗೊತ್ತಿದೆ ಒಮ್ಮೆ ನಮ್ಮ ಸರ್ಕಾರಗಳ ನೀತಿಗಳು ಪ್ರಸ್ತುತ ಸಂಧರ್ಭವನ್ನು ಗಮನದಲ್ಲಿಟ್ಟುಕೊಂಡು ಕ್ರಮಕ್ಕೆ ಮುಂದಾಗುವುದ ಸೂಕ್ತ.

ರಮೇಶ್ ಹಾಸನ್

Post a Comment

Previous Post Next Post