ಹಾಸನ ; ಫ್ರೂಟ್ಸ್ ತಂತ್ರಾಂಶ ಹಾಗೂ ಕುಟುಂಬ ತಂತ್ರಾಂಶ ಅಂಕಿ-ಅಂಶವಗಳನ್ನು ನೋಂದಣಿ ಮಾಡುವುದನ್ನು ಚುರುಕುಗೊಳಿಸುವಂತೆ ಇ -ಆಡಳಿತದ ಅಪರ ಮುಖ್ಯ ಕಾರ್ಯದರ್ಶಿಗಳಾದ ರಾಜೀವ್ ಚಾವ್ಲಾ ತಿಳಿಸಿದ್ದಾರೆ.
ರಾಜ್ಯದ ವಿವಿಧ ಜಿಲ್ಲಾಧಿಕಾರಿಗಳೊಂದಿಗೆ ಇಂದು ಕುಟುಂಬದ ತಂತ್ರಾಂಶ ಹಾಗೂ ಫ್ರೂಟ್ಸ್ ಫ್ರೋಟ್ಸ್ ತಂತ್ರಾಂಶದಲ್ಲಿ ನೋಂದಣಿಯ ಪ್ರಗತಿ ಕುರಿತು ವಿಡಿಯೋ ಸಂವಾದದ ಮೂಲಕ ಮಾತನಾಡಿದ ಅವರು ರೈತರಿಗೆ ಅನುಕೂಲವಾಗುವಂತೆ ವಿವಿಧ ಆಹಾರ ಪದಾರ್ಥಗಳ ಖರೀದಿಯಲ್ಲಿ ಅತಿವೃಷ್ಟಿ ಮತ್ತು ಅನಾವೃಷ್ಟಿಯ ಸಂದರ್ಭದಲ್ಲಿ, ಬೆಳೆ ವಿಮೆ ಪರಿಹಾರ ನೀಡಲು ಫ್ರೂಟ್ಸ್ ತಂತ್ರಾಂಶದ ನೋಂದಣಿಗೆ ಸಹಕಾರಿಯಾಗಲಿದೆ ಕಾರ್ಯವನ್ನು ಆದಷ್ಟು ಬೇಗ ಪೂರ್ಣಗೊಳಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಕುಟುಂಬ ತಂತ್ರಾಶದ ಮೂಲಕ ಈಗಾಗಲೇ ಮರಣ ಹೊಂದಿರುವ ವ್ಯಕ್ತಿಯನ್ನು ಪಡಿತರ ಚೀಟಿಯಿಂದ ರದ್ದುಗೊಳಿಸುವುದರಿಂದ ಉಳಿದ ಅರ್ಹ ಕುಟುಂಬದವರಿಗೆ ಪಡಿತರ ಚೀಟಿಯಿಂದ ಸೌಲಭ್ಯವನ್ನು ಪಡೆಯಲು ಅನೂಕುಲವಾಗುತ್ತದೆ ಎಂದು ಅಧಿಕಾರಿಗಳಿಗೆ ತಿಳಿಸಿದರು.
ಜಿಲ್ಲಾಧಿಕಾರಿ ಆರ್.ಗಿರೀಶ್ ಅವರು ಮಾತನಾಡಿ ಕುಟುಂಬ ತಂತ್ರಾಂಶದಲ್ಲಿ ಈಗಾಗಲೇ ೧೬ ಸಾವಿರ ನೋಂದಣಿ ಮಾಡಲಾಗಿದೆ, ತಾಲ್ಲೂಕುವಾರು ವರ್ಗ ಮಾಡಿ ನೋಂದಣಿಯನ್ನು ವೇಗವಾಗಿ ಮಾಡಲಾಗುವುದು. ಫ್ರೂಟ್ಸ್ ನೋಂದಣಿಯಲ್ಲಿ ೧೮ ಸಾವಿರ ಕ್ಕೂ ಅಧಿಕ ನೋಂದಣಿಯನ್ನು ಮಾಡಲಾಗಿದೆ ಪ್ರತಿ ತಾಲ್ಲೂಕು ತಹಸೀಲ್ದಾರ್‌ಗಳೊಂದಿಗೆ ಸಭೆ ನಡೆಸಿ ಆದಷ್ಟು ಬೇಗ ಹೆಚ್ಚಿನ ಮಟ್ಟದಲ್ಲಿ ನೋಂದಣಿ ಪೂರ್ಣಗೊಳಿಸುವುದಾಗಿ ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಕವಿತ ರಾಜರಾಂ, ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ರವಿ ಹಾಗೂ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಉಪ ನಿರ್ದೇಶಕರಾದ ಪುಟ್ಟಸ್ವಾಮಿ , ನಗರ ಸಭೆ ಆಯುಕ್ತರಾದ ಕೃಷ್ಣ ಮೂರ್ತಿ ಮತ್ತಿತರರು ಹಾಜರಿದ್ದರು.
