ಸಮ ಸಮಾಜದ ನಿರ್ಮಾಣಕ್ಕೆ ಪಣ ತೊಡಿ: ಶ್ರೀ ಶಂಭುನಾಥ ಸ್ವಾಮೀಜಿ ಕರೆ

ಹಾಸನ: ಜೀವನದಲ್ಲಿ ಬದಲಾವಣೆ ಕಾಣಬೇಕು, ಮೂಡ ನಂಬಿಕೆಗಳು ಕೊನೆಯಾಗಬೇಕು ಹಾಗೂ  ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ ಜಾತಿ ಬೇಧ ಭಾವನೆಗಳನ್ನು ಬಿಡಬೇಕು ಎಲ್ಲರನ್ನು ಸಮಾನ ಮನೋಭಾವೆಯಿಂದ ನೋಡುವ ಮೂಲಕ ಸಮ ಸಮಾಜ ನಿರ್ಮಾಣಕ್ಕೆ ಎಲ್ಲರೂ ಮುಂದಾಗಬೇಕಿದೆ ಎಂದು ಆದಿ ಚುಂಚನಗಿರಿ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಅವರು ತಿಳಿಸಿದರು. 



ನಗರದ ಹಾಸನಾಂಬ ಕಲಕ್ಷೇತ್ರದಲ್ಲಿ ನಡೆದ ೬ನೇ ಜಿಲ್ಲಾ ದಲಿತ ಹಾಗೂ ಜನಪರ ಸಾಹಿತ್ಯ ಸಮ್ಮೇಳನದ ಸಮಾರೋಪ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ  ಅವರು ಜನಪರ ಸಾಹಿತ್ಯ ಸಮ್ಮೇಳನಗಳು ಎಲ್ಲಾ ರೀತಿಯ ಸಾಂಸ್ಕೃತಿಕ ಚಿಂತನಗಳನ್ನು  ಅಡಕವಾಗಿರುವ ನಿಟ್ಟಿನಲ್ಲಿ ಸಮ್ಮೇಳಾಗಬೇಕು ಎಂದರು.

ಡಾ. ಬಿ.ಆರ್ ಅಂಬೇಡ್ಕರ್ ಭಾರತ ದೇಶದಲ್ಲಿ ಜನ್ಮ ತಳಲಿಲ್ಲ ಎಂದಿದ್ದಾರೆ ಸಮಾಜದಲ್ಲಿ ವ್ಯವಸ್ಥೆ ಹೇಗಿರುತ್ತಿತ್ತು ಎಂಬುದನ್ನು ಊಹಿಸಲು ಸಾಧ್ಯವಿಲ್ಲ. ವೇದಿಕೆ ಮೇಲೆ ಅನೇಕ ಚಿಂತಕರ ಬಗ್ಗೆ ಮಾತನಾಡುತ್ತೇವೆ ಆದರೆ ಅವರ ಚಿಂತನೆಗಳನ್ನು ನಾವು ಎಷ್ಟು ಮಟ್ಟಿಗೆ ಕಾರ್ಯಗತವಾಗಿ ಮಾಡುತ್ತೇವೆ ಎಂಬುದನ್ನು ತಿಳಿಯಬೇಕಿದೆ ಈ ನಿಟ್ಟಿನಲ್ಲಿ ಉತ್ತಮ ಮಾರ್ಗದರ್ಶಕರ ಚಿಂತನೆಗಳನ್ನು ಅಳವಡಿಕೊಳ್ಳಬೇಕು ಎಂದರು.

ಮನುಷ್ಯ ಜೀವನದಲ್ಲಿ ಎಲ್ಲವನು ಪಡೆದುಕೊಂಡಿರುವ ನಾವು ಅಂಬೇಡ್ಕರ್ ಕಂಡ ಕನಸು ನನಸು ಮಾಡುವಲ್ಲಿ  ಪ್ರಯೊಬ್ಬರೂ ಶ್ರಮವಹಿಸಬೇಕು ಈ ನಿಟ್ಟಿನಲ್ಲಿ ಆದಿಚುಂಚನಗಿರಿ ಮಹಾ ಮಠದ ಬಾಲಗಂಗಾದರನಾಥ ಸ್ವಾಮೀಜಿ ಕೂಡಾ ಅಮಭೇಡ್ಕರ್ ಆಶಯಗಳೋಂದಿಗೆ ಸಮ ಸಮಾಜದ ನಿರ್ಮಾಣದ ಕನಸು ಒತ್ತು ಬಂದು ಅವುಗಳನ್ನು ನನಸು ಮಾಡುವಲ್ಲಿ ಸಾಕಷ್ಟು ಶ್ರಮವಹಿಸಿದ್ದಾರೆ ಎಂದು ಅವರು ಹೇಳಿದರು. 

ಸಮಾರೋಪ ನುಡಿಗಳನ್ನಾಡಿದÀ ಪ್ರೊ. ಡಾ. ಎಲ್.ಎಲ್ ಮಲ್ಲೇಶಗೌಡ ಅವರು ಒಂದು ಮಹಾಕಾವ್ಯವನ್ನು ಬರೆಯುವ ಅರ್ಥವನ್ನು ಕೇವಲ ಎರಡು ಸಾಲುಗಳಲ್ಲಿ ನೀಡುವ ಶಕ್ತಿ ಸಾಹಿತ್ಯಕ್ಕೆ ಇದೆ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಚರ್ಚೆ ಆಗಬಹುದಾದ ಹಲವು ವಿಚಾರಗಳನ್ನು ಜಿಲ್ಲಾ ದಲಿತ ಹಾಗೂ ಜನಪರ ಸಾಹಿತ್ಯ ಸಮ್ಮೇಳನದಲ್ಲಿ  ಮಂಡಿಸಿದ್ದು  ದಲಿತ ಎಂಬ ಪದದಲ್ಲೇ ಜನಪರ ಎಂಬ ಅರ್ಥ ಹುದುಗಿದೆ ರೈತ ಹಾಗೂ ಕಾರ್ಮಿಕ ಸಮಾಜದ ನಿಜವಾದ ಶ್ರಮಿಕರು, ಶ್ರಮಿಕ ವರ್ಗದಲ್ಲಿ ನಿಜವಾದ ಸಾಹಿತ್ಯ ಒರಹೊಮ್ಮುತ್ತಿದೆ ಎಂದು ಅವರು ಅಭಿಪ್ರಾಯ ಪಟ್ಟರು.

ಹಿಂದಿನ ಕಾಲದಲ್ಲಿ ಭಾಷಣ ಕಲೆ ಸಾಹಿತ್ಯಿಕವಾಗಿತ್ತು ಇತ್ತೀಚಿನ ದಿನಗಳಲ್ಲಿ ಭಾಷಣ ಕಲೆ ಹಾಳಾಗಿದೆ ಮನುಷ್ಯನು ಧನ ದಾಹಕ್ಕೆ ಬಿದ್ದು ಅಪ್ರಸ್ಥುತನಾಗಿದ್ದಾನೆ ಇದರಿಂದ ಸಾಂಸೃತಿಕ, ಸಾಮಾಜಿಕ ಆಲೋಚನೆಗಳು ಸತ್ತು ಓಗಿವೆ ಇದು ಅಕ್ಷರಶಹ ಸತ್ಯವಾಗಿದೆ ಎಂದ ಅವರು ಕೃತಿಗಳು ನಮ್ಮ ಪೂರ್ವಿಕರ ಆಲೋಚನೆಗಳನ್ನು ಮತಿಸುವತ್ತ ಗಮನಹರಿಸುವುದು ಸೂಕ್ತವಾಗಿದೆ ಎಂದು ತಿಳಿಸಿದರು. 

ರೈತ ಕನಿಷ್ಟವಾಡದನ್ನು ತಾನು ಬಳಸಿಕೊಂಡು ಉತ್ತಮ ವಾದದನ್ನು ಸಮಾಜಕ್ಕೆ ನೀಡುವ ನಿಜವಾದ ನಿಸ್ವಾರ್ಥಿಯಾಗಿದ್ದಾನೆ ಎಂದ ಅವರು ಇತ್ತೀಚಿನ ದಿನಗಳಲ್ಲಿ ಕೆಲಸವನ್ನು ಕಲಿಯುವ ಬದಲಾಗಿ ಕೆಲಸವನ್ನು ಕದಿಯುವವರೇ ಹೆಚ್ಚಾಗುತ್ತಿರುವುದರಿಂದ ಸಮಾಜ ಬೇರೆ ದಿಕ್ಕಿನೆಡೆ ಸಾಗುತ್ತಿದೆ ಆದುದರಿಂದ ನಾವು ಸಕಾರಾತ್ಮಕ ಚಿಂತನೆಗಳೋAದಿಗೆ ಒಟ್ಟು ಸಮಾಜದ ನಿರ್ಮಾಣಕ್ಕೆ  ಮುಂದಾಗಬೇಕಾಗಿದೆ ಎಂದರು. 

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಮಹಾನಾಯಕ ಅಂಭೇಡ್ಕರ್ ಸಾಧಾನ ಗೌರವ ನೀಡಿ ಸನ್ಮಾನಿಸಲಾಯಿತು 

ಸಮಾರಂಭದಲ್ಲಿ ಸಮ್ಮೇಳನಾದ್ಯಕ್ಷ ಜಿ.ಓ ಮಹಾಂತಪ್ಪ, ಸಮಾಜಸೇವಕ ಹಾಗೂ ಹಿರಿಯ ವೈದ್ಯ ಡಾ|| ಗುರಾಜ ಹೆಬ್ಬಾರ್, ಕಸಪ ಜಿಲ್ಲಾ ಮಾಜಿ ಅಧ್ಯಕ್ಷ ಬಿ.ಎನ್ ರಾಮಸ್ವಾಮಿ, ನೌಕರರ ಸಂಘದ ಜಿಲ್ಲಾಧ್ಯಕ್ಷ ಕೃಷ್ಣೇಗೌಡ, ನಾಗಭೂಮಿ ವಿವಿದೋದ್ದೇಶ ರ್ಸಸ್ಥೆಯ ಅಧ್ಯಕ್ಷ ನಾಗರಾಜ್ ಹೆತ್ತೂರು ಇತರರು ಇದ್ದರು. 


Post a Comment

Previous Post Next Post