ಹಾಸನ ಕಸಾಪ ಅಧ್ಯಕ್ಷ ಸ್ಥಾನಕ್ಕೆ ಜಾವಗಲ್ ಪ್ರಸನ್ನಕುಮಾರ್ ನಾಮಪತ್ರ ಸಲ್ಲಿಕೆ

ಹಾಸನ: ಮೇ.೯ ರಂದು ನಡೆಯಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸ್ಥಾನಕ್ಕೆ ಜಾವಗಲ್ ಪ್ರಸನ್ನಕುಮಾರ್ ರವರು ಬುಧವಾರದಂದು ಮದ್ಯಾಹ್ನ  ತಹಸೀಲ್ದಾರ್ ಶಿವಶಂಕರಪ್ಪ ರವರಿಗೆ ನಾಮಪತ್ರ ಸಲ್ಲಿಸಿದರು. 



        ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಪ್ರೀತಿ, ವಿಶ್ವಾಸ, ಸಹಕಾರದಿಂದ ೨೫ ವರ್ಷಗಳಿಂದಲೂ ಕನ್ನಡದ ಕೆಲಸಗಳನ್ನು ಮಾಡುತ್ತಾ ಬಂದಿದ್ದೇನೆ. ನೀವುಗಳು ತೋರಿದ ಅಭಿಮಾನದಿಂದ ನಿರಂತರವಾಗಿ ಕನ್ನಡ ಸಾಹಿತ್ಯ ಮತ್ತು ಸಂಸ್ಕöÈತಿ ಸಂಘಟನೆಯನ್ನು ಮಾಡಲು ಅವಕಾಶವಾಯಿತು, ಅಷ್ಟು ಮಾಡಲು ಕಾರಣರು ಎಂದಿಗೂ ನೀವೆ. ನಿಮ್ಮಂತಹ ಸಜ್ಜನ ಸಾಹಿತ್ಯ ಪ್ರೇಮಿಗಳ, ಹಿರಿಯರ, ಹಾಗೂ ನನ್ನ ಆತ್ಮೀಯ ಸ್ನೇಹಿತರ ಒತ್ತಾಸೆಯ ಮೇರೆಗೆ ೨೦೨೧ ಮೇ ೯ ರಂದು ನೆಡೆಯುವ ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನದ ಚುನಾವಣೆಗೆ ಸ್ಫರ್ಧಿಸಲು ತೀರ್ಮಾನಿಸಿ ನಾಮಪತ್ರ ಸಲ್ಲಿಸಲಾಗಿದೆ ಎಂದರು. ಈಗಾಗಲೇ ಜಿಲ್ಲಾದ್ಯಾಂತ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರು ಹಾಗೂ ಮುಖಂಡರುಗಳನ್ನು ಭೇಟಿ ಮಾಡಿ ಬೆಂಬಲವನ್ನು ಕೋರಿದ್ದು, ನಿಮ್ಮಗಳ ಆಶೀರ್ವಾದ ನಮ್ಮಗಳ ಮೇಲೆ ಸದಾ ಇರಲಿ ಎಂದು ಕೋರಿದರು.

      ಇದೆ ವೇಳೆ ಅರಸೀಕೆರೆ ತಾಲ್ಲೂಕು ಕಸಾಪ ಅಧ್ಯಕ್ಷರಾದ ಕೆ.ವಿ. ಶಿವಮೂರ್ತಿ, ಚನ್ನರಾಯಪಟ್ಟಣದ ಕನ್ನಡಪರ ಸಂಘಟಕರಾದ ಮುಳುಕೆರೆ ಪ್ರಕಾಶ್, ಐ.ಕೆ. ಮಂಜುನಾಥ್, ಜಾವಗಲ್ ಹೋಬಳಿ ಕಸಾಪ ಮಾಜಿ ಅಧ್ಯಕ್ಷರಾದ ಜಾ.ಸ. ಕೃಷ್ಣಮೂರ್ತಿ, ಆನಂದಕೌಶಿಕ್, ಜಾಜೂರು ಶೇಖರಣ್ಣ, ಗಂಡಸಿ ಸಂಜೀವ, ಸಾಹಿತಿ ಮಮತ ಅರಸೀಕೆರೆ, ಹೊಳೆನರಸೀಪುರ ವಕೀಲರಾದ ಅಂಬರೀಶ್, ಮುಖಂಡರಾದ ಜಯರಾಜ್ , ಜೆ.ಜಿ.ಲೋಕೇಶ್, ಜೆ.ಎನ್.ಅಶ್ವಥ್ ಇತರರÀÄ ಉಪಸ್ಥಿತರಿದ್ದರು.


Post a Comment

Previous Post Next Post