ಕಾವೇರಿ ನದಿಯಿಂದ ಸುಮಂಗಲೆಯರು ಕಳಸ ಉತ್ಸವ

ರಾಮನಾಥಪುರದ ಬಸವೇಶ್ವರ ವೃತ್ತದಲ್ಲಿ ಬಿಳಗೂಲಿ ಗ್ರಾಮದ ಶ್ರೀ ಕಳಸದಮ್ಮನವರ ದೇವಾಲಯದ ಲೋಕಾರ್ಪಣೆ ಪ್ರಯುಕ್ತ ಕಾವೇರಿ ನದಿಯಿಂದ ಸುಮಂಗಲೆಯರು ಕಳಸ ಸಹಿತ ಉತ್ಸವ ನಡೆಯಿತು.


                                                                                                                          ರಾಮನಾಥಪುರ.;-   ಬಿಳಗೂಲಿಯ ಶ್ರೀ ಕಳಸದಮ್ಮ ಮತ್ತು ಶ್ರೀ ಬೀರಲಿಂಗೇಶ್ವರಸ್ವಾಮಿ ಸೇವಾ ಸಮಿತಿಯಿಂದ ಕಾವೇರಿ ನದಿಯಲ್ಲಿ ಶ್ರೀ ಕಳಸದಮ್ಮ ಮತ್ತು ಶ್ರೀ ಬೀರಲಿಂಗೇಶ್ವರಸ್ವಾಮಿ ಮೂರ್ತಿಗೆ ತೀರ್ಥಸ್ಥಾನ, ಗಣಪತಿ ಹೋಮ, ಪುಣ್ಯಹ, ನವಗ್ರಹ ಸಹಿತ ದೇವಾತಾ ಪೂಜೆಗಳ ನಂತರ ನಡೆದ ಉತ್ಸವದಲ್ಲಿ ವೀರಗಾಸೆ, ಮಂಗಳವಾಧ್ಯದ ಜೊತೆಯಲ್ಲಿ ಸುಮಂಗಲೆಯರು ಕಳಸ ಹೊತ್ತು ಕಾವೇರಿ ನದಿ ತಟದಿಂದ ರಾಮನಾಥಪುರದ ಬಸವೇಶ್ವರ ವೃತ್ತದಲ್ಲಿ ಮೆರವಣೆಗೆ ಸಾಗಿ ಬಿಳಗೂಲಿ ಗ್ರಾಮದ ದೇವಾಲಯಕ್ಕೆ ತಲಪಿತ್ತು. 

ರಾಮನಾಥಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶ್ರೀ ಕಳಸದಮ್ಮ ಮತ್ತು ಶ್ರೀ ಬೀರಲಿಂಗೇಶ್ವರಸ್ವಾಮಿ ಸೇವಾ ಸಮಿತಿ ಮತ್ತು ರಾಣಿಕುಲದ ಕುಲಬಾಂಧವರು ೭ ರಂದು ಶ್ರೀ ಕಳಸದಮ್ಮನವರಸ್ವಾಮಿಯ ರಾಜಗೋಪುರ ಪ್ರತಿಸ್ಥಾಪನೆ ಮತ್ತು ಪಲ್ಲಕ್ಕಿ ಉತ್ಸವ ನಡೆಯಲಿದೆ. ಬಿಳಗೂಲಿ ಗ್ರಾಮದಲ್ಲಿ ಜೀಣೋದ್ದಾರವಾಗಿರುವ ಶ್ರೀ ಕಳಸದಮ್ಮನವರ ದೇವಾಲಯದ ರಾಜಗೋಪುರದ ಲೋಕಾರ್ಪಣೆ ಪ್ರಯುಕ್ತ ಸ್ವಸ್ತಿಶ್ರೀ ೧೯೩೯ ನೇ ಹೇವಿಳಂಬಿನಾಮ ಸಂವತ್ಸರದ ಪಾಘ ಕೃಷ್ಣ ಚತುರ್ಥಿ ಪ್ರಯುಕ್ತ ಬುಧವಾರ ಬೆಳಿಗ್ಗೆ ಗಣಪತಿಪೂಜೆ, ಪುಣ್ಯಹ, ಮತ್ತು ಹೋಮ, ಕಲಾಕರ್ಷಣೆ ಮತ್ತು ಅದೇಶ. ಹಾಗೂ ಕಾವೇರಿ ನದಿಯಲ್ಲಿ ತೀರ್ಥಸ್ಥಾನ, ಗಣಪತಿ ಹೋಮ, ಪುಣ್ಯಹ, ನವಗ್ರಹ ಸಹಿತ ದೇವಾತಾ ಪೂಜೆಗಳ ನಂತರ ಗ್ರಾಮದಲ್ಲಿ ಉತ್ಸವ ನಡೆಯಲಿವೆ. ದೇವಾಲಯ ಪ್ರವೇಶ, ನಂತರ ಕಲಾಹೋಮ, ಮತ್ತು ಬ್ರಹ್ಮಕಲಶ ಸ್ಥಾಪನೆ. ಕುಂಭಾಭಿಷೇಕ, ಮತ್ತು ಪುಣ್ಯಾಹುತಿ ವಿಶೇಷ ಪೂಜಾ ಕೈಕರ್ಯಗಳು ಅನ್ನಸಂತರ್ಪಣೆ ನಡೆಯಲಿದೆ. ಏ. ೮ ರಂದು ಗುರುವಾರ ಬೆಳಿಗ್ಗೆ ಸ್ವಾಮಿಯವರನ್ನು ಮೂಡಲಹಿಪ್ಪೆ ದಾಖ್ಲೆ ಗದ್ದೆಹೊಸೂರು ಗ್ರಾಮದಲ್ಲಿರುವ ಸನ್ನಧಾನಕ್ಕೆ ಉತ್ಸವ ಸ್ವಾಮಿಯವರನ್ನು ಕಳಿಹಿಸಿಕೊಡಲಾಗುವುದು ಎಂದು ರಾಣಿ ಕುಲದ ಭಾಂದವರ ನೇತೃತ್ವದಲ್ಲಿ ನಡೆಯಲಿದೆ. 


 


 

 

 

 


Post a Comment

Previous Post Next Post