ಹಾಸನ: ಬೆಳಗೋಡು ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಕ್ಷೇತ್ರವಾಗಿ ಉಳಿಯದಿದ್ದರೇ ನಾಳೆಯಿಂದಲೇ ಅಹೋರಾತ್ರಿ ಧರಣಿ ಮತ್ತು ಮುಂದೆ ನಡೆಯುವ ಎಲ್ಲಾ ಚುನಾವಣೆಯನ್ನು ಈ ಕ್ಷೇತ್ರದಲ್ಲಿ ಬಹಿಷ್ಕಾರ ಮಾಡುವುದಾಗಿ ಕರ್ನಾಟಕ ಸಿಂಹ ಸೇನೆ ಜಿಲ್ಲಾಧ್ಯಕ್ಷ ಬಿ.ಎನ್. ಬಸವರಾಜು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ಸಕಲೇಶಪುರ ತಾಲೂಕು ಆಡಳಿತವು ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯಿತಿ ಕ್ಷೇತ್ರಗಳ ಪುನರ್ ರಚನೆ, ಪುನರ್ ವಿಂಗಡಣೆ ವರದಿಯನ್ನು ಸಲ್ಲಿಸಲಾಗಿದ್ದು, ಮೊದಲಿನ ತಾಲೂಕು ಪಂಚಾಯಿತಿ ಬೆಳಗೋಡು ಕ್ಷೇತ್ರ ಯಡೇಹಳ್ಳಿ ಕ್ಷೇತ್ರವನ್ನಾಗಿ ಹಾಗೂ ಮೊದಲಿನ ಜಿಲ್ಲಾ ಪಂಚಾಯತಿ ಬೆಳಗೋಡು ಕ್ಷೇತ್ರ ಉದಯವಾರ ಕ್ಷೇತ್ರವನ್ನಾಗಿ ಹೆಸರು ಬಳಸಲಾಗುತ್ತಿದೆ. ಇದರಿಂದ ಒಂದು ಹೋಬಳಿ ಕೇಂದ್ರದ ಹೆಸರನ್ನು ಬಿಟ್ಟು ಇನ್ನೊಂದು ಗ್ರಾಮದ ಹೆಸರನ್ನು ಸೂಚಿಸುವುದರಿಂದ ಬಹಳ ದೀರ್ಘ ಕಾಲ ಇತಿಹಾಸವಿರುವ ಮತ್ತು ಸಾರ್ವಜನಿಕರಿಗೆ ಅನುಕೂಲವಿರುವ ಬೆಳಗೋಡು ಹೋಬಳಿ ಕೇಂದ್ರದ ಹೆಸರು ಇಲ್ಲದೆ ಅದರ ಮಹತ್ವ ಕಳೆದುಕೊಳ್ಳಲಿದೆ ಎಂದು ಅಸಮಧಾನವ್ಯಕ್ತಪಡಿಸಿದರು. ರಾಜ್ಯ ಚುನಾವಣಾ ಆಯೋಗದ ನಡುವಳಿಗಳಲ್ಲಿ. ಕ್ಷೇತ್ರ ವಿಂಗಡನಾ ಕಾರ್ಯವು ಬಹಳ ಪ್ರಮುಖವಾದದ್ದು ಹಾಗೂ ಜಠಿಲವಾದುಗಿದ್ದು, ಇದನ್ನು ಪಾರದರ್ಶಕವಾಗಿ ಮತ್ತು ಸಾರ್ವಜನಿಕರಿಗೆ ಅನುಕೂಲವಾಗುವಂತೆ ಮಾಡಬೇಕು ಎಂಬುವು ಕೂಡ ಉಲ್ಲಂಘನೆಯಾಗಿದೆ ಎಂದು ದೂರಿದರು. ಒಂದು ತಾಲೂಕು ಪಂಚಾಯಿತಿ ಕ್ಷೇತ್ರವನ್ನು ವಿಂಗಡಿಸುವಾಗ ಭೌಗಳಿಕವಾಗಿ ಹೊಂದಿಕೊAಡAತೆ ಇರುವಾಗೆ ನೋಡಿಕೊಳ್ಳಬೇಕು. ಕೂಡಲೇ ಹೆಸರು ಬದಲಾವಣೆ ಆಗಿರುವುದನ್ನು ಸರಿಪಡಿಸುವಂತೆ ಕೋರಿದರು. ಇದೆ ವಿಚಾರವಾಗಿ ಕಳೆದ ತಿಂಗಳು ಬೆಳಗೋಡು ಕೇಂದ್ರವನ್ನೇ ಬಂದ್ ಮಾಡಿ ಗಮನಸೆಳೆಯಲಾಗಿತ್ತು. ಆದರೇ ಇದುವರೆಗೂ ಯಾವ ಗಮನ ನೀಡಿರುವುದಿಲ್ಲ. ಬೆಳಗೋಡು ಜಿಲ್ಲಾ ಮತ್ತು ತಾಲೂಕು ಪಮಚಾಯಿತಿ ಕ್ಷೇತ್ರವನ್ನಾಗಿ ಉಳಿಯಬೇಕು ಎಂದು ಒತ್ತಾಯಿಸಿದರು. ಏನಾದರೂ ನಮ್ಮ ಮನವಿಗೆ ಸ್ಫಂದಿಸದಿದ್ದರೇ ನಾಳೆ ಶನಿವಾರದಿಂದಲೇ ಅಹೋರಾತ್ರಿ ಹೋರಾಟ ಮಾಡಿ ಮುಂದೆ ನಡೆಯುವ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆಯನ್ನು ಬಹಿಷ್ಕಾರ ಮಾಡುವುದಾಗಿ ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಪಂಚಾಯಿತಿ ಸದಸ್ಯರಾದ ಯಡೇಹಳ್ಳಿ ಆರ್. ಮಂಜುನಾಥ್, ಜೆಡಿಎಸ್ ಮುಖಂಡ ಕೆ.ಎಲ್. ಮಂಜಪ್ಪಗೌಡ, ಬಿಜೆಪಿ ಮುಖಂಡ ಇ.ಎಸ್. ಲೋಕೇಶ್ ಕುಮಾರ್, ಕಾಂಗ್ರೆಸ್ ಮುಖಂಡ ಶೇಖರ್, ದೊಡ್ಡೀರಯ್ಯ ಇತರರು ಉಪಸ್ಥಿತರಿದ್ದರು.