ಹಾಸನ: ಉತ್ತಮ ಆರೋಗ್ಯ ವೃದ್ದಿಗೆ ಹಾಸ್ಯ ಸಹಕಾರಿಯಾಗಿದೆ ಎಂದು ಪ್ರಸಿದ್ಧ ಹಾಸ್ಯ ಸಾಹಿತಿ ಹಾಗೂ ಅಂಕಣಕಾರ ಡಾ.ಕೆ.ಪಿ.ಪುತ್ತೂರಾಯ ತಿಳಿಸಿದರು.
ನಗರದ ಜ್ಯೂವೆಲ್‍ರಾಕ್ ಹೊಟೇಲ್ ಸಭಾಂಗಣದಲ್ಲಿ ಮನೆ ಮನೆ ಕವಿಗೋಷ್ಠಿ, ಡಾ.ಉದಯರವಿ ಸ್ನೇಹ ಬಗಳದ ವತಿಯಿಂದ ಸ್ಥಿತಪ್ರಜ್ಞ ಉದಯರವಿ ಬದುಕು ಬರಹ ಕೃತಿ ಪರಿಚಯ ಮತ್ತು ಕೃಜ್ಞತಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,ಪ್ರತಿಯೊಬ್ಬರ ಮನಸ್ಸು ಸ್ಥಿತ ಪ್ರಜ್ಞರಂತೆ ಇದ್ದರೆ ಅಂದು ಕೊಂಡ ಗುರಿಯನ್ನು ತಲುಪಬಹುದು. ಡಾ. ಉದಯರವಿ ಅವರ ಕಾರ್ಯಪ್ರವೃತ್ತಿ ಗಮನಿಸಿದರೆ ಇವರ ಅಭಿನಂದನಾ ಗ್ರಂಥಕ್ಕೆ ಇಟ್ಟಿರುವ ಸ್ಥಿತಪ್ರಜ್ಞ ಹೆಸರು ಅರ್ಥಪೂರ್ಣವಾಗಿದೆ ಎಂದು ಅಭಿಪ್ರಾಯ ಪಟ್ಟರು.
ಮನುಷ್ಯ ಯಾವಗಲೂ ನಗು ನಗುತ್ತಾ ಇರಬೇಕು. ಹಾಸ್ಯಕ್ಕೆ ನಗಿಸುವ ಶಕ್ತಿ ಇದೆ. ಆದರೆ ಮನುಷ್ಯರಾದ ನಾವು ನಗುವ ನಾವು ನಗುವ ಮನೋಭಾವವನ್ನು ಬೆಳೆಸಿಕೊಂಡಾಗ ಮಾನಸಿಕ ,ಭೌಧಿಕ ಹಾಗೂ ಶಾರೇರಿಕ ಸಂತೋಷ ಕಾಣಲು ಸಾಧ್ಯ ಎಂದರು.
ಭಾಷಣಕಾರರಿಗೆ ಸಮಯ, ಸಭಾ ಹಾಗೂ ಸಂದರ್ಭ ಪ್ರಜ್ಞೆ ಅತೀ ಮುಖ್ಯವಾಗಿರಬೇಕು ಎಂದ ಅವರು ವಿವಿಧ ಘಟನೆಗಳಿಗೆ ಹಾಸ್ಯ ತುಣುಕು ಸೇರಿಸಿಗೆ ನೆರೆದಿದ್ದವರು ನಗೆ ಬೀರುವಂತೆ ಮಾಡಿದ್ದು ವಿಶೇಷವಾಗಿತ್ತು
ಕಾರ್ಯಕ್ರಮದಲ್ಲಿ ವಿವಿಧ ಕವಿಗಳು ಕಾವ್ಯ ವಾಚನ ಮಾಡಿದರು. ಕೃತಿ ಕುರಿತು ಮಂಡ್ಯ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಜಿಲ್ಲಾಧ್ಯಕ್ಷ ಡಾ.ಹೆಚ್.ಎಸ್. ಮುದ್ದೇಗೌಡ ಮಾತನಾಡಿದರು. ಸಮಾಜ ಸೇವಕ ಟಿ.ಆರ್. ಪ್ರಸಾದ್‍ಗೌಡ, ಸಾಂಸ್ಕøತಿಕ ಟ್ರಸ್ಟ್‍ನ ಅಧ್ಯಕ್ಷ ಡಾ.ಸಿ.ಸಿ.ರಾ, ಯುವ ಕವಿ ಕೃಷ್ಣಹಾನ್‍ಬಾಳ್ ಶಾಂತ ಅತ್ನಿ ,ವಿವಿಧ ಕವಿಗಳು, ಕವಯಿತ್ರಿಗಳು ಭಾಗವಹಿಸಿದ್ದರು.
Tags
ಹಾಸನ
